ಜಲಮೂಲ ಸಂರಕ್ಷಣೆಗಳ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?

Soma shekhar
ಬೆಂಗಳೂರು: ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ನೀಡಬೇಕಾಗುತ್ತಿದೆ. ಅದರಿಂದ ಅವರು ಬಳಸುವ ತ್ಯಾಜ್ಯ ಪದಾರ್ಥಗಳು ಹೆಚ್ಚುತ್ತಲೇ ಇವೆ. ಇದರಿಂದ ಆರೋಗ್ಯದ ಸಮಸ್ಯೆಗಳು ಸಹ ಹೆಚ್ಚುತ್ತಿವೆ. ಇದೊಂದು ದೊಡ್ಡ ಸಮಸ್ಯೆಯಾದರೆ ಇನ್ನು ಬರಿದಾಗುತ್ತಿರುವ ನೀರಿನ ಸಂಪನ್ಮೂಲಗಳು, ಹೌದು, ಇದು ಹೆಚ್ಚುತ್ತಲೇ ಇರುವ ಸಮಸ್ಯೆ. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ನವರು ಇದರ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ!! 
 
ಘನತ್ಯಾಜ್ಯ ನಿರ್ವಹಣೆ, ಮಳೆ ನೀರು ಕೊಯ್ಲು, ಜಲಮೂಲಗಳು ಮತ್ತು ಪರಿಸರ ಸಂರಕ್ಷಣೆ ನಗರ ಸ್ಥಳೀಯ ಸಂಸ್ಥೆಗಳ ಆದ್ಯತೆ ಆಗಬೇಕು. ಈ ನಿಟ್ಟಿನಲ್ಲಿ ಹೆಚ್ಚು ಆವಿಷ್ಕಾರಗಳು ನಡೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕರೆ ನೀಡಿದರು.
 
ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ “16ನೇ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮ್ಮೇಳನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರವಾಹ, ಭೂಕುಸಿತದಂಥ ಪ್ರಕೃತಿ ವಿಕೋಪಗಳಿಂದ ಸಂರಕ್ಷಿತ ನಗರಗಳನ್ನು ಯೋಜಿತ ರೀತಿಯಲ್ಲಿ ರೂಪಿಸುವುದರ ಜತೆಗೆ ಜಲ ಮತ್ತು ಇಂಧನ ಮೂಲಗಳ ಮಿತವ್ಯಯ ಮತ್ತು ಸಂರಕ್ಷಣೆ ಆವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದ್ದು, ಯೋಜಿತ ರೀತಿಯಲ್ಲಿ ನಗರಗಳನ್ನು ರೂಪಿಸಬೇಕಿದೆ ಎಂದು ತಿಳಿಸಿದರು. 
 
ವಿಶ್ವದ ಎಲ್ಲ ನಗರಗಳಿಗೂ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲಾಗುವುದು ಎಂದ ಅವರು, ವಿಶ್ವದಲ್ಲಿಯೇ ಮಹಾನಗರ ಬೆಂಗಳೂರು ಅತ್ಯಂತ ವೇಗವಾಗಿ, ನಿರೀಕ್ಷೆ ಮೀರಿ ಬೆಳೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಅವಿರತ ಪಯತ್ನ ಮಾಡುತ್ತಿದೆ. ಇದು ಸಾಕಾರಗೊಂಡರೆ ವಿಶ್ವದ ಎಲ್ಲ ನಗರಗಳೊಂದಿಗೆ ಸಿಲಿಕಾನ್‌ ಸಿಟಿಗೆ ಸಂಪರ್ಕ ಸಾಧ್ಯವಾಲಿದೆ ಎಂದು ತಿಳಿಸಿದ್ದಾರೆ. 
 
ಇದೀಗ ನಗರೀಕರಣ ಮಟ್ಟವು ಶೇ. 40ಕ್ಕಿಂತ ಹೆಚ್ಚಿದ್ದು, ದೇಶದಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್‌ ಸಿಟಿಯಲ್ಲಿ ಬೆಂಗಳೂರು ಕೂಡ ಒಳಗೊಂಡಿರುವುದು ಸಂತಸ ತಂದಿದೆ ಎಂದರು. ಅದೇ ರೀತಿಯಲ್ಲಿ ವಿಶ್ವ ದಲ್ಲೇ ಬೆಂಗಳೂರು ಗುರುತಿಸಿ ಕೊಳ್ಳುವಂತೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನವರು ತಿಳಿಸಿದ್ದಾರೆ.

Find Out More:

Related Articles: