ಸ್ಯಾಂಡಲ್ ವುಡ್ ನ ಯುವರಾಜ ಎಂದೇ ಕರೆಯಲ್ಪಡುವ ಅಭಿಮನ್ಯು, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಸೋಮವಾರ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆಯಲಿದೆ. ಹೌದು ಇಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ ಎಂಬುದು ಬಂದಿದೆ. ಆದರೆ ನಿಖಿಲ್ ಕುಮಾರಸ್ವಾಮಿ ಮದುವೆ ಯಾವಾಗ ಗೊತ್ತಾ!? ಇಲ್ಲಿದೆ ನೋಡಿ ಆ ಕಂಪ್ಲೀಟ್ ಡೀಟೈಲ್ಸ್.
ನಟ ನಿಖಿಲ್ ಕುಮಾರಸ್ವಾಮಿ ಮದುವೆ ದಿನಾಂಕವನ್ನು ತಂದೆ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೊನೆಗೂ ಬಹಿರಂಗಪಡಿಸಿದ್ದಾರೆ. ಹೌದು, ಇಲ್ಲಿಯ ವರೆಗೂ ಸೀಕ್ರೆಟ್ ಆಗಿದ್ದ ಮದುವೆ ದಿನಾಂಕ ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಮದುವೆ ಯಾವತ್ತು ಗೊತ್ತಾ, ಮುಂದೆ ಓದಿ. ಈ ಹಿಂದೆ ಏಪ್ರಿಲ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ವಿವಾಹ ಎಂದು ಸುದ್ದಿಯಾಗಿತ್ತು. ಆದರೆ ಅಧಿಕೃತ ದಿನಾಂಕವನ್ನು ಘೋಷಣೆ ಮಾಡಿಲಿಲ್ಲ. ಇದೀಗ ಸ್ವತಃ ಕುಮಾರಸ್ವಾಮಿ ದಿನಾಂಕವನ್ನು ಘೋಷಿಸಿದ್ದು, ಏಪ್ರಿಲ್ 27ರಂದು ಮದುವೆ ಸಮಾರಂಭ ನಡೆಯಲಿದೆ ಎಂದು ಹೇಳಿದರು. ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಮದುವೆಯ ಸಿದ್ಧತೆ ಕುರಿತು ಇನ್ನೆರಡು ದಿನಗಳಲ್ಲಿ ತಿಳಿಸುತ್ತೇನೆ,” ಎಂದರು.
ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಸೋಮವಾರ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಲಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. “ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಪುತ್ರ ನಿಖಿಲ್ ನಿಶ್ಚಿತಾರ್ಥ ಇದೆ. ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಶಾಸಕರು, ಹಿತೈಷಿಗಳನ್ನು ಕರೆದಿದ್ದೇನೆ,’’ ಎಂದು ಮಾಜಿ ಮುಖ್ಯ ಮಂತ್ರಿ ಎಚ್. ಡಿ ಕುಮಾರಸ್ವಾಮಿ ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಂತೆ ಜೆ ಪಿ ನಗರದಲ್ಲಿರುವ ನಿವಾಸದಲ್ಲಿ ಎಚ್. ಡಿ ಕುಮಾರಸ್ವಾಮಿ ಹಾಗೂ ಕುಟುಂಬ ಸದಸ್ಯರು ಭಾನುವಾರ ಸಿದ್ಧತೆ ನಡೆಸಿದ್ದಾರೆ. ಮದುವೆಯು ಸಹ ಅದ್ಧೂರಿಯಾಗಿ ನಡೆಸಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ, ಹಾಗೆಯೇ ಇದೀಗ ನಿಶ್ಚಿತಾರ್ಥಕ್ಕೆ ರಾಜಕೀಯ ನಾಯಕರ ದಂಡೇ ಹರಿದು ಬರುವ ಮುನ್ಸೂಚನೆ ಯು ಸಿಕ್ಕಿದೆ.