ಗುಜರಾತ್: ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿ ಸೋಮವಾರ ಬೆಳಿಗ್ಗೆ 11.40ಕ್ಕೆ ಭಾರತಕ್ಕೆ ಬಂದಿಳಿದಿದ್ದಾರೆ. ನಿನ್ನೆ ಮತ್ತು ಇಂದು ಸೇರಿ ಒಟ್ಟು ಎರಡು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಟ್ರಂಪ್ ಭಾಗವಹಿಸಿದ್ದಾರೆ. ವಿಶ್ವದ ದೊಡ್ಡ ಸ್ಟೇಡಿಯಂ ಮೆಟೆರಾ ಉದ್ಘಾಟಿಸಿ ಮಾತನಾಡಿದ್ದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.
ಡೊನಾಲ್ಡ್ ಟ್ರಂಪ್ ದಂಪತಿ ಎರಡು ದಿನ ಭಾರತ ಪ್ರವಾಸ ಹಿನ್ನೆಲೆ ಮೊದಲ ದಿನವಾದ ಗುಜರಾತ್ ರಾಜಧಾನಿಯಾದ ಅಹಮದಾಬಾದ್ ನ ಮೊಟೆರಾ ಕ್ರೀಡಾಂಗಣದಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾದರು. ಇದೇ ವೇಳೆಯಲ್ಲಿ ನರೇಂದ್ರ ಮೋದಿ ಅವರು ಮಾತನಾಡಿದರು.
5 ತಿಂಗಳ ಹಿಂದೆ ನಾನು ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ನನ್ನ ಯು.ಎಸ್.ಎ ಪ್ರವಾಸವನ್ನು ಪ್ರಾರಂಭಿಸಿದೆ. ನನ್ನ ಸ್ನೇಹಿತ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಪ್ರವಾಸವನ್ನ ‘ನಮಸ್ತೆ ಟ್ರಂಪ್’ ದೊಂದಿಗೆ ಪ್ರಾರಂಭಿಸುತ್ತಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಿಂದ ದೇಶ ನಿಮಗೆ ಹೃತ್ಪೂರ್ವಕ ಸ್ವಾಗತ ಕೋರುತ್ತದೆ ಎಂದು ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಗೆ ಮೊದಲನೆಯದಾಗಿ ಭವ್ಯ ಸ್ವಾಗತ ಮಾಡಿದರು.ಆನಂತರ ಮಾತನಾಡಿದ ಪ್ರಧಾನಿ ಮೋದಿ, ಈ ಕಾರ್ಯಕ್ರಮದ ಹೆಸರಿನ ಅರ್ಥ ‘ನಮಸ್ತೆ ಟ್ರಂಪ್’ ಇದು ಬಹಳ ಆಳವಾಗಿದೆ ಎಂದರು. ಇದು ವಿಶ್ವದ ಅತ್ಯಂತ ಹಳೆಯ ಭಾಷೆಗಳ ಪದ-ಸಂಸ್ಕೃತ. ಇದರರ್ಥ ನಾವು ವ್ಯಕ್ತಿಗೆ ಮಾತ್ರವಲ್ಲದೆ ಅವನೊಳಗಿನ ದೈವತ್ವಕ್ಕೂ ಗೌರವ ನೀಡುತ್ತೇವೆ ಎಂದು ಮೋದಿ ಅವರು ನಮಸ್ತೆ ಟ್ರಂಪ್ ಹೆಸರಿನ ಬಗ್ಗೆ ತಿಳಿಸಿದರು.
ಭಾರತ-ಅಮೆರಿಕ ಸಂಬಂಧಗಳು ಇನ್ನು ಮುಂದೆ ಮೈಲುಗಲ್ಲು ಆಗಲಿವೆ ಎಂದರು. ಇನ್ನು ವಿಶ್ವದ ಪ್ರಥಮ ಮಹಿಳೆ ಮೆಲಾನಿಯಾ ಉಪಸ್ಥಿತಿಯು ನಮಗೆ ಗೌರವ ತಂದಿದೆ. ಆರೋಗ್ಯಕರ ಮತ್ತು ಸಂತೋಷದ ಅಮೆರಿಕಕ್ಕಾಗಿ ನೀವು ಮಕ್ಕಳಿಗಾಗಿ ಮತ್ತು ಸಮಾಜಕ್ಕಾಗಿ ನೀವು ಮಾಡಿದ ಕೆಲಸ ಶ್ಲಾಘನೀಯ ಎಂದರು. ಟ್ರಂಪ್ ಮಾತನಾಡಿ ಇಂಡಿಯಾ ಅದ್ಭುತ. ಹಲವು ಕಲೆಗಳ ಬೀಡು ಎಂದರು. ಜೊತೆಗೆ ಮಾರಕವಾದ ಭಯೋತ್ಪಾದನೆಯನ್ನು ಮಟ್ಟ ಹಾಕುವುದಾಗಿ ತಿಳಿಸಿದರು.