ತೇಜಸ್ವಿ ಸೂರ್ಯಗೆ ಡಿ.ಕೆ.ಶಿ ಎಚ್ಚರಿಕೆ ಕೊಟ್ಟಿದ್ದೇಕೆ?

Soma shekhar
ಬೆಂಗಳೂರು: ಪ್ರಸ್ತುತ ರಾಷ್ಟ್ರಾದ್ಯಂತ ಸಿ ಎ ಎ ಹಾಗೂ ಏನ್.ಆರ್.ಸಿ ಬಗೆಗಿನ ಪ್ರತಿಭಟನೆಗಳು ತೀವ್ರವಾಗಿ ಹೆಚ್ಚಿದ್ದು, ಅನೇಕ ನಾಯಕರು ಅವರವರಿಗೆ ತೋಚಿದ್ದನ್ನು ಹೇಳಿಕೆ ನೀಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮಾಜಿ ಸಚಿವ ಡಿ. ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. 
 
ಸುದ್ದಿಗಾರ ರೊಂದಿಗೆ ಈ ಬಗ್ಗೆ ಮಾತನಾಡಿ, ಮಂಗಳೂರಿನ ವೈರಲ್​ ಆಗಿರುವ ವಿಡಿಯೋ ಹಳೆಯದು. ಹಳೆಯ ವಿಡಿಯೋ ಬಿಟ್ಟು ಬಿಜೆಪಿ ಜನರ ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 144 ಸೆಕ್ಷನ್ ಹಾಕೋಕೆ ಹೇಳಿದ್ದು ಯಾರು? ಇನ್ನೂ ಜೀವಹಾನಿ ಆಗಲಿಲ್ಲ ಎಂದು ಕೇಳಿದ್ದು. ಪೊಲೀಸರು ಅಲ್ವಾ ಇನ್ನು ಹೊಡೆದಿಲ್ವಾ, ಬಿಳಲಿಲ್ಲ ಎಂದಿದ್ದು ಯಾರು? ಎಂದು ಪ್ರಶ್ನಿಸಿದರು.
 
ಅಂತೆಯೇ ಮಾತನಾಡಿ, ಈ ಪೊಲೀಸರ ವಿಡಿಯೋ ಯಾಕೆ ಬಿಡುಗಡೆ ಮಾಡಲಿಲ್ಲ? ಗೋಲಿಬಾರ್​ಗೆ ನೇರ ಕಾರಣ ರಾಜ್ಯ ಸರ್ಕಾರ. ಮಂಗಳೂರಿನ ಬಹಳ ಜನ ಹೊರ ದೇಶದಲ್ಲಿದ್ದಾರೆ. ಅವರಿಗೆ ಸಮುದಾಯ ಒಡೆಯುವ ಕೆಲಸ ಬೇಕಿಲ್ಲ. ಈ ರೀತಿ ಘಟನೆ ಮಾಡುವವರಿಗೆ ಈ ಘಟನೆ ಬೇಕು ಎಂದು ಡಿಕೆಶಿ ತಿಳಿಸಿದರು. 
 
ಬಿಜೆಪಿ ಸಂಸದ ತೇಜಸ್ವಿ ಸೂರ್ಯ  ಪಂಚರ್​ ಹಾಕುವವರು ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿ, ವಿದ್ಯಾವಂತ, ಬುದ್ದಿವಂತರಿಲ್ಲದಿದ್ರು ದೇಶ ನಡೆಯುತ್ತದೆ. ಪ್ರಜ್ಞಾವಂತರು ಇಲ್ಲದೆ ದೇಶ ನಡೆಸಲು ಸಾಧ್ಯವಿಲ್ಲ. ಗುಜರಾತಿನಲ್ಲಿ ಎದೆ ಸೀಳಿಸಿ ತೋರಿಸಿದ್ದಾಯಿತು. ಈಗ ಕರ್ನಾಟಕದಲ್ಲಿ ಎದೆ ಸೀಳಿ ತೋರಿಸಬೇಕಾ? ಸಾಮಾನ್ಯ ಜನರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿರಲಿ ಎಂದು ಡಿಕೆಶಿ ಅವರು ತೇಜಸ್ವಿಸೂರ್ಯಗೆ ಎಚ್ಚರಿಕೆ ನೀಡಿದರು.
 
ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ದೇಶದ್ಯಂತ ಇತ್ತೀಚೆಗೆ ವಿರೋಧ ವ್ಯಕ್ತವಾಗಿತ್ತು. ಅಂತೆಯೇ, ಮಂಗಳೂರಿನಲ್ಲಿ ಡಿ.19 ರಂದು ಸಿಎಎ ವಿರೋಧಿಸಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ಉಂಟಾಗಿ ಇಬ್ಬರು ಗೋಲಿಬಾರ್​ಗೆ ಜೀವಹಾನಿ ಉಂಟಾಗಿತ್ತು. ಅದರಿಂದ ರಾಜ್ಯದಲ್ಲಿ ಪ್ರತಿಭಟನೆಯ ಕಾವು ಎಚ್ಚಾಗಿತ್ತು. ರಾಜ್ಯ ಸರ್ಕಾರ ಇದನ್ನು ನಿಯಂತ್ರಿಸುವಲ್ಲಿ ಹರ ಸಾಹಸ ಪಡುತ್ತಿದೆ.

Find Out More:

Related Articles: