ಬೆಂಗಳೂರು: ಕನ್ನಡ ಮಾತನಾಡೋಕೆ ಬರುತ್ತಾ? ಕನ್ನಡ ಬರುತ್ತಾ ? ಹೀಗಂತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಚಿವ ಪ್ರಭು ಚೌಹಾಣ್ ಅವರನ್ನು ಪ್ರಶ್ನಿಸಿದ ಪ್ರಸಂಗ ಗುರುವಾರ ಸದನದಲ್ಲಿ ನಡೆಯಿತು. ಇದಕ್ಕೆ ಪ್ರಭು ಚೌಹ್ಹಾಣ್ ಹೇಳಿದ್ದೇನು ಗೊತ್ತಾ!? ಇಲ್ಲಿದೆ ನೋಡಿ ಮಾಹಿತಿ.
ನಿಮಗೆ ಕನ್ನಡ ಸರಿಯಾಗಿ ಬರುತ್ತಾ ? ಹೀಗಂತ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಪ್ರಶ್ನಿಸಿದವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಗುರುವಾರ ಸದನದಲ್ಲಿ ಪ್ರವಾಹ ವಿಚಾರವಾಗಿ ಮಾತನಾಡುತ್ತಾ, ಪ್ರಭು ಚೌಹ್ಹಾಣ್ ಅವರ ಕಾಲೆಳೆದರು. ನೀವು ಮುಂಬೈ ಮೂಲದವರಿದ್ದೀರಿ ನಿಮಗೆ ಕನ್ನಡ ಸರಿಯಾಗಿ ಬರುತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ ಎದ್ದು ನಿಂತ ಚೌಹಾಣ್, ನೀವು ಸದನಕ್ಕೆ ತಪ್ಪು ಮಾಹಿತಿ ನೀಡಿತ್ತಿದ್ದಿರಿ, ನಾನು ‘ಕರ್ನಾಟಕ್’ ದವನು ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅದು ಕರ್ನಾಟಕ್ ಅಲ್ಲ ಬದಲಾಗಿ ಕರ್ನಾಟಕ. ನಾವು ಯಾರಾದರೂ ಕನ್ನಡ ಮಾತನಾಡುವಾಗ ಕರ್ನಾಟಕ್ ಎಂದು ಕರೆಯುತ್ತೇವಾ ಎಂದು ಪ್ರಶ್ನಿಸಿದರು. ಈ ಹಿಂದೆ ಒಮ್ಮೆ ಬೀದರ್‌ಗೆ ಪರಿಶೀಲನಾ ಸಭೆಗೋಸ್ಕರ ಹೋಗಿದ್ದೆ. ಅವಾಗ ಸಭೆಯಲ್ಲಿ ಪ್ರಭು ಚೌಹಾಣ್ ಎಲ್ಲಾ ಭಾಷೆಗಳನ್ನು ಮಿಕ್ಸ್ ಮಾಡಿ ಮಾತನಾಡಿದ್ದರು ಎಂದು ನೆನಪಿಸಿಕೊಂಡರು.
ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಹಿಂದೆ ಒಮ್ಮೆ ಲೋಕಸಭೆಯಲ್ಲಿ ಸದಸ್ಯರೊಬ್ಬರು ಒಂದು ಗಂಟೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು. ಭಾಷಣದ ಬಳಿಕ ಮಧು ದಂಡಾವತಿಯವರು ಭಾಷಣದ ಇಂಗ್ಲಿಷ್ ಭಾಷಾಂತರ ಬೇಕು ಎಂದು ಕೇಳಿಮಾತನಾಡಲು ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿಯವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಅಸಮಾಧಾನಗೊಂಡ ಪ್ರಸಂಗ ಗುರುವಾರ ಸದನದಲ್ಲಿ ನಡೆಯಿತು. ಈ ವೇಳೆ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮುಕಿಯೂ ನಡೆಯಿತು. ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಲು ಅವಕಾಶ ಕೇಳಿದರು. ಈ ವೇಳೆ ಸ್ಪೀಕರ್ ಶಾಸಕ ಎಂ.ಬಿ ವೀರಭದ್ರಯ್ಯ ಅವರಿಗೆ ಮಾತನಾಡಲು ತಿಳಿಸಿದರು. ನಂತರ ನೀವು ನನಗೆ ಶಿಸ್ತಿನ ಬಗ್ಗೆ ಪಾಠ ಮಾಡಬೇಡಿ ಎಂದು ಸ್ಪೀಕರ್ ಗೆ ಹೇಳಿದರು.