ಮಂಡ್ಯ: ಕಳೆದ ಮೂರು ತಿಂಗಳ ಹಿಂದೆ ನಡೆದ ಆಪರೇಷನ್ ಕಮಲದಿಂದ ಸರ್ಕಾರವೇ ಉರುಳಿತ್ತು. ಬಿ. ಎಸ್ ಯಡಿಯೂರಪ್ಪ ನವರ ಮುಖದಲ್ಲಿ ಮಂದಹಾಸ ಮೂಡಿತ್ತು. ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಇದೀಗ ಆಪರೇಷನ್ ಕಮಲದ ಅಸಲೀ ಕತೆಯನ್ನು ಜೆಡಿಎಸ್ ಅನರ್ಹ ಶಾಸಕ ಬಹಿರಂಗ ಪಡಿಸಿದ್ದಾರೆ.
ನನ್ನ ರಾಜೀನಾಮೆಗೂ ಮೊದಲು ಬಿಎಸ್ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿರುವುದಾಗಿ ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಅವರು ಹೇಳಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಬೂಕನ ಕೆರೆಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾದರೆ ಅದನ್ನು ಹಾಸನಕ್ಕೆ ತೆಗೆದುಕೊಂಡು ಹೋಗು ತ್ತಿದ್ದರು ಎಂದು ಅವರು ಮೈತ್ರಿ ಸರ್ಕಾರದ ವಿರುದ್ಧ ಆರೋಪ ಮಾಡಿದರು. ಇನ್ನು ಯಡಿಯೂರಪ್ಪ ಸಿಎಂ ಆಗುತ್ತಿದ್ದಾರೆ ನಿಮ್ ಅಭಿಪ್ರಾಯ ಏನು ಎಂದು ಕೇಳಿದರು. ಕೆಲವರು ಬಂದು ನನ್ನ ಯಡಿಯೂರಪ್ಪ ಅವರ ಮನೆಗೆ ಕರೆದುಕೊಂಡು ಹೋದರು ಎಂದು ಅವರು ತಿಳಿಸಿದರು.
ಅಂತೆಯೇ ಐದು ಗಂಟೆ ಸುಮಾರಿ ಗೆ ನಾನು ಅವರ ಮನೆಗೆ ಹೋದೆ. ಆಗ ಅವರು ಏನಪ್ಪಾ ಮುಖ್ಯಮಂತ್ರಿ ಆಗೋ ಅವಕಾಶ ಇದೆ. ನನ್ನ ತಂದೆ ವೀರಭದ್ರ ಸ್ವಾಮಿ ಪೂಜೆ ಮಾಡಿಕೊಂಡು ಬೆಳೆಸಿದ್ದಾರೆ. ಆದರೆ, ಕೆ. ಆರ್. ಪೇಟೆ ತಾಲೂಕು ಅಭಿವೃದ್ಧಿಯಾಗಿಲ್ಲ ಎಂದು ಸ್ವಪ್ನದಲ್ಲಿ ಬಂದು ಕಾಡುತ್ತಿದ್ದಾರೆ. ನೀನು ಕೈ ಜೋಡಿಸಿದರೆ ಕೆ.ಆರ್.ಪೇಟೆ ಅಭಿವೃದ್ಧಿ ಮಾಡೋಣ. ಏನಂತೀಯ ಎಂದರು. ಅದಕ್ಕೆ ನಾನು ತಾಲೂಕಿನ ಅಭಿವೃದ್ದಿಗಾಗಿ 7೦೦ ಕೋಟಿ ಅನುದಾನ ಕೇಳಿದ್ದೆ. ಆದರೆ ಯಡಿಯೂರಪ್ಪನವರು ಸಾವಿರ ಕೋಟಿ ಕೊಡುತ್ತೇನೆ ಅಂದರು.
ಅದ್ರಂತೆ ನಮ್ಮ ತಾಲೂಕಿನ ಅಭಿವೃದ್ದಿಗೆ ಸಾವಿರ ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಶಾಸಕ ನಾರಾಯಣಗೌಡ ಅವರು ನುಡಿದರು.
ಇದರ ಮೂಲಕ ಆಪರೇಷನ್ ಕಮಲದ ವಿವಿಧ ಒಪ್ಪಂದ ಗಳೆಲ್ಲಾ ಒಂದೋದಾಗಿಯೇ ಬದಯಲಾಗುತ್ತಿವೆ. ನೂರಾರು ಕೋಟಿಗಳ ಒಪ್ಪಂದ ಗಳೆಲ್ಲಾ , ಇದೀಗ ಒಂದೊಂದಾಗಿಯೇ ಪೂರೈಸುತ್ತಿದ್ದಾರೆ ಮುಖ್ಯಮಂತ್ರಿಗಳು.