ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ 6453ಮತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಜನರ ತೀರ್ಪೇ ಸುಪ್ರೀಂ ಆಗಿದೆ. ಅನರ್ಹರು, ಅರ್ಹರನ್ನು ಜನರು ಒಪ್ಪಿಕೊಳ್ತಾರಾ ಇಲ್ಲವ ಎಂಬುದು ಯಕ್ಷ ಪ್ರಶ್ನೆ ಯಾಗಿದ್ದು, ತೆರೆಮರೆಯ ಕಸರತ್ತುಗಳು ಬುಧವಾರ ರಾತ್ರಿಯಿಂದಲೇ ಸದ್ದು ಮಾಡುತ್ತಿವೆ. ಪ್ರಸ್ತುತ ಕಣದಲ್ಲಿ ಒಟ್ಟು 165 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಮತದಾರರ ಯಾರನ್ನು ಆಯ್ಕೆ ಮಾಡಲಿದ್ದಾನೆ ಎಂಬುವುದು ಕುತೂಹಲ ಮೂಡಿಸಿದೆ.
ಕಣದಲ್ಲಿರುವ 165 ಅಭ್ಯರ್ಥಿಗಳ ಭವಿಷ್ಯ ಗುರವಾರ ನಿರ್ಧಾರವಾಗಲಿದ್ದು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರಲ್ಲೂ ಕುತೂಹಲ, ಆತಂಕ ಮನೆಮಾಡಿದೆ. ಕೊನೆಯ ದಿನದ ಕಸರತ್ತು ಜೋರಾಗಿದ್ದು ಹಣ, ಹೆಂಡ, ರಾಜಕೀಯ ತಂತ್ರಗಾರಿಗೆಗಳು ಭಾರೀ ಸದ್ದು ಮಾಡುತ್ತಿವೆ. ಡಿಸೆಂಬರ್ 5 ರಂದು ನಡೆಯಲಿರುವ ಉಪಚುನಾವಣಾ ಅಖಾಡಲ್ಲಿ 165 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ತಪ್ಪು ಮತ್ತು ಅವ್ಯವಹಾರ ನಡೆಯದಂತೆ ಮತದಾನನ ದಿನಕ್ಕೆ ಚುನಾವಣಾ ಆಯೋಗ ಪೂರ್ಣ ಸಜ್ಜಾಗಿದೆ.
ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ. ಸಂಜೆ 6 ಗಂಟೆಯ ವರೆಗೂ ಮತದಾನ ಮಾಡಲು ಅವಕಾಶವಿದೆ. ಮತದಾನ ಮಾಡಲು ಅನುಕೂಲವಾಗುವಂತೆ 15 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಜೆ ಘೋಷಿಸಲಾಗಿದೆ. ಖಾಸಗಿ ಕಂಪನಿಗಳು ರಜೆ ನೀಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ರಾಜ್ಯದಲ್ಲಿ ಒಟ್ಟು 6,453 ಮತಗಟ್ಟೆಗಳಿವೆ. ಈಗಾಗಲೇ ಎಲ್ಲಾ ಮತಗಟ್ಟೆಗಳಿಗೆ ಚುನಾವಣಾ ಆಯೋಗದ ಸಿಬಂಧಿಗಳು ತೆರಳಿದ್ದಾರೆ. ಕೆಲವೊಂದು ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಹೆಚ್ಚಿನ ಭದ್ರತೆ ನೀಡಲಾಗಿದೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳು ಸಹ ತೆರೆಮರೆಯ ಕಸರತ್ತಿನಲ್ಲಿ ಬ್ಯೂಸಿಯಾಗಿವೆ. ಎರಡು ದಿನಗಳ ಹಿಂದೆಯೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಮನೆ ಮನೆ ಮತಯಾಚನೆ ನಡೆಸಲಷ್ಟೇ ಅವಕಾಶವಿತ್ತು. ಇದೀಗ ಅದು ಮುಗಿದಿದ್ದು, ಗುರುವಾರ ಮತದಾರನ ಒಲವು ಯಾರ ಕಡೆಗಿದೆ ಎಂಬುದು ಕುತೂಹಲ ಮೂಡಿಸಿದೆ. ಫಲಿತಾಂಶವು ಡಿಸೆಂಬರ್ 9ಕ್ಕೆ ಹೊರಬೀಳಲಿದೆ.
ಒಟ್ಟು ಮತಗಟ್ಟೆಗಳ ಸಂಖ್ಯೆ - 6453
ಪಿಂಕ್ ಮತಗಟ್ಟೆ ಕೇಂದ್ರಗಳು - 57
ಅಂಗವಿಕಲರ ಮತಗಟ್ಟೆ ಕೇಂದ್ರಗಳು -26