ಕನ್ನಡ ಸಿನಿಮಾಗಳಿಂದ ಕನ್ನಡ ರಾಜ್ಯೋತ್ಸವಕ್ಕೆ ಮತ್ತಷ್ಟು ಮೆರಗು

somashekhar
    
 ಬೆಂಗಳೂರು: ಈ ನವೆಂಬರ್ ತಿಂಗಳೇ ಹಾಗೆ, ಏಗೆಂದರೆ ಕನ್ನಡದ ಕಂಪನ್ನು ಹೆಚ್ಚಿಸುವುದು, ಕನ್ನಡತನದ ಖದರ್ ಅನ್ನು ಪ್ರಪಂಚಕ್ಕೆ ಪರಿಚಯಿಸುವುದು. ಹೌದು ಈಗೇನಾಯಿತು? ಶುಕ್ರವಾರ ನವೆಂಬರ್ 01 ಆಗಿದ್ದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ವನ್ನು ವಿಜೃಂಭಣೆಯಿಂದ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಹೌದು ರಾಜ್ಯದ ಮೂಲೆ ಮೂಲೆಯಲ್ಲೂ, ಕನ್ನಡಿಗರ ವಾಟ್ಸ್ಆ್ಯಪ್ ಫೇಸ್ ಬುಕ್ ಡಿಪಿ ಮತ್ತು ಸ್ಟೇಟಸ್ ಗಳಲ್ಲೂ, ಎಲ್ಲೆಲ್ಲೂ ಕನ್ನಡ ಕನ್ನಡ ಕನ್ನಡ. ಹಳ್ಳಿಯಲ್ಲಿ ಏಕಾಂಗಿ ಯಾಗಿದ್ದ ಕಂಬದಿಂದ ಹಿಡಿದು ಬೆಂಗಳೂರಿನ ಪ್ರತಿ ಆಟೋ ಬಸ್ ಗಳ ವರೆಗೂ ಕನ್ನಡಾಂಬೆಯ ಭಾವುಟ  ಹಾರಾಡಿವೆ.


ಇಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಿಂದಲೂ ಸಹ ಈ 64ನೇ ಕನ್ನಡ ರಾಜ್ಯೋತ್ಸವಕ್ಕೆ ದೊಡ್ಡ ಮಟ್ಟದ ಉಡುಗೊರೆಯೇ ಸಿಕ್ಕಿದೆ.  64ನೇ  ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಬೆಳೆಸೋಣ ಕನ್ನಡ’ ಅನ್ನೋ ಹೊಸ ದೃಶ್ಯಗೀತೆಯನ್ನ ಅಶ್ವಿನಿ ಆಡಿಯೋ ಕಂಪೆನಿ ಹೊರತಂದಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಾಹಿತ್ಯ, ಸಂಗೀತದಲ್ಲಿ ಈ ಹಾಡು ಮೂಡಿ ಬಂದಿದೆ. ಸಚಿವರಾದ ಸಿ.ಟಿ.ರವಿ , ಹಾಸ್ಯ ನಟ ಕೋಮಲ್, ಜೆಕೆ, ಧರ್ಮ ಕೀರ್ತಿರಾಜ್ ಹಾಗೂ ಉದ್ಯಮಿ ಪ್ರಶಾಂತ್ ಸಂಬರ್ಗಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ನೀರ್​ದೋಸೆ ಚಿತ್ರದ ಚಂದುಳ್ಳಿ ಚೆಲುವೆ,  ಹರಿಪ್ರಿಯಾ ನಟನೆಯ ಕನ್ನಡ್ ಗೊತ್ತಿಲ್ಲ ಅನ್ನೋ ಸಿನಿಮಾದಲ್ಲೂ ಕನ್ನಡದ ಬಗ್ಗೆ ದನಿ ಎತ್ತಲಾಗಿದೆ. ಪರಭಾಷೆಗಳವರ ಹಾವಳಿಯಿಂದ ಮತ್ತೊಮ್ಮೆ ಗೋಕಾಕ್ ಚಳುವಳಿಯಂತಹ ಇತಿಹಾಸದ ದಿನಗಳು ಮರುಕಳಿಸಿದರೂ ಅಚ್ಚರಿಯಿಲ್ಲ ಅನ್ನೋ ಡೈಲಾಗ್ ನಿಜವಾಗೋ ದಿನಗಳು ದೂರ ಉಳಿದಿಲ್ಲ. ಹಾಗಾಗಿ ಕನ್ನಡ ನಾಡು, ನುಡಿ, ಜಲ ಹಾಗೂ ಭಾಷೆಗಾಗಿ ಎಲ್ಲರೂ ಕೈಜೋಡಿಸೋ ಅವಶ್ಯಕತೆಯಿದೆ. ಇನ್ನು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ತಮ್ಮ ತಂದೆ ರಾಜ್ ಕುಮಾರ್ ಅವರ ಸಮಾಧಿ ಮತ್ತು ಅಂಬಿ ಸಮಾಧಿಗೆ ಭೇಟಿ ನೀಡಿ ಗೌರವ ಸಮರ್ಪಿಸಿದ್ದಾರೆ.  ರಂಗನಾಯಕಿ ಮತ್ತು ದಂಡುಪಾಳ್ಯಂ-4 ಸಿನಿಮಾಗಳು ಕೂಡ ರಾಜ್ಯೋತ್ಸವಕ್ಕೆ ಬಿಡುಗಡೆಯಾಗಿವೆ. ಒಟ್ಟಿನಲ್ಲಿ ಈ ಬಾರಿಯ ರಾಜ್ಯೋತ್ಸವಕ್ಕೆ ಚಿತ್ರತಂಡ ದೊಡ್ಡ ಉಡುಗೊರೆಯೇ ನೀಡಿದಂತಾಗಿದೆ.


Find Out More:

Related Articles: