9+2+2+1 ಸೂತ್ರ ಎಣೆದ ಯಡಿಯೂರಪ್ಪ. ಏನದು ಗೊತ್ತಾ?

Soma shekhar
ಬಿಜೆಪಿ ಪಕ್ಷದ ಟಿಕೆಟ್ ಪಡೆದು, ನಾಮಪತ್ರ ಸಲ್ಲಿಸಿ, ಇದೀಗ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಖಚಿತವಾಗಿದೆ. ಆದರೆ ಎಲ್ಲರಿಗೂ ಸಚಿವ ಸ್ಥಾನ ನೀಡಿದರೆ ಬಿಜೆಪಿ ಶಾಸಕರು ಎಲ್ಲಿಗೆ ಹೋಗ ಬೇಕೆಂಬುದು ಮತ್ತೊಂದು ಸವಾಲಿನ ಪ್ರಶ್ನೆ ಯಾಗಿದೆ. ಆದ್ದರಿಂದ ಸಚಿವ ಸ್ಥಾನ ಹಂಚಿಕೆಯ ಬಗ್ಗೆ ಸಿಎಂ ಯಡಿಯೂರಪ್ಪ 9+2+2+1 ಸೂತ್ರ ಎಣೆದಿದ್ದಾರೆ. ಈ ಸೂತ್ರದ ವಿಶ್ಲೇಷಣೆ ಏನೆಂಬುದು ಇಲ್ಲಿದೆ ನೋಡಿ ಮಾಹಿತಿ. 
 
12 ಶಾಸಕರು ಗೆದ್ದಿದ್ದು, ಇದರಲ್ಲಿ 9 ಶಾಸಕರಿಗೆ ಸಚಿವ ಸ್ಥಾನ, 2 ಶಾಸಕರಿಗೆ ನಿಗಮ ಮಂಡಳಿ + ಸಂಪುಟ ದರ್ಜೆ ಸ್ಥಾನಮಾನಗಳು, ಇನ್ನು ಒಬ್ಬರಿಗೆ ಎಂ.ಎಲ್.ಸಿ ಹಾಗೂ ಇನ್ನು ಎರಡು ಕ್ಷೇತ್ರಗಳಲ್ಲಿ ಚುನಾವಣೆ ಬಾಕಿ ಇರುವುದರಿಂದ ಅವರು ಗೆದ್ದ ಮೇಲೆ ಅವರಿಗೆ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ. 
 
ಇದೀಗ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ. ಉಪ ಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನಿಶ್ಚಿತವಾಗಿದ್ದರೂ ಸೋತ ವಿಶ್ವನಾಥ್ ಸಹ ಬಿಎಸ್‌ವೈ ಭೇಟಿಯಾಗಿರುವುದು ಕುತೂಹಲ ಮೂಡಿಸಿ ಉತ್ತಮ ಸ್ಥಾನ ಕಲ್ಪಿಸಿಕೊಡಲು ಇದೀಗ  12 ಅರ್ಹ ಶಾಸಕರು ಸಹ ಒತ್ತಡ ಹಾಕಿದ್ದಾರೆ. 
 
 ಸಮ್ಮಿಶ್ರ ಸರಕಾರಕ್ಕೆ ರಾಜೀನಾಮೆ ನೀಡಿದ್ದ ಹುಣಸೂರು ಮಾಜಿ ಶಾಸಕ ಎಚ್‌. ವಿಶ್ವನಾಥ್‌ ಸಹ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಸಮ್ಮಿಶ್ರ ಸರಕಾರಕ್ಕೆ ರಾಜೀನಾಮೆ ನೀಡಿದ್ದವರ ಪೈಕಿ ಗೆದ್ದವರ ಜತೆ ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್‌ ಹಾಗೂ ಎಚ್‌. ವಿಶ್ವನಾಥ್‌ ಪರ ಗೆದ್ದ ಶಾಸಕರು ನಿಂತಿದ್ದಾರೆ. ಈ ಹಿನ್ನೆಲೆ ವಿಶ್ವನಾಥ್‌ ಹಾಗೂ ಎಂಟಿಬಿ ನಾಗರಾಜ್‌ ಅವರಿಗೆ ಪರ್ಯಾಯ ಪಟ್ಟ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಬಿಜೆಪಿ ಸರಕಾರ ರಚನೆಗೆ ಕಾರಣರಾದ ಅನರ್ಹರನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ಸಂಪುಟದಲ್ಲಿ 16 ಸ್ಥಾನಗಳನ್ನು ಸಿಎಂ ಬಿಎಸ್‌ವೈ ಖಾಲಿ ಇಟ್ಟಿದ್ದಾರೆ. ಬೈ ಎಲೆಕ್ಷನ್‌ಗೆ ತೆರೆ ಬಿದ್ದಿದ್ದರಿಂದ ಈ ಹುದ್ದೆಗಳ ಭರ್ತಿ ಶೀಘ್ರದಲ್ಲಿ ನಡೆಯಲಿದೆ.

Find Out More:

Related Articles: