ರಮೇಶ್ ಜಾರಕಿಹೊಳಿ ಭವಿಷ್ಯದ ಬಗ್ಗೆ ಯಡಿಯೂರಪ್ಪ ಏನ್ ಹೇಳಿದ್ರು ಗೊತ್ತಾ
ಬೆಳಗಾವಿ: ಇನ್ನೇನು ನಾಲ್ಕೇ ದಿನದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಆಪರೇಷನ್ ಕಮಲದ ಮುಖ್ಯ ರುವಾರಿ ರಮೇಶ್ ಜಾರಕಿಹೊಳಿ ಭವಿಷ್ಯದ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದು, ಏನ್ ಹೇಳಿದ್ರು ಅಂತ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ. ಅದೇನೆಂದು ಇಲ್ಲಿದೆ ನೋಡಿ.
ಯಾರು ಎಷ್ಟೇ ಪ್ಲಾನ್ ಮಾಡಿದ್ರು ಗೆಲ್ಲೋದು ರಮೇಶ್ ಜಾರಕಿಹೊಳಿ ಎಂಬುದು ನಿಶ್ಚಿತ. ರಮೇಶ ಜಾರಕಿಹೊಳಿ ಅವರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಅಲ್ಲದೇ ನಾನು ಮುಖ್ಯಮಂತ್ರಿ ಆಗುವಲ್ಲಿ ರಮೇಶ್ರ ಪಾತ್ರ ದೊಡ್ಡದಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಇಂದು ಹೇಳಿದರು.
ಡಿ.5 ರಂದು ಗೋಕಾಕ್ನ ಉಪಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, 15 ವಿಧಾನ ಸಭಾ ಕ್ಷೇತ್ರಕ್ಕೆ ಎರಡು ಸುತ್ತು ಪ್ರಚಾರ ನಡೆಸಿರುವೆ. ಹೀಗಾಗಿ ಯಾರು ಏನೇ ಬೊಬ್ಬೆ ಹೊಡೆದ್ರು ರಮೇಶ ಜಾರಕಿಹೊಳಿ ದೊಡ್ಡ ಅಂತರದಲ್ಲಿ ಗೆಲ್ಲೋದು ಖಚಿತ ಎಂದರು. ಅಲ್ಲದೇ ತಳಮಟ್ಟದಲ್ಲಿ ರಮೇಶ್ ಜಾರಕಿಹೊಳಿ ಹೆಚ್ಚಿನ ಕೆಲಸಗಳನ್ನು ಮಾಡಿದ್ದಾರೆ. ಅಭಿವೃದ್ಧಿ ಮಾಡಿದ್ದಾರೆ.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನೂರಕ್ಕೆ ನೂರು ರಾಜಕೀಯದಲ್ಲಿ ಬದಲಾವಣೆಯಾಗಲಿದೆ. ಕಾಂಗ್ರೆಸ್ ನೆಲಕಚ್ಚಿ ವಿರೋಧ ಪಕ್ಷದಲ್ಲಿ ಇರುತ್ತಾರೆ. ಆಗ ನಾವು ಆಡಳಿತ ಪಕ್ಷದಲ್ಲಿ ಮೂರುವರೆ ವರ್ಷ ಆಡಳಿತ ಮುಂದುವರೆಯುತ್ತೇವೆ ಎಂದು ಸಿಎಂ ಭರವಸೆ ವ್ಯಕ್ತಪಡಿಸಿದರು. ಅಂತೆಯೇ ಮಾತನಾಡಿ, ಯಡಿಯೂರಪ್ಪ ಸರ್ಕಾರವು ಪೂರ್ಣಾವಧಿಗೆ ಅಧಿಕಾರ ನಡೆಸಬೇಕು, ಒಳ್ಳೆಯ ಆಡಳಿತ ಕೊಡಬೇಕೆಂದು ಮತದಾರರು ಹೇಳುತ್ತಿದ್ದರು. ಆದರೆ, ವಿರೋಧ ಪಕ್ಷದವರು ಬಿಜೆಪಿಗೆ ಬಹುಮತ ಬರಬಾರದು ಮತ್ತೆ ಆರು ತಿಂಗಳಲ್ಲಿ ಚುನಾವಣೆ ಬರಬೇಕೆಂಬ ಭ್ರಮೆಯಲ್ಲಿ ಅವರು ಇದ್ದಾರೆ ಎಂದು ತಿಳಿಸಿದರು.
ಅಲ್ಲದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಅವರ ಸಿಎಂ ಆಗುವ ಕನಸು ತಿರುಕನ ಕನಸ್ಸಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ವೈ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ರಮೇಶ್ ಜಾರಕಿಹೊಳಿ ಗೆಲ್ಲೋದು ಪಕ್ಕಾ ಎಂದಿದ್ದು ಮತದಾರರು ಯಾರನ್ನು ಗೆಲ್ಲಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.