ಮಂಗಳೂರು ಗೋಲಿಬಾರ್​​ ಪ್ರಕರಣದ ಬಗ್ಗೆ ಮಾಜಿ ಸಚಿವ ಹೆಚ್​​.ಕೆ.ಪಾಟೀಲ್​​ ಹೇಳಿದ್ದೇನು!?

frame ಮಂಗಳೂರು ಗೋಲಿಬಾರ್​​ ಪ್ರಕರಣದ ಬಗ್ಗೆ ಮಾಜಿ ಸಚಿವ ಹೆಚ್​​.ಕೆ.ಪಾಟೀಲ್​​ ಹೇಳಿದ್ದೇನು!?

Soma shekhar
ಬೆಂಗಳೂರು: ರಾಷ್ಟ್ರಾದ್ಯಂತ ಪೌರತ್ವದ ಬಗೆಗಿನ ಪ್ರತಿಭಟನೆಗಳು ಹೆಚ್ಚುತ್ತಲೇ ಇದ್ದು, ಇತ್ತೀಚೆಗೆ ಮಂಗಳೂರು ನಲ್ಲಿ ಗೋಲಿಬಾರ್ ನಡೆದಿತ್ತು. ಇದೀಗ ಆ ಗೋಲಿಬಾರ್ ಬಗ್ಗೆ ಅನೇಕ ವಿಚಾರಗಳು ಬಯಲಿಗೆ ಬರುತ್ತಿದ್ದು, ಹಿರಿಯ ಮಾಜಿ ಸಚಿವ ಎಚ್.ಕೆ ಪಾಟೀಲ್ ಏನಿದು ಹೇಳಿದ್ದಾರೆ ಅಂತ ಇಲ್ನೋಡಿ. 
 
ಮಂಗಳೂರು ಗೋಲಿಬಾರ್​​ ಪ್ರಕರಣವೂ ಸ್ವತಂತ್ರವಾಗಿ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ನೇತೃತ್ವ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹೆಚ್​​.ಕೆ ಪಾಟೀಲ್​​ ಆಗ್ರಹಿಸಿದ್ದಾರೆ. 
 
ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತಾಡಿದ ಮಾಜಿ ಸಚಿವ ಹೆಚ್​​​.ಕೆ ಪಾಟೀಲ್​​, ಮಂಗಳೂರು ಗಲಭೆ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ. ಹಾಗಾಗಿಯೇ ರಾಜ್ಯ ಸರ್ಕಾರ ಗಲಭೆಗೆ ಸಂಬಂಧಿಸಿದ ವಿಡಿಯೋ ಹರಿಬಿಟ್ಟಿದೆ. ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವ ಯಾವುದೇ ಉದ್ದೇಶವೇ ಇಲ್ಲ. ಆದ್ದರಿಂದ ಸರ್ಕಾರ ಅಧೀನದ ತನಿಖಾ ಸಂಸ್ಥೆ ಬದಲಿಗೆ ಸ್ವತಂತ್ರವಾಗಿ ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.
 
ಇನ್ನು ಪೌರತ್ವ ತಿದ್ದುಪಿಡಿ ಕಾಯ್ದೆಯೂ ರಾಷ್ಟ್ರೀಯ ವಿಚಾರ. ಇದು ಒಂದು ಜಾತಿ ಮತ್ತು ಧರ್ಮ ಸೀಮಿತವಾಗಿಲ್ಲ. ಕಾಯ್ದೆ ಬೇಕೆಂದಲೇ ಅಪಪ್ರಚಾರ ಮಾಡಲಾಗುತ್ತಿದೆ. ಇನ್ನೊಮ್ಮೆ ಚರ್ಚಿಸಿ ಪೌರತ್ವ ಕಾಯ್ದೆ ಬಗ್ಗೆ ಸರ್ವಸಮ್ಮತ ತೀರ್ಮಾನ ತೆಗೆದುಕೊಳ್ಳಬೇಕು. ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಬೇಕೆಂದು ಎಂದು ಕೇಂದ್ರ ಸರ್ಕಾರಕ್ಕೆ ಹೆಚ್​​.ಕೆ ಪಾಟೀಲ್​​ ತಮ್ಮ ಅಭಿಮತ ತಿಳಿಸಿದ್ದಾರೆ. 
 
ಬಿಜೆಪಿ ಸಿಎಎ ಮತ್ತು ಎನ್​​ಆರ್​​ಸಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ರಾಷ್ಟ್ರದಲ್ಲಿ ಇಂತಹ ಕೆಟ್ಟ ಬೆಳವಣಿಗೆಗಳು ನಡೆಯುವುದು ದುರಂತ. ಇದರಿಂದ ಕೆಲವೊಂದು ಮನಸ್ಸಿಗೆ ಘಾಸಿ ಮಾಡುವಂತ ಘಟನೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಲೊರಟ ಕಾಯ್ದೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಕುಟುಕಿದರು. ಹಿಂಸಾಚಾರ ಹೆಚ್ಚಳವಾಗುವ ಸಂಭವ ಇರುವ ಕೆಲ ಕಡೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ ತ್ರಿಪುರಾ ರಾಜ್ಯದಲ್ಲಿ ಈಗಾಗಲೇ ಎಸ್ಸೆಮ್ಮೆಸ್ ಮತ್ತು ಇಂಟರ್​ನೆಟ್ ಸೇವೆಯನ್ನು ಹಿಂಪಡೆಯಲಾಗಿದೆ. ಇದು ಸುಳ್ಳು ಸುದ್ದಿಯಷ್ಟೇ ಎಂದಿದೆ. ಪ್ರತಿಭಟನೆಯ ಕಾವು ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯುತ್ತದೆ ಎಂಬುದು ಕಾದು ನೋಡಬೇಕಾಗಿದೆ.

Find Out More:

Related Articles:

Unable to Load More