ಕೆಜಿಎಫ್ ಚಿತ್ರಕ್ಕೆ ಮತ್ತೆರಡು ರಾಷ್ಟ್ರೀಯ ಪ್ರಶಸ್ತಿಗಳು

Soma shekhar
ನವದೆಹಲಿ: ಕೆಜಿಎಫ್, ಈ ಹೆಸರು ಕೇಳಿದ ತಕ್ಷಣ ಕರ್ನಾಟಕದ ಅದೊಂದು ಸತ್ಯ ಕಥೆಯನ್ನು ತೆರೆಮೇಲೆ ಮೂಡಿಸಿ ರಾಷ್ಟ್ರಾದ್ಯಂತ ಸದ್ದು ಮಾಡಿದ್ದು ನೆನಪಾಗುತ್ತದೆ. ನರ ನಾಡಿಗಳಲ್ಲಿ ಬಿಸಿರಕ್ತವೊಂದು ಚಲಿಸಿದಂತೆ ಭಾಸವಾಗುತ್ತದೆ. ಈಗಾಗಲೇ ಕೆಜಿಎಫ್ ಚಿತ್ರಕ್ಕೆ ಪ್ರಶಸ್ತಿಗಳ ಮಹಾ ಪೂರವೇ ಹರಿದು ಬಂದಿದ್ದು, ಇದೀಗ ಮತ್ತೆರೆಡು ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಹೌದು, ಆ ಡೀಟೆಲ್ಸ್ ಇಲ್ಲಿದೆ ನೋಡಿ. 
 
 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯ ವಿಜ್ಞಾನ ​​ಭವನದಲ್ಲಿ ಬಹಳ ಅದ್ಧೂರಿ ಯಾಗಿ ನೆರವೇರಿದೆ. ಆಗಸ್ಟ್​​​​​​ನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಯಾಗಿತ್ತು. ಈ ಪ್ರಶಸ್ತಿಯನ್ನು ನಿನ್ನೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಅಲ್ಲದೇ, ಕನ್ನಡ ಕಲಾವಿದರು ಮತ್ತು ತಂತ್ರಜ್ಞರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು. ದೆಹಲಿಯ ವಿಜ್ಞಾನ​​ಭವನದಲ್ಲಿ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿದ್ದು, ಉರಿ ಚಿತ್ರದ ನಟನೆಗಾಗಿ ವಿಕ್ಕಿ ಕೌಶಲ್ ಮತ್ತು ಅಂಧಾದೂನ್​ ಚಿತ್ರದ ನಟನೆಗಾಗಿ ಆಯುಷ್ಮಾನ್ ಖುರಾನ ಜಂಟಿಯಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದರೆ, ತೆಲುಗಿನ ಮಹಾನಟಿ ಚಿತ್ರದ ನಟನೆಗಾಗಿ ಕೀರ್ತಿ ಸುರೇಶ್ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ದರು.
 
ಭಾರತೀಯ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ದಾಖಲೆಯನ್ನು ನಿರ್ಮಿಸಿದ ಕನ್ನಡದ ಕೆಜಿಎಫ್​​ ಚಿತ್ರದ ಅತ್ಯುತ್ತಮ ಸಾಹಸ ಸಂಯೋಜನೆಗಾಗಿ ವಿಕ್ರಮ್​ ಮೋರ್​​ ಪ್ರಶಸ್ತಿ ಸ್ವೀಕರಿಸಿದರೆ,  ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಾದ ರಿಷಬ್​ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಸತ್ಯ ಪ್ರಕಾಶ್​ ನಿರ್ದೇಶನ ಒಂದಲ್ಲ ಎರಡಲ್ಲ ಚಿತ್ರಕ್ಕೆ ಎರಡು ಪ್ರಶಸ್ತಿ ಲಭಿಸಿದ್ದು, ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ ಪ್ರಶಸ್ತಿ ಜೊತೆಗೆ ಮಾಸ್ಟರ್​ ರೋಹಿತ್​​ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ ಸ್ವೀಕರಿಸಿದ್ದು ವಿಶೇಷವಾಗಿತ್ತು. ಇನ್ನು ವೇದಿಕೆಗೆ ನಮಿಸುವುದರ ಜೊತೆಗೆ ಉಪರಾಷ್ಟ್ರಪತಿಗಳ ಕಾಲಿಗೆರಗಿ ರೋಹಿತ್​ ಎಲ್ಲರ ಗಮನ ಸೆಳೆದರು.
 
 

Find Out More:

Related Articles: