ಪಕ್ಷದ ನಿರ್ಧಾರವೇ ಅಂತಿಮ ಎನ್ನುವ  ಡಿಸಿಎಂ ಕ್ಯಾಂಡಿಡೇಟ್ ರಾಮುಲು ಡೆಲ್ಲಿಯಲ್ಲಿದ್ದು ಮಾಡುತ್ತಿರುವುದೇನು?

Soma shekhar
ದೆಹಲಿ: ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ತೀವ್ರ ನಿರಾಸೆಯಾಗಿದೆ. ಡಿಸಿಎಂ ಆಗಬೇಕೆನ್ನುವುದು ನನ್ನ ಜನಾಂಗದ ಜನರ ಅಭಿಲಾಶೆಯಾಗಿದೆ. ಆದರೂ ಸಹ ಪಕ್ಷದ ಅಂತಿಮ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳುವ ಶ್ರೀರಾಮುಲು ದೆಹಲಿಯಲ್ಲಿದ್ದು ಮಾಡುತ್ತಿರುವುದೇನು ಗೊತ್ತಾ! 
 
ಈಗಾಗಲೇ ಮೂವರು ಡಿಸಿಎಂಗಳಿದ್ದು ಮತ್ತೆ ಡಿಸಿಎಂ ಸ್ಥಾನ ಸೃಷ್ಟಿಯಿಂದ ಸಮಸ್ಯೆ ಮತ್ತಷ್ಟು ಹೆಚ್ಚಬಹುದು.  ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಿದಲ್ಲಿ ಶಾಸಕ ರಮೇಶ್ ಜಾರಕಿಹೋಳಿ ಕಡೆಯಿಂದಲೂ ಡಿಸಿಎಂ ಸ್ಥಾನದ ಬೇಡಿಕೆ ಹೆಚ್ಚಾಗಲಿದೆ. ಒಂದೇ ಸಮುದಾಯದ ಇಬ್ಬರಿಗೆ ಡಿಸಿಎಂ ನೀಡಲು ಸಾಧ್ಯವಿಲ್ಲ.
 
ಇದು ಅಸಮಾಧಾನಕ್ಕೆ ಕಾರಣವಾಗಲಿದೆ ಎಂಬುದು ಹೈಕಮಾಂಡ್ ಲೆಕ್ಕಾಚಾರ. ಹೀಗಾಗಿ ಡಿಸಿಎಂ ಸ್ಥಾನ ಸದ್ಯ ನೀಡಲು ಸಾಧ್ಯವಿಲ್ಲ ಎಂದು ಶ್ರೀರಾಮುಲುಗೆ ಸಂದೇಶ ರವಾನಿಸಲಾಗಿದೆ.ಈ ಕುರಿತು ದೆಹಲಿಯಲ್ಲಿ  ಮಾತನಾಡಿರುವ ಸಚಿವ ಶ್ರೀರಾಮುಲು, ನನ್ನ ಸಮುದಾಯಕ್ಕೆ ಮುಜಗರವಾದರೂ ಪರವಾಗಿಲ್ಲ ಡಿಸಿಎಂ ಹುದ್ದೆಯನ್ನು ಬಹಿರಂಗವಾಗಿ ಕೇಳಿ ಪಕ್ಷಕ್ಕೆ ಮುಜುಗರ ಮಾಡಲ್ಲ. ನಾನು ಪಕ್ಷಕ್ಕೆ ನಿಷ್ಠನಾಗಿರುತ್ತೇನೆ ಎಂದಿದ್ದಾರೆ. ಆದರೂ ಸಹ ಅಮಿತ್ ಶಾ ಭೇಟಿಗಾಗಿ ದೆಹಲಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ. 
 
ನಮ್ಮ ಸಮುದಾಯದ ಜನರು ನನ್ನ ಮೇಲಿನ ಪ್ರೀತಿಯಿಂದ ಹೋರಾಟ ಮಾಡುತ್ತಿದ್ದಾರೆ. ಹೋರಾಟ ಮಾಡಬೇಡಿ ಎಂದು ನಾನು ಹೇಳಲ್ಲ. ನಾನು ಎಷ್ಟೇ ಹೇಳಿದರೂ ಅವರು ನನ್ನ ಮಾತು ಕೇಳಲ್ಲ. ನನಗೆ ಡಿಸಿಎಂ ನೀಡದಿದ್ದರೆ ಸಮುದಾಯಕ್ಕೆ ಮುಜುಗರ ಆಗುತ್ತೆ ಎಂಬ ವಿಚಾರ ಸತ್ಯ. ನನಗೆ ಡಿಸಿಎಂ ಹುದ್ದೆ ಸಿಗದಿದ್ದರೆ ಸಮುದಾಯ ತ್ಯಾಗ ಮಾಡಬೇಕು. ಪಕ್ಷದಲ್ಲಿ ನಿಷ್ಠಾವಂತನಾಗಿ ಕೆಲಸ ಮಾಡುತ್ತೇನೆ. ರಮೇಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಮೇಶ್ ನನ್ನ ಸೋದರನಿದ್ದಂತೆ. ನಮ್ಮ ಸಮುದಾಯದ ನಡುವೆ ಸ್ಪರ್ಧೆ ಮಾಡಲ್ಲ ಹಾಗೂ ಅವರಿಗೆ ಡಿಸಿಎಂ ಸ್ಥಾನ ನೀಡಬೇಡಿ ಎಂದೂ ನಾನು ಹೇಳಲ್ಲ ಎಂದು ಸ್ಪಷ್ಟಪಡಿಸಿದರು. ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಅವಕಾಶ ಕೇಳಿದ್ದೇನೆ. ಅವಕಾಶ ಸಿಕ್ಕರೆ ರಾಜ್ಯದ ಕೆಲವು ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಡಿಸಿಎಂ ಸಂಬಂಧ ನಾನು ಚರ್ಚೆ ಮಾಡಲ್ಲ ಎಂದರು.

Find Out More:

Related Articles: