ಗದಗ: ಹೇಳಿ ಕೇಳಿ ಉತ್ತರ ಕರ್ನಾಟಕ ನೀರಾವರಿಗಾಗಿ ಹೋರಾಡಿದ ಆ ದಿನಗಳು, ಪ್ರತಿಭಟನೆಗಳು ಒಂದೆರಡಲ್ಲ. ಮಹದಾಯಿ ಮತ್ತು ಕಳಸಾಬಂಡೂರಿ ಹೋರಾಟದ ಕಳೆದ ಒಂದು ಸಾವಿರ ದಿನಗಳಿಗಿಂತ ಹೆಚ್ಚು ದಿನಗಳು ಹೋರಾಟವನ್ನು ನಡೆಸುತ್ತಲೇ ಬಂದಿದೆ ಎಂದು ಜೆಡಿಎಸ್ ಎಂಎಲ್ಸಿ ಹಾಗೂ ರೈತ ಹೋರಾಟದ ಮುಖಂಡ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ, ನ್ಯಾಯಾಧೀಕರಣ ಆದೇಶದ ಪ್ರಕಾರ, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಕಾಮಗಾರಿ ಆರಂಭ ಮಾಡಬೇಕು. ಇದೇ ಜ.5ರಂದು ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಮಹತ್ವದ ಸಭೆ ಆಯೋಜನೆ ಮಾಡಲಾಗುವುದು, ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಹಾದಾಯಿ ಕಳಸಾಬಂಡೂರಿ ಹೋರಾಟಕ್ಕೆ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು, ವಿಧಾನಸಭೆ ಸದಸ್ಯರು ಸಭೆ ಹಾಜರಾಗುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಸದ್ಯ ಚುನಾವಣೆ ಸಹ ಇಲ್ಲ, ಎಲ್ಲರೂ ಒಂದಾಗಬೇಕು ಅದಾಗ ಮಾತ್ರ ಮಹಾದಾಯಿ ಕಳಸಾ ಬಂಡೂರಿ ಹೋರಾಟಕ್ಕೆ ಪ್ರತಿಫಲ ಸಿಗುತ್ತೆ, ತಾರ್ಕಿಕ ಅಂತ್ಯವನ್ನು ಹಾಡುವ ಉದ್ದೇಶ ದಿಂದ ಈ ಸಭೆಯನ್ನು ನಡೆಸ ಲಾಗುತ್ತಿದೆ. ಎಲ್ಲರೂ ಹಾಜರಾಗಿ ಯಶಸ್ವಿಗೊಳುಸಬೇಕು ಸಮಸ್ಯೆಗೆ ಅಂತಿಮ ಮಹತ್ವದ ಪರಿಹಾರ ಕಂಡುಕೊಳ್ಳಬೇಕು.
ಗೋವಾ ಸಿಎಂ ಹೇಗೆ ಮಾತನಾಡಿದ್ದಾರೆ, ಹಾಗೇ ನಮ್ಮ ರಾಜ್ಯದವರು ಮಾತನಾಡಬೇಕು. ನಾವು ಗೋವಾ ಸಿಎಂ ಹೇಳಿಕೆಗೆ ವಿರೋಧ ವ್ಯಕ್ತಪಡೆಸುವುದಿಲ್ಲ, ನ್ಯಾಯಾಧೀಕರಣದ ತೀರ್ಪು ಪ್ರಕಾರ ನಮಗೆ ನೀರು ಹಂಚಿಕೆ ಮಾಡಲಿ. ಮುಂದೆ ಎಲ್ಲಾ ನಾಯಕರು ಹಾಗೂ ಜನ ಪ್ರತಿನಿಧಿ ಗಳು ಒಂದಾಗಿ ಹೋರಾಟ ಮಾಡುತ್ತೇವೆ. ಹೋರಾಟದ ಮುಂದಾಳತ್ವ ವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೆಗೆದುಕೊಳ್ಳುವಂತೆ ಮನವಿ ಮಾಡಲಾಗುತ್ತದೆ. ಅಂದು ಅವರು ಬಂದ್ರೆ ಲಅವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಮಹಾದಾಯಿ ಕಳಸಾಬಂಡೂರಿ ಹೋರಾಟದಿಂದ ಹಿಂದಕ್ಕೆ ಸರಿಯೊದಿಲ್ಲ ಈ ಹೋರಾಟವು ಇದೇ ಕೊನೆಯದಾಗಬೇಕು ಎಂದು ಬಸವರಾಜ್ ಹೊರಟ್ಟಿ ಅವರು ಹೇಳಿದರು.