ಹತ್ತು ಅರ್ಹ ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್, ಸಂಪುಟ ವಿಸ್ತರಣೆ ಯಾವತ್ತು ಗೊತ್ತಾ!?

Soma shekhar
ಬೆಂಗಳೂರು: 15 ಶಾಸಕರು ರಾಜೀನಾಮೆ ನೀಡಿ, ದೋಸ್ತಿ ಸರ್ಕಾರ ಉರುಳಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಕೊನೆಗೆ ಜನತಾ ನ್ಯಾಯಾಲಯದಲ್ಲಿ ಪಾಸಾದ 12 ಶಾಸಕರ ಪೈಕಿ ಇದೀಗ 10  ಶಾಸಕರಿಗೆ ಸಚಿವ ಸ್ಥಾನ ಖಚಿತ ಆಗಿದೆ.  ಸಂಪುಟ ಸೇರ್ಪಡೆಗೆ ಬಿಜೆಪಿಯ ಅರ್ಹ ಶಾಸಕರ ನಡುವೆ ತೀವ್ರ ಪೈಪೋಟಿ ನಡುವೆಯೇ ಉಪಚುನಾವಣೆಯಲ್ಲಿ ಗೆದ್ದ 12 ಮಂದಿ ಅರ್ಹ ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ ಖಚಿತವಾಗಿದೆ. ಹಾಗಾದರೆ ಸಂಪುಟ ವಿಸ್ತರಣೆ ಯಾವತ್ತು ಗೊತ್ತಾ! 
 
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಅರ್ಹ ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ ಖಚಿತವಾಗಿರುವುದರ ಜತೆಗೆ ಸಿಎಂ ವಿದೇಶ ಪ್ರವಾಸದಿಂದ ವಾಪಸಾದ ಬಳಿಕ ಫೆ. 17ರ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಖಚಿತವಾಗಿದೆ. ಫಲಿತಾಂಶ ಹೊರಬಿದ್ದು ತಿಂಗಳಾದರೂ ಸಂಪುಟ ವಿಸ್ತರಣೆಯಾಗದ ಬಗ್ಗೆ ಅರ್ಹ ಶಾಸಕರಲ್ಲಿಅಸಮಾಧಾನ ಹೆಪ್ಪುಗಟ್ಟುತ್ತಿದೆ. ಅವರನ್ನು ಸಮಾಧಾನಪಡಿಸುವ ಪ್ರಯತ್ನವೂ ನಡೆದಿದೆ.
 
ಸಂಪುಟ ವಿಸ್ತರಣೆ ವಿಚಾರದಲ್ಲಿ ಬರುವ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅರ್ಹರು ಸದ್ಯಕ್ಕೆ ಯಾರನ್ನೂ ಭೇಟಿ ಮಾಡದಿರಲು ಹಾಗೂ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದೇ ನಿರ್ಲಿಪ್ತ ಧೋರಣೆ ತಳೆದಿದ್ದಾರೆ. ಸಂಪುಟ ಸೇರ್ಪಡೆಗೆ ಬಿಜೆಪಿಯ ಮೂಲ ಹಾಗೂ ಅರ್ಹ ಶಾಸಕರ ನಡುವೆ ತೀವ್ರ ಪೈಪೋಟಿ ನಡುವೆಯೇ ಉಪಚುನಾವಣೆಯಲ್ಲಿ ಗೆದ್ದ 11 ಮಂದಿ ಅರ್ಹ ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ ಖಚಿತವಾಗಿದೆ. ಬೆಳಗಾವಿಯ ಶಾಸಕರೊಬ್ಬರಿಗೆ ಬಿಜೆಪಿ ನಾಯಕರು ಸಚಿವ ಸ್ಥಾನದ ಬಗ್ಗೆ ಭರವಸೆ ನೀಡಿರಲಿಲ್ಲ ಎಂದು ತಿಳಿದುಬಂದಿದೆ.
 
ಜನವರಿ 17 ರಂದು ರಾಜ್ಯಕ್ಕೆ ಆಗಮಿಸಲಿರುವ ಅಮಿತ್‌ ಶಾ ಅವರೊಂದಿಗೆ ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ  ಸಮಾಲೋಚನೆ ನಡೆಸಲಿದ್ದಾರೆ. ಹುಬ್ಬಳ್ಳಿಯ ಶಾ ಕಾರ್ಯಕ್ರಮದ ಮಾರನೇ ದಿನವೇ ಸಿಎಂ ಯಡಿಯೂರಪ್ಪ ಅವರು ದಾವೋಸ್‌ಗೆ ಪ್ರಯಾಣ ಮಾಡುತ್ತಿರುವುದರಿಂದ ಅಷ್ಟರೊಳಗೆ ವಿಸ್ತರಣೆ ಆಗುವುದಿಲ್ಲ ಎಂಬುದು ನಮಗೂ ಖಾತರಿಯಾಗಿದೆ. ಫೆ.17 ರಿಂದ ಅಧಿವೇಶನ ಆರಂಭವಾಗುತ್ತಿದ್ದು ಅಷ್ಟರೊಳಗೆ ನಾವೆಲ್ಲಾ ಸಂಪುಟ ಸೇರುತ್ತೇವೆ ಎಂದಿದ್ದಾರೆ.

Find Out More:

Related Articles: