ಕೇಂದ್ರ ಬಜೆಟ್ 2020: ಯಾವುದು ಏರಿಕೆ, ಯಾವುದು ಇಳಿಕೆ?

Soma shekhar
 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍.ಡಿ.ಎ 2ರ ಮೊದಲ ಬಜೆಟನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ್ದಾರೆ. ಬಜೆಟ್ ಭಾಷಣದ ಸಂದರ್ಭದಲ್ಲಿ ವಿತ್ತ ಸಚಿವೆ ಅಬಕಾರಿ ಸುಂಕ ಏರಿಸಿದ್ದರಿಂದ ಕೆಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಪ್ರಸ್ತುತ ರಾಷ್ಟ್ರ ಆರ್ಥಿಕ ಹಿಂಜರಿತದ ದೊಡ್ಡ ಸಮಸ್ಯೆ ಎದುರಿಸುತ್ತಿದ್ದು ಈಗ ಅಗತ್ಯ ವಸ್ತುಗಳ ಬಲೆಯು ಸಹ ಹೆಚ್ಚಾಗಿದೆ. ಆದರೆ ತೆರಿಗೆ ಕಟ್ಟುವವರಿಗೆ ಕೊಂಚ ನಿರಾಳ ತಂದಿದೆ. 
 
ಯಾವುದಕ್ಕೆಲ್ಲ ಏರಿಕೆ?
* ಪೆಟ್ರೋಲ್, ಡೀಸೆಲ್, ಚಿನ್ನ ದರ ಏರಿಕೆಯಾಗಲಿದೆ
* ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿ ಎಸ್‍ ಟಿ ದುಪ್ಪಟ್ಟಾಗಿದೆ.
* ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆನ ತೆರಿಗೆ ಏರಿಕೆ ಮಾಡಲಾಗಿದೆ.
* ಚೀನಾ ಸೆರಾಮಿಕ್, ಜೇಡಿ ಮಣ್ಣಿನಿಂದ ತಯಾರಿಸಿದ ಗೃಹ ಉಪಯೋಗಿ ವಸ್ತುಗಳ ಮೇಲಿನ ತೆರಿಗೆ ಏರಿಕೆಯಾಗಿದೆ.
* ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ಶೇ.10ರಿಂದ ಶೆ. 20ರಷ್ಟು ಏರಿಕೆಯಾಗಿದೆ.
* ಪಿಂಗಾಣಿ ಕಪ್, ಮಗ್, ತಾಮ್ರ, ಸ್ಟೀಲ್ ಪಾತ್ರೆಗಳ ಮೇಲಿನ ತೆರಿಗೆ ಏರಿಕೆಯಾಗಿದೆ.
* ವಾಣಿಜ್ಯ ವಾಹನಗಳ ಬಿಡಿ ಭಾಗಗಳ ಮೇಲಿನ ತೆರಿಗೆ ಹಾಗೂ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯಲ್ಲಿ ಏರಿಕೆ.
 
* ಆಟೋ, ಬೈಕ್, ಕಾರು ದುಬಾರಿ
* ಚಪ್ಪಲಿ, ಫರ್ನಿಚರ್ ದುಬಾರಿ
* ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ದರ ಏರಿಕೆಯಾಗಿದೆ
* ಕೆನೆ ತೆಗೆದ ಹಾಲಿನ ಉತ್ಪನ್ನಗಳು ಇನ್ಮುಂದೆ ಮತ್ತಷ್ಟು ತುಟ್ಟಿಯಾಗಲಿವೆ
* ಸಕ್ಕರೆ ಬೆಲೆ ಏರಿಕೆಯಾಗಿದೆ
* ಸೋಯಾ ಫೈಬರ್ ಉತ್ಪನ್ನಗಳ ದರ ಏರಿಕೆಯಾಗಿದೆ
* ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಏರಿಕೆ ಆಗಿರೋದ್ರಿಂದ ಆಸ್ಪತ್ರೆ ಖರ್ಚು ಹೆಚ್ಚಲಿದೆ. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ
 
ಇಳಿಕೆ ಕಂಡಿದ್ದು ಯಾವುದು?:
* ನ್ಯೂಸ್ ಪ್ರಿಂಟ್‍ ಗಳ ದರ ಇಳಿಕೆ
* ಹಗುರ ಕೋಟೆಡ್ ಕಾಗಗದ ದರ ಇಳಿಕೆ.

Find Out More:

Related Articles: