ಹೊಸಕೋಟೆಯ ಎಂಟಿಬಿಗೆ ಬಚ್ಚೇಗೌಡ ಡಿಚ್ಚಿ

somashekhar

    
ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಿಸಿ ಕೊನೆಗೂ ಬಿ. ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ 15 ಶಾಸಕರ ಪೈಕಿ ನನ್ನ ಹೃದಯ ಸೀಳಿದರೆ ಸಿದ್ದರಾಮಯ್ಯ ಅವರೇ ಕಾಣುತ್ತಾರೆ ಎನ್ನುತ್ತಿದ್ದ ಎಂಟಿಬಿ ನಾಗರಾಜ್ ಗೆ ಬಚ್ಚೇಗೌಡಗೆ ಜೆಡಿಎಸ್ ಬೆಂಬಲ ಘೋಷಿಸೋ  ಮೂಲಕ ಶಾಕ್ ನೀಡಿದೆ. ರಾಜ್ಯ ರಾಜಕೀಯದಲ್ಲಿ ಈ ವಿಚಾರವೀಗ ದಿಢೀರ್ ಬೆಳವಣಿಗೆಯಾಗಿದೆ. 

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆದ ಮಾಜಿ ಸಿಎಂ ಕುಮಾರಸ್ವಾಮಿಯೇ ಈ ಬಗ್ಗೆ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಇದರೊಂದಿಗೆ ಹೊಸಕೋಟೆ ರಣಕಣ ಮತ್ತಷ್ಟು ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಬಿಜೆಪಿಯ ಖಡಕ್ ಎಚ್ಚರಿಕೆಗೆ ಕೇರ್‌ ಮಾಡದ ಶರತ್ ಬಚ್ಚೇಗೌಡ, ಹೊಸಕೋಟೆ ಬಳಿಯ ಉಪ್ಪಾರಹಳ್ಳಿ ಕರಗದಮ್ಮ ಪಾರ್ಟಿಹಾಲ್‌ನಲ್ಲಿ ಇಂದು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬಳಿಕ ಮತ್ತೊಮ್ಮೆ ಪುನರುಚ್ಚರಿಸಿದ ಶರತ್, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ನಿಶ್ಚಿತ ಎಂದಿದ್ದಾರೆ. ಯಾರು ಏನೇ ಮಾಡಿದರು ಸ್ವಾಭಿಮಾನಿ ಸುಮಲತಾಗೆ ಮಂಡ್ಯ ಜನರು ಗೆಲ್ಲಿಸಲಿಲ್ವಾ..? ಹಾಗೆ ನನ್ನನ್ನು ಮತದಾರರ ಕೈಹಿಡಿತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ಬೆಳಿಗ್ಗೆ ಶರತ್ ಹಾಕಿದ್ದ ಆಣೆ, ಪ್ರಮಾಣದ ಸವಾಲಿಗೆ ಪ್ರತಿಸವಾಲ್ ಎಸೆದ ಎಂಟಿಬಿ ನಾಗರಾಜ್‌, ಅಪ್ಪ-ಮಕ್ಕಳು ಇಬ್ಬರೂ ಚರ್ಚೆಗೆ ಬರಲಿ. 40 ವರ್ಷಗಳಲ್ಲಿ ಯಾರು, ಏನು ಮಾಡಿದರೆಂದು ಚರ್ಚೆಯಾಗಲಿ. ನಾನು ಚರ್ಚೆಗೆ ಸಿದ್ಧ ಎಂದು ಪಂಥಾಹ್ವಾನ ಕೊಟ್ಟಿದ್ದರು. ನಾನು ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಅಂತಲೂ ಸ್ಪಷ್ಟಪಡಿಸಿದರು. ಇತ್ತ, ಎಂಟಿಬಿ ಸವಾಲ್‌ ಸ್ವೀಕರಿಸಿರೋ ಶರತ್ ಬಚ್ಚೇಗೌಡ, ಚರ್ಚೆಗೆ ಸಿದ್ಧ ಎಂದಿದ್ದಾರೆ. ಎಲೆಕ್ಷನ್‌ಗೆ ನಿಲ್ತಿರೋದು ನಾನು. ನನ್ನ ತಂದೆ ಅಲ್ಲ. ಹೀಗಾಗಿ, ನಾನೇ ಚರ್ಚೆಗೆ ಬರ್ತೇನೆ ಎಂದು ಗುಡುಗಿದ್ದಾರೆ. 

ಹೊಸಕೋಟೆ ಕ್ಷೇತ್ರ ಇದೀಗ ಉಪ ಚುನಾವಣಾ ರಣರಂಗಕ್ಕೆ ಅಖಾಡ ಸಜ್ಜಾಗಿದ್ದು, ಎಂಟಿಬಿ ವರ್ಸಸ್ ಬಚ್ಚೇಗೌಡ ಖಾತ್ರಿ ಆದಂತೆ ಕಂಡುಬರುತ್ತಿದೆ. ಜೆಡಿಎಸ್ ಸಪೋರ್ಟ್ ಕೊಟ್ಟ ತಕ್ಷಣ ಎಂಟಿಬಿ ಸೋತು ಬಿಡುತ್ತಾರಾ, ಬಚ್ಚೇಗೌಡ ಗೆ ಸ್ವತಂತ್ರವಾಗಿ ಗೆಲ್ಲುವಷ್ಟು ಖದರ್ ಇದೆಯಾ ಇಲ್ಲವಾ ಎಂಬುದು ಕಾದು ನೋಡ ಬೇಕಾಗಿದೆ.

Find Out More:

Related Articles: