ಹೊಸ ಪಕ್ಷ ಸ್ಥಾಪಿಸುತ್ತಾರಾ ರಜನೀಕಾಂತ್?

Soma shekhar

ಚೆನ್ನೈ : ನಟ ರಜನೀಕಾಂತ್ ಇವತ್ತು ಸುದ್ದಿಕೇಂದ್ರದಲ್ಲಿ ಇದ್ದಾರೆ. ಹೌದು ಇಂದು ರಜನೀಕಾಂತ್ ಅವರು 'ರಜನಿ ಮಕ್ಕಳ್ ಮಂದ್ರಮ್' ನ ಪದಾಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಮಹತ್ವದ ರಾಜಕೀಯ ನಡೆ ಘೋಷಿಸುವ ನೀರಿಕ್ಷೆ ಇದೆ. ಹೀಗಾಗಿ ಇಂದು ಬೆಳಿಗ್ಗೆ ಅವರು ಪಧಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.ನಂತರ ಚೆನ್ನೈನ ಒಂದು ಐಷಾರಾಮಿ ಹೋಟಲ್ ನಲ್ಲಿ ಪತ್ರಿಕಾಗೋಷ್ಟಿ ಕರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಹೌದು, ಈ ಹಿಂದೆಯೂ ರಜನೀಕಾಂತ್ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ರಾಜಕೀಯ ಪ್ರವೇಶವನ್ನೂ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ತಮ್ಮ ಪಕ್ಷ ಆರಂಭಿಸುವ ದಿನಾಂಕ ಸೇರಿದಂತೆ ಕೆಲವು ಮಹತ್ವದ ಘೋಷಣೆಗಳನ್ನು ಇಂದು ರಜನೀಕಾಂತ್ ಅವರು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಹೊಸ ಪಕ್ಷ ಘೋಷಣೆ ಮಾಡುತ್ತಾರೆ ತಲೈವಾ?

 

ಕಳೆದ ವಾರವೂ ರಜನೀಕಾಂತ್ ಅವರು ತಮ್ಮ ಪದಾಧಿಕಾರಿಗಳ ಜೊತೆಗೆ ಗೋಪ್ಯವಾಗಿ ಮಾತುಕತೆ ನಡೆಸಿದ್ದರು. ಆಮೇಲೇ ಅವರು ಮಾಧ್ಯಮಗಳಿಗೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಒಂದು ಅಸಮಾಧಾನ ಇದೆ ಎಂದಷ್ಟೇ ಅವರು ತಿಳಿಸಿದ್ದರು.ಹೀಗಾಗಿ ಇಂದು ರಜನೀಕಾಂತ್ ಅವರು ತಮ್ಮ ಸ್ಪಷ್ಟ ನಿಲುವನ್ನು ತಿಳಿಸಬಹುದು.

 

ರಜನೀಕಾಂತ್ ಅವರು 2017ರ ಡಿಸೆಂಬರ್ 2017ರಲ್ಲಿಯೇ ರಾಜಕೀಯ ಪ್ರವೇಶ ಮಾಡುವ ಕುರಿತು ಘೋಷಣೆ ಮಾಡಿದ್ದರು. ಆಗಿನಿಂದಲೂ ರಾಷ್ಟ್ರೀಯ ಪಕ್ಷ ಸೇರುವ ಕುರಿತು ಊಹಾಪೋಹಗಳು ಹರಿದಾಡಿದ್ದರು. ಇಲ್ಲವೇ ಹೊಸ ಪಕ್ಷವೊಂದನ್ನು ರಜನಿಕಾಂತ್ ಕಟ್ಟುತ್ತಾರೆ ಎನ್ನುವ ಮಾತುಗಳೂ ಕೇಳಿ ಬಂದಿದ್ದವು. ಈಗಾಗಲೇ ತಮಿಳೂನಾಡಿನ ಮತ್ತೊಬ್ಬ ಖ್ಯಾತ ನಟ ಕಮಲ್ ಹಾಸನ್ ಅವರು, ಮಕ್ಕಳ ನೀಧಿ ಮಯ್ಯಂ ಪಕ್ಷವನ್ನು ಕಟ್ಟಿ ರಾಜಕೀಯದಲ್ಲಿ ಸಕ್ರಿಯ ಆಗಿದ್ದಾರೆ. ಈ ಹಿಂದೆ ಎಂಜಿಆರ್, ಜಯಲಲಿತಾ ರಾಜಕೀಯ ಪ್ರವೇಶದಿಂದ ತಮಿಳುನಾಡಿನ ರಾಜಕೀಯ ಚಿತ್ರಣವೇ ಬದಲಾಗಿದೆ.  ಇದೀಗ ರಜನೀಕಾಂತ್ ಅದೇನು ಮೋಡಿ ಮಾಡುತ್ತಾರೋ ಗೊತ್ತಿಲ್ಲ

 

ಆದರೆ ರಜಜನೀಕಾಂತ್ ರಾಜಕೀಯ ಪ್ರವೇಶ ಮಾಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನೇಕ ಮೀಮ್, ಟ್ರಾಲ್ ಗಳು ಕಂಡು ಬರುತ್ತಿವೆ. ರಜನಿಕಾಂತ್ ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟನನ್ನು ರಾಜಕೀಯ ಚದುರಂಗದಾಟದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

Find Out More:

Related Articles: