ಬೆಂಗಳೂರು: ಬರೋಬ್ಬರಿ ಕಳೆದ ನಾಲ್ಕು ತಿಂಗಳ ಹಿಂದೆ ಅತಿಯಾದ ಮಳೆ ಹಾಗೂ ಹೆಚ್ಚಾದ ಜಲಾಶಯದ ನೀರಿನಿಂದ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿತ್ತು. ಆಗ ಸರ್ಕಾರ ಅತಂತ್ರ ಸ್ಥಿತಿಯಲ್ಲಿತ್ತು. ಯಡಿಯೂರಪ್ಪ ನವರು 15 ಶಾಸಕರನ್ನು ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರ ರಚಿಸಿದ್ದರು. ಆದರೀಗ ಅನರ್ಹರು ಅರ್ಹ ಶಾಸಕರಾಗಿದ್ದಾರೆ. ಯಡಿಯೂರಪ್ಪ ನವರ ಸರ್ಕಾರ ಸ್ಥಿರವಾಗಿದೆ. ಆದರೆ ನೆರೆ ಸಂತ್ರಸ್ಥರ ಬದುಕು ಮಾತ್ರ ಸ್ಥಿರವಾಗಿರದೇ ಅತಂತ್ರವಾಗಿದೆ. ಈ ಬಗ್ಗೆ ಮತ್ತೇ ಯಡಿಯೂರಪ್ಪ ನವರು ಮಾತನಾಡಿದ್ದು, ಏನ್ ಹೇಳಿದ್ದಾರೆ ನೀವೆ ನೋಡಿ.
ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದವರು ಎದೆಗುಂದುವ ಅಗತ್ಯವಿಲ್ಲ. ಅವರ ಬದುಕನ್ನು ಪುನಃ ಕಟ್ಟಿಕೊಡಲು ಸರ್ಕಾರ ಅವರೊಂದಿಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅದು ಕೆಲಸ ಕಾರ್ಯಗಳು ನಡೆಯುತ್ತಿಲ್ಲವಲ್ಲ ಎಂಬುದು ಜನಸಾಮಾನ್ಯರ ಗೋಳಾಗಿದೆ.
ರಾಜ್ಯದಲ್ಲಿ ಮುಂಗಾರಿನಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಮನೆ ಕಳೆದುಕೊಂಡಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಯೂ ನಷ್ಟವಾಗಿದೆ. ಈ ವಿಕೋಪದ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಜನರ ನೆರವಿಗೆ ಧಾವಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರವಾಹದಿಂದ ತೀವ್ರ ಹಾನಿಗೀಡಾದ “ಎ’ ಮತ್ತು “ಬಿ’ ವರ್ಗದ ಮನೆಗಳ ಪುನರ್ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು ಘೋಷಿಸಲಾಗಿದೆ. ಈಗಾಗಲೇ ಮುಂಗಡವಾಗಿ 1 ಲಕ್ಷ ರೂ.ಗಳನ್ನು ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ.
ಉಳಿದ ನಾಲ್ಕು ರೂ.ಗಳನ್ನು ನಿರ್ಮಾಣವಾಗುತ್ತಿರುವ ಮನೆಯ ಹಂತವಾರು ಜಿ.ಪಿ.ಎಸ್. ಛಾಯಾಚಿತ್ರಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು. ಆದ್ದರಿಂದ ಕೂಡಲೇ ಮನೆ ನಿರ್ಮಾಣವನ್ನು ಪ್ರಾರಂಭಿಸಿ ಬೇಗನೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಜನರಿಗೆ ವಾಸವಿರಲು ಮನೆಯಿಲ್ಲದೇ ಪರದಾಡುವ ಸ್ಥಿತಿ ಇಂದಿಗೂ ಹಾಗೆ ಇದೆ. ಕುಡಿಯಲೂ ನೀರಿಲ್ಲದೇ, ತಿನ್ನಲು ಅನ್ನವಿಲ್ಲದೇ ಜನರು ಪರದಾಡೂತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಸ್ಥಿರ ಆಗುವುದರಲ್ಲೇ ಇದೆ ಎಂಬುದು ಜನಸಾಮಾನ್ಯರ ಗೋಳಾಗಿದ್ದು, ಮುಂದೆಯಾದರೂ ಶೀಘ್ರದಲ್ಲಿ ಸರ್ಕಾರ ಮನೆ ಭಾಗ್ಯ ಕಲ್ಪಿಸಲಿ ಎಂಬುದುಜನರ ಆಶಯವಾಗಿದೆ.