ಬೆಂಗಳೂರು: ಶತ್ರು ಆಸ್ತಿಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮೆಗಾ ಪ್ಲಾನ್ ಮಾಡಿದ್ದು, ಕೇಂದ್ರ ಗೃಹ ಇಲಾಖೆಯ ಗುರುತಿಸಿರುವ 9,400 ಆಸ್ತಿಗಳ ಪೈಕಿ 21 ಆಸ್ತಿಗಳು ಕರ್ನಾಟಕದಲ್ಲಿವೆ ಎಂದು ತಿಳಿದು ಬಂದಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಈ ಆಸ್ತಿಗಳು ಇದ್ದು ಹರಾಜಿಗೆ ಕೇಂದ್ರ ಸರಕಾರ ಸಿದ್ಧತೆಗಳನ್ನು ನಡೆಸುತ್ತಿದೆ. ಯಾರದು 21 ಜನ ಗೊತ್ತಾ!?
ಬೆಂಗಳೂರಿನ ಗ್ರಾನ್ ರೋಡ್‌ನಲ್ಲಿರುವ ಮೈಕಲ್ ಥಾಮ್ ಎಂಬ ಚೀನಾ ಪ್ರಜೆಯ ಒಡೆತನದಲ್ಲಿರುವ ಆಸ್ತಿ ಹಜಾರು ಹಾಕಲು ಸರಕಾರ ಮುಂದಾಗಿದೆ. ಅಲ್ಲದೆ ಉಡುಪಿಯ ಪನ್ರಿ ಮರಿಟ್ಸ್ ಎಂಬ ಪಾಕಿಸ್ತಾನಿ ಪ್ರಜೆಗೆ ಸೇರಿರುವ ಎರಡು ಆಸ್ತಿಗಳು, ಬೆಂಗಳೂರಿನ ವಿಕ್ಟೋರಿಯಾ ರಸ್ತೆಯಲ್ಲಿರುವ ಜೋಸೆಫ್ ರಾಜಮ್ಮ ಹಾಗೂ
ಕಲಾಸಿಪಾಳ್ಯದಲ್ಲಿರುವ ಸೈಯದ್ ಅಬ್ದುಲ್ ಶುಕೂರ್ ಎಂಬ ಪಾಕಿಸ್ತಾನಿ ಪ್ರಜೆಯ ಆಸ್ತಿ ಈ ಪಟ್ಟಿಯಲ್ಲಿದೆ.
ಬೀದರ್ ಜಿಲ್ಲೆಯ ನಿಜಾಮ್ ಅಹಮ್ಮದ್, ಬಿಜಾಪುರದ ಶಫೀವುಲ್ಲಾ ಪಟೇಲ್ ಹಾಗೂ ಇಬ್ರಾಹೀಂ ಸುಲ್ತಾನ್, ಕಲಬುರಗಿಯಲ್ಲಿ ಖನೀಜಾ ಫಾತಿಮಾ ಎಂಬುವವರಿಗೆ ಸೇರಿದ ಒಂಬತ್ತು ಆಸ್ತಿಗಳನ್ನು ಸರಕಾರ ಗುರುತಿಸಿದೆ. ಇವರೆಲ್ಲರೂ ದೇಶ ವಿಭಜನೆಯ ಬಳಿಕ ಪಾಕಿಸ್ತಾನ ಹಾಗೂ ಚೀನಾದ ಪೌರತ್ವ ಪಡೆದ ಪ್ರಜೆಗಳಾಗಿದ್ದಾರೆ.
ಶತ್ರು ಆಸ್ತಿ ಎಂದರೇನು?
ದೇಶ ವಿಭಜನೆ ಸಂದರ್ಭದಲ್ಲಿ ಹಾಗೂ ಇದರ ಬಳಿಕ ಭಾರತ ತೊರೆದು ಪಾಕಿಸ್ತಾನ ಮತ್ತು ಚೀನಾದ ಪೌರತ್ವ ಪಡೆದವರ ಆಸ್ತಿ ಭಾರತದಲ್ಲಿದೆ. ಈ ಆಸ್ತಿಗಳನ್ನು ಸರಕಾರ 'ಶತ್ರು ಆಸ್ತಿ' ಎಂದು ಕರೆಯುತ್ತದೆ. ದೇಶದಲ್ಲಿ ಪಾಕಿಸ್ತಾನ ಪ್ರಜೆಗಳ ಒಟ್ಟು 9,280 ಆಸ್ತಿಗಳನ್ನು ಕೇಂದ್ರ ಸರಕಾರ ಗುರುತಿಸಿದೆ. ಈ ಪೈಕಿ ಉತ್ತರಪ್ರದೇಶದಲ್ಲಿ 4,991,ಪಶ್ಚಿಮ ಬಂಗಾಳದಲ್ಲಿ 2,735 ಹಾಗೂ ರಾಷ್ಟ್ರ ದೆಹಲಿಯಲ್ಲಿ 487ಶತ್ರು ಆಸ್ತಿಗಳಿವೆ. ದೇಶಾದ್ಯಂತ ಗುರುತಿಸಲಾಗಿರುವ 9,400'ಶತ್ರು ಆಸ್ತಿ’ ಮಾರಾಟದಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುವ ಅಂದಾಜಿದೆ. ಶತ್ರು ಆಸ್ತಿಗಳು ಸದ್ಯ ಕಸ್ಟೋಡಿಯನ್ ಆಫ್ ಎನಿಮಿ ಪ್ರಾಪರ್ಟಿ ಆಫ್ ಇಂಡಿಯಾ ಸುಪರ್ದಿಯಲ್ಲಿದ್ದು, ಇವುಗಳ ವಿಸರ್ಜನೆಯ ಉಸ್ತುವಾರಿಯನ್ನು ಎರಡು ಉನ್ನತ ಮಟ್ಟದ ಸಮಿತಿಗಳಿಗೆ ವಹಿಸಲಾಗುವುದೆಂದು ತಿಳಿದುಬಂದಿದೆ.