ಭಾರತೀಯರಿಗೆ ಸಮಾಧಾನ ತಂದ ಮೋದಿ,

somashekhar
ನವದೆಹಲಿ: ಹೈನುಗಾರಿಕೆ, ವಾಣಿಜ್ಯ ಮತ್ತು ರೈತರಿಗೆ ಕುತ್ತಾಗುತ್ತಿದ್ದ ಆರ್. ಸಿ. ಇ. ಪಿ ಅಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕದೆ, ಇದು ಭಾರತಕ್ಕೆ ಮಾರಕವಾಗಲಿದೆ ಎಂದು ಘೋಷಿಸಿ, ರೈತರ ಪರ ನಿಂತಿ ಭೇಷ್ ಎನಿಸಿಕೊಂಡಿದ್ದಾರೆ.
 
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಭಾರತಕ್ಕೆ ಮಾರಕ, ಆರ್‌ಸಿಇಪಿ ಒಪ್ಪಿದ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂದಿದ್ದಾರೆ. 'ಭಾರತೀಯರ ಹಿತಾಸಕ್ತಿಗೆ ಸಂಬಂಧಿಸಿದಂತೆ ಆರ್‌ಸಿಇಪಿ ಒಪ್ಪಂದ ಅಳೆಯಲು ಸಾಧ್ಯವಿಲ್ಲ'. ಒಪ್ಪಂದದಲ್ಲಿರುವ ಸುಂಕ ನೀತಿಯನ್ನು ಕಟುವಾಗಿ ವಿರೋಧಿಸಿದ ಪ್ರಧಾನಿ ಮೋದಿ. ಆರ್‌.ಸಿ.ಇ.ಪಿ ಒಪ್ಪಂದದ ಪ್ರಸ್ತುತ ರೂಪ ಮೂಲ ಮನೋಭಾವ ಮತ್ತು ಈ ಹಿಂದೆ ಒಪ್ಪಿದ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿದ್ದಾರೆ.

ಭಾರತೀಯರ ಹಿತಾಸಕ್ತಿಗೆ ಸಂಬಂಧಿಸಿದಂತೆ ಆರ್‌ಸಿಇಪಿ ಒಪ್ಪಂದವನ್ನು ಅಳೆದರೆ ಸಕಾರಾತ್ಮಕ ಉತ್ತರ ಸಿಗುವುದಿಲ್ಲ ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ ನುಡಿದಿದ್ದಾರೆ. ಒಂದು ವೇಳೆ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದರೆ ಭಾರತೀಯ ಮಾರುಕಟ್ಟೆಯಲ್ಲಿ ಚೀನಿ ವಸ್ತುಗಳದ್ದೇ ದರ್ಬಾರು ಶುರುವಾಗುವ ಭೀತಿ ಇದೆ. ಇದು ದೇಶದ ರೈತ, ಕಾರ್ಮಿಕ ವರ್ಗಕ್ಕೆ ಒಳ್ಳೆಯ ದಾಗುವುದಿಲ್ಲ. ಒಪ್ಪಂದದಲ್ಲಿರುವ ಸುಂಕ ನೀತಿಯನ್ನು ಕಟುವಾಗಿ ವಿರೋಧಿಸಿರುವ ಪ್ರಧಾನಿ ಮೋದಿ, ಇದು ಭಾರತಕ್ಕೆ ಮಾರಕವಾದ ಒಪ್ಪಂದ ಎಂಬುದರಲ್ಲಿ ಯಾವುದೇ ಅನುಮಾನ ಉಳಿದಿಲ್ಲ ಎಂದು ಚುಚ್ಚಿದರು.

ಒಟ್ಟು 16 ರಾಷ್ಟ್ರಗಳ ವಿಶ್ವದ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದವಾಗಿರುವ ಆರ್‌ಸಿಇಪಿಗೆ, ಭಾರತ ಸಹಿ ಮಾಡಬಾರದು ಎಂದು ವಿಪಕ್ಷಗಳು ಒಕ್ಕೊರಲಿನಿಂದ ಮೋದಿ ಸರ್ಕಾರವನ್ನು ಆಗ್ರಹಿಸಿದ್ದವು. ಆರ್. ಸಿ. ಇ. ಪಿ ಒಪ್ಪಂದವನ್ನು ರಾಷ್ಟ್ರದ ಅನೇಕ ತಜ್ಞರು ವಿರೋಧಿ ಸಿದ್ದರು. ಇದರಿಂದ ರೈತರಿಗೆ ಅದರಲ್ಲೂ ಹೈನುಗಾರಿಕೆಗೆ ಅತಿದೊಡ್ಡ ಕುತ್ತಾಗಲಿದೆ ಎಂದು ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇದನ್ನು ಕಟುವಾಗಿ ಟೀಕಿಸಿ, ಇದನ್ನು ಒಪ್ಪಂದ ಮಾಡಿಕೊಳ್ಳಲೇ  ಬಾರದು ಎಂದಿದ್ದರು. ಇದೀಗ ಪ್ರಧಾನಿ ನಮೋ ಒಪ್ಪಂದದ ಭಾಗಿಯಾಗುವುದಿಲ್ಲ ಎಂದು ಘೋಷಿಸಿದ್ದಾರೆ. 


Find Out More:

Related Articles: