4 ತಿಂಗಳೊಳಗೆ ರಾಮಮಂದಿರ ನಿರ್ಮಾಣ, ಅಮಿತ್ ಶಾ ಭರವಸೆ

Soma shekhar
ಪಟ್ನಾ: ಸುಪ್ರೀಂ ಕೋರ್ಟ್ ಅಯೋಧ್ಯೆ ಬಾರ್ಬ್ರೀ ಮಸೀದಿ ಕುರಿತ ಪ್ರಕರಣದ ಕುರಿತು ತೀರ್ಪು ನೀಡಿದ್ದು, ಇನ್ನು ನಾಲ್ಕೇ ತಿಂಗಳಲ್ಲಿ ಭವ್ಯವಾಗಿ ಅದ್ಭುತವಾಗಿ ಬೃಹತ್​ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಘೋಷಿಸಿದ್ದಾರೆ.
 
ಪುಕಾರ್​ನಲ್ಲಿ ವಿಧಾನಸಭಾ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್​ ತೀರ್ಪು ನೀಡಿದೆ. ಇನ್ನು  ನಾಲ್ಕು ತಿಂಗಳೊಳಗೆ ಮುಗಿಲು ಮುಟ್ಟುವ ರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು. ಭರವಸೆಯಷ್ಟೇ ಅಲ್ಲ ಹೇಳಿದ್ದನ್ನು ಮಾಡಿ ತೋರಿಸುತ್ತದೆ ಮೋದಿ ಸರ್ಕಾರ, ಇದು ಬಿಜೆಪಿ ಸರ್ಕಾರ ಎಂದಿದ್ದಾರೆ. 
 
ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಡಿದೆ. ಅಲ್ಲದೇ ಇದಕ್ಕಾಗಿ ಮೂರು ಟ್ರಸ್ಟ್​ ರಚಿಸಿ ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸುವಂತೆ ಸುಪ್ರೀಂಕೋರ್ಟ್​ ಸೂಚಿಸಿ ನ.9ರಂದು ಆದೇಶ ನೀಡಿತ್ತು. ಇನ್ನು ಈ ಭೂಮಿ ಹಕ್ಕು ಪ್ರತಿಪಾದಿಸಿದ್ದ ಸುನ್ನಿವಕ್ಫ ಬೋರ್ಡ್​ಗೆ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಐದು ಏಕರೆ ಜಾಗ ನೀಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಸೂಚಿಸಿ ನವೆಂಬರ್ 8ರಂದು ತೀರ್ಪು ಪ್ರಕಟಿಸಿತ್ತು. 
 
ತೀರ್ಪು ಪ್ರಕಟವಾದ ಎರಡು ದಿನದ ನಂತರ ಗೃಹ ಸಚಿವರು ಟ್ರಸ್ಟ್​ ರಚನೆಗೆ ಮುಂದಾಗಿದ್ದು, ಮಂದಿರ ನಿರ್ಮಾಣ ಕುರಿತು ನಿರ್ವಹಣೆ ನಡೆಸಿದ್ದರು. ಈಗಾಗಲೇ ಮಂದಿರ ನಿರ್ಮಾಣ ಕುರಿತು ನೀಲಿ ನಕ್ಷೆ ಕೂಡ ಸಿದ್ಧವಾಗಿದೆ. ನೀಲಿ ನಕ್ಷೆಯಲ್ಲಿ ರಾಮ ಮಂದಿರದ ಅದ್ಭುತ ಸ್ಕೆಚ್ ಇದೆ. ಮಂದಿರವನ್ನು ವೀಕ್ಷಿಸಲು ವಿದೇಶಗಳಿಂದ ಪ್ರವಾಸಿಗರು ಬರಬೇಕು, ಜಗತ್ತಿನ ಅತಿದೊಡ್ಡ ಮತ್ತು ಅತ್ಯದ್ಭುತವಾದ ಮಂದಿರ ವನ್ನಾಗಿ ರಾಮ ಮಂದಿರ ವನ್ನೂ ನಿರ್ಮಿಸುತ್ತೇವೆ ಎಂದರು. ನಾ ಭೂತೋ ನಾ ಭವಿಷ್ಯತ್ ಎನ್ನುವ ಹಾಗಿರಬೇಕು ಮಂದಿರ ಎಂಬುದು ರಾಮ ಭಕ್ತರ ಮಾತಾಗಿತ್ತು. ಮಂದಿರ ನಿರ್ಮಾಣ ವಿಚಾರ ಬಳಿಕ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್​ ಪಕ್ಷ ದೇಶವನ್ನು ಸುರಕ್ಷಿತವಾಗಿಯೂ ಇಡುವುದಿಲ್ಲ ಜೊತೆಗೆ ನಾಗರಿಕರ ಭಾವನೆಯನ್ನು ಗೌರವಿಸಲ್ಲ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅತೀ ಭ್ರಷ್ಟ ಪಕ್ಷ ಎಂದು ಗುಡುಗಿದರು.

Find Out More:

Related Articles: