ಸದನದಲ್ಲಿ ಸದ್ದು ಮಾಡಿದ "ಮಿಣಿ ಮಿಣಿ ಪೌಡರ್"

Soma shekhar
ಬೆಂಗಳೂರು: ಭಾರೀ ಟ್ರೋಲ್ ಆಗಿದ್ದ ಮಿಣಿ ಮಿಣಿ ಪೌಡರ್ ಇದೀಗ ಸದನದಲ್ಲಿ ಮತ್ತೇ ಸದ್ದು ಮಾಡಿದೆ. ಗ್ರಾಮೀಣ ಭಾಷೆಯಲ್ಲಿ  ಪೌಡರನ್ನು ಮಿಣಿ ಮಿಣಿ ಪೌಡರ್ ಎಂದಿದ್ದಕ್ಕೆ ನನ್ನನ್ನು ಟ್ರೋಲ್ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ  ಎಚ್‌.ಡಿ ಕುಮಾರಸ್ವಾಮಿ ಸದನದಲ್ಲಿ ನೋವು ತೋಡಿಕೊಂಡರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕದ್ದ ಬಾಂಬ್‌ ನ್ನು ಮಿನಿ ಮಿನಿ ಪೌಡರ್ ಎಂದು ಹೇಳಿದ್ದು ಟ್ರೋಲ್ ಆಗಿತ್ತು.
 
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನುಗುವ ಪೌಡರನ್ನು ಮಿಣಿ ಮಿಣಿ ಪೌಡರ್‌ ಎಂದಿದ್ದೆ ಅದಕ್ಕಾಗಿ ನನ್ನನ್ನು ಟ್ರೋಲ್ ಮಾಡಿದರು ಎಂದು ಸದನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ನೋವು ತೋಡಿಕೊಂಡಿದ್ದಾರೆ.  ನಿಯಮ 69ರ ಅಡಿಯಲ್ಲಿ ಸದನದಲ್ಲಿ ನಡೆದ ಚರ್ಚೆಯಲ್ಲಿ ಮಂಗಳೂರು ಗೋಲಿಬಾರ್‌ ಪ್ರಕರಣದ ಕುರಿತಾಗಿ ಮಾತನಾಡಿದ ಎಚ್‌.ಡಿ.ಕೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದ ಬಾಂಬ್‌ ಪ್ರಕರಣವನ್ನು ಪ್ರಸ್ತಾಪಿಸಿ,ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಹೇಗೆ ನಡೆದುಕೊಂಡರು? ಎಂದು ಪ್ರಶ್ನಿಸಿದ ಅವರು ಇಂತಹ ಪ್ರಕರಣವನ್ನು ದೊಡ್ಡದು ಮಾಡಿ ಏನು ಸಂದೇಶವನ್ನು ನೀಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಎಚ್‌ಡಿಕೆ ಮಿಣಿ ಮಿಣಿ ಪೌಡರ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಿಜೆಪಿ ಮುಖಂಡರು ಸೇರಿದಂತೆ ಹಲವರು ಇದನ್ನು ಟ್ರೋಲ್ ಮಾಡಿದ್ದರು. ಟ್ರೋಲಿಗರ ವರ್ತನೆಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. 
 
ಅಷ್ಟೇ ಅಲ್ಲದೆ ಮಂಗಳೂರು ಗೋಲಿಬಾರ್‌ ಗೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಎಚ್‌.ಡಿ.ಕೆ ಒತ್ತಾಯಿಸಿದರು. ಘಟನೆ ನಡೆದ ವೇಳೆ ಪೊಲೀಸ್ ಆಧಿಕಾರಿಗಳಾದ ಶಾಂತರಾಮ್‌ ಹಾಗೂ ಶರೀಫ್ ಏನು ಮಾತನಾಡಿದರು ಎಂಬುವುದು ಟಿವಿಯಲ್ಲಿ ಬಂದಿದೆ. ಈ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಯಾವುದೋ ಸಂಘಟನೆಯನ್ನು ಮೆಚ್ಚಿಸಲು ಪ್ರಯತ್ನ ಪಡಬೇಡಿ. ಯಾರದೋ ಬಲವಂತಕ್ಕೆ ಕೊನೆಯ ಹಂತದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರಬೇಡಿ. ಪ್ರಕರಣದ ಕುರಿತಾಗಿ ನ್ಯಾಯಾಂಗ ತನಿಖೆ ಬದಲಾಗಿ ಸದನ ಸಮಿತಿ ರಚನೆ ಮಾಡಲು ಕುಮಾರಸ್ವಾಮಿ ಒತ್ತಾಯಿಸಿದರು. ಆದರೆ ಸದನ ಸಮಿತಿ ರಚನೆ ಕಷ್ಟಸಾಧ್ಯವಾಗಿದೆ.
 
 
 

Find Out More:

Related Articles: