ಬೆಳಗಾವಿಯಲ್ಲಿ ಸಾಹುಕಾರರ ಸಮರ

somashekhar
ಬೆಳಗಾವಿ: ರಾಜ್ಯದ ಗಡಿ ಭಾಗವಾದ ಬೆಳಗಾವಿಯಲ್ಲಿ ಸಾಹುಕಾರರ ಸಮರ ಮತ್ತೇ ಶುರುವಾಗಿದೆ. ಶಾಸಕ ಸತೀಶ್ ತಮ್ಮ ರಮೇಶನ ಮೇಲೆ ಮತ್ತೇ ತೊಡೆತಟ್ಟಿದ್ದಾರೆ. ಹೌದು, ಇವರಿಬ್ಬರ ಸಮರ ದಿಂದ ಮತದಾರ ಪ್ರಭು ಯಾರಿಗೆ ಮತ ಹಾಕುತ್ತಾರೆ ಎಂಬುದೇ ತಿಳಿಯದಂತಾಗಿದೆ. ರಮೇಶ್ ಜಾರಕಿಹೊಳಿ ದೆಹಲಿಯ ಕೆಲವು ಕಾಂಗ್ರೆಸ್ ಮುಖಂಡರ ಮೂಲಕ ದುರ್ಬಲ ಅಭ್ಯರ್ಥಿಗೆ ಗೋಕಾಕ್‌ನಲ್ಲಿ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಗೋಕಾಕ್‌ನಲ್ಲಿ ಲಖನ್ ಜಾರಕಿಹೊಳಿ‌ ಸಮರ್ಥ ಅಭ್ಯರ್ಥಿ ಎಂದು ಟಿಕೆಟ್ ಕೊಡಲಾಗುತ್ತಿದೆ. ಹೊರಗಿನವರು ಚುನಾವಣೆ ಮಾಡುವುದು ಗೋಕಾಕ್‌ನಲ್ಲಿ ಬಹಳ ಕಷ್ಟ. ಅಶೋಕ ಪೂಜಾರಿ ಮೂರು ಬಾರಿ ಪ್ರಯತ್ನ ಮಾಡಿ ಸೋತಿದ್ದಾರೆ. ರಮೇಶ್ ಆ್ಯಂಡ್ ಟೀಮ್ ಲಖನ್ ಜಾರಕಿಹೊಳಿ ಬದಲಾಗಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿಯಲ್ಲಿರುವ ಕೆಲವು ಕಾಂಗ್ರೆಸ್ ಮುಖಂಡರ ಮೂಲಕ ದುರ್ಬಲ ಅಭ್ಯರ್ಥಿಗೆ ಗೋಕಾಕ್‌ನಲ್ಲಿ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಮೇಶ್ ಜಾರಕಿಹೊಳಿ‌ ಅವರ ಪ್ರಯತ್ನ ಯಶಸ್ವಿಯಾಗಲ್ಲ ಎಂದು ಕಿಡಿಕಾರಿದರು. ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಖಚಿತ ಎಂದ ಅವರು ಇನ್ನೆರಡು ದಿನಗಳೊಳಗೆ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದರು. ಬಿಜೆಪಿ ಸರಕಾರ ಅನರ್ಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡುತ್ತಿದೆ. ಅನರ್ಹರಿಂದ ಸರಕಾರ ಬಂದಿದ್ದಕ್ಕೆ ಅವರಿಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನ ನಾವು ಸ್ವಾಗತ ಮಾಡಿದ್ದೇವೆ. ಬಹಳ ದಿನಗಳಿಂದ ಚುನಾವಣೆ ಬಂದಾಗ ಇದನ್ನ ಬಳಸಿಕೊಳ್ಳುತ್ತಿದ್ದರು. ಬಿಜೆಪಿಯವರು ಎನೂ ಮಾಡಿಲ್ಲ ಕೋರ್ಟ್ ಅವರ ಕಡೆಯಿಲ್ಲ. ಇದು ಜನರ ತೀರ್ಪು ಇದು, ಯಾರಿಗೂ ಇದರಲ್ಲಿ ಅನ್ಯಾಯ ಆಗಿಲ್ಲ ಎಂದಿದ್ದಾರೆ. 

ಪ್ರಸ್ತುತ ರಾಜ್ಯದಲ್ಲಿನಡೆಯುತ್ತಿರುವ ಈ ಉಪಚುನಾವಣೆ ಎರಡು ಪಕ್ಷಗಳಿಗೂ ಮಹತ್ವದ್ದಾಗಿದೆ. ಸಾಹುಕಾರ ರಮೇಶ್ ಜಾರಕಿಹೊಳಿ ಗೆದ್ದೇ ಗೆಲ್ಲುತ್ತೇನೆ, ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ ಚುನಾವಣಾ ಫಲಿತಾಂಶ ಏನಾಗುತ್ತದೆ ಕಾದು ನೋಡಬೇಕಾಗಿದೆ.

Find Out More:

Related Articles: