ಮೈಸೂರು: ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಚಾಪನ್ನು ಹೊಂದಿದ್ದ ಶಾಸಕ ತನ್ವೀರ್ ಸೇಠ್ ಮೇಲೆ ಸೋಮವಾರ ಹಲ್ಲೆ ಯಾಗಿದ್ದು, ಹಲ್ಲೆ ಮಾಡಿದ ಆರೋಪಿಯು ವಿಚಿತ್ರ ಕಾರಣ ಕೊಟ್ಟಿದ್ದಾನೆ. ಉದ್ಯೋಗ ಕೊಡಿಸಲು ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಶಾಸಕ ತನ್ವೀರ್ ಸೇಠ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದಾಗಿ ಆರೋಪಿ ಫರಾನ್ ಪಾಷಾ ಹೇಳಿದ್ದಾನೆಂದು ತಿಳಿದು ಬಂದಿದೆ.
ಶಾಸಕ ತನ್ವೀರ್ ಸೇಠ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪದಲ್ಲಿ ಮೈಸೂರಿನ ನರಸಿಂಹರಾಜ ಠಾಣೆ ಪೊಲೀಸರು ಗೌಸಿಯಾನಗರದ ಮುಕ್ಬುಲ್ ಎಂಬುವರ ಪುತ್ರ ಫರಾನ್ ಪಾಷಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದು, ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದಾಗಿ ತಿಳಿದಿದೆ. ಫರಾನ್ 18 ನೇ ವಯಸ್ಸಿನಿಂದ ಎಸ್ಡಿಪಿಐ ಸಂಘಟನೆ ಪರ ಕೆಲಸ ಮಾಡುತ್ತಿದ್ದ. ಕಳೆದ 8 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ. ವಿಧಾನಸಭೆಯ 2 ಚುನಾವಣೆಗಳಲ್ಲಿ ತನ್ವೀರ್ ಸೇಠ್ ಪರ ಕೆಲಸ ಮಾಡಿದ್ದ ಎಂಬ ಮಾಹಿತಿ ಲಭಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಸಾಂಸ್ಕೃತಿಕ ನಗರಿ ಮೈಸೂರಿನ ಬನ್ನಿಮಂಟಪ ಆವರಣದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಸಂಬಂಧಿಕರೊಬ್ಬರ ಬೀಗರ ಔತಣಕೂಟದಲ್ಲಿ ತನ್ವೀರ್ ಸೇಠ್ ಪಾಲ್ಗೊಂಡಿದ್ದರು. ಔತಣಕೂಟದಲ್ಲಿ ಆಯೋಜನೆಗೊಂಡಿದ್ದ ಸಂಗೀತ ಕಾರ್ಯಕ್ರಮವನ್ನು ಆಸ್ವಾದಿಸುತ್ತಿದ್ದರು. ಆಗ ಫರಾನ್ ಪಾಷಾ ತನ್ವೀರ್ ಸೇಠ್ ಮೇಲೆ ಮಾರಕಾಸ್ತ್ರದೊಂದಿಗೆ ಹಠಾತ್ತನೆ ಹಲ್ಲೆ ಮಾಡಿದ ಎನ್ನಲಾಗಿದೆ.
ಹಲ್ಲೆಯಲ್ಲಿ ತನ್ವೀರ್ ಸೇಠ್ ಅವರ ಕತ್ತಿನ ಬಲಭಾಗದಲ್ಲಿ ಗಂಭೀರ ಗಾಯವಾಗಿದ್ದು, ಹೃದಯಕ್ಕೆ ಸಂಪರ್ಕಿಸುವ 2 ನರಗಳು ತುಂಡಾಗಿವೆ. ಅಲ್ಲದೆ, ಬೆನ್ನುಮೂಳೆಗೂ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ. 5 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ವೈದ್ಯರು ಹೃದಯಕ್ಕೆ ಸಂಪರ್ಕಿಸುವ 2 ನರಗಳನ್ನು ಮರುಜೋಡಣೆ ಮಾಡಿದ್ದಾರೆ. ಪರಾರಿಯಾಗಲು ಯತ್ನಿಸಿದ್ದ ಫರಾನ್ನನ್ನು ಸ್ಥಳದಲ್ಲಿದ್ದವರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ನರಸಿಂಹರಾಜ ಪೊಲೀಸ್ ಠಾಣೆ ಯಲ್ಲಿ ದೂರು ದಾಖ ಲಾಗಿದ್ದು, ಫರಾನ್ನನ್ನು ವಿಚಾರಣೆಗೆ ಒಳಪಡಿಸಿರುವು ದಾಗಿ ತಿಳಿಸಿ ದ್ದಾರೆ. ಪ್ರಕರಣದ ಹಿಂದೆ ಮತ್ತಾರದೋ ಕೈವಾಡಯಿದೆ ಎಂದು ಸಹ ತಿಳಿದು ಬಂದಿದೆ.