ಬೆಂಗಳೂರು: ಇಬ್ಬರಿಗೆ ಕರೋನಾ ಸೋಂಕು ದೃಢಪಟ್ಟಿದೆ
ಕರ್ನಾಟಕ : ರಾಜ್ಯದಲ್ಲಿ ದಿನೇ ದಿನೇ ಕರೋನಾ ಭೀತಿ ಹೆಚ್ಚಾಗುತ್ತಲೇ ಇದೆ. ಸೋಮವಾರ ಒಂದೇ ದಿನಲ್ಲಿ ರಾಜ್ಯದಲ್ಲಿ ಮೂವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇರುವ ಇಬ್ಬರಿಗೆ ಹಾಗೂ ಕಲಬುರಗಿಯಲ್ಲಿ ಇರುವ ಮತ್ತೊಬ್ಬರಿಗೆ ಈ ಕರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ ಆಗಿದೆ. ಇದರಿಂದ ರಾಜ್ಯದ ಜನರು ಮತ್ತು ಭಯಬೀತಿಯಿಂದ ಇರುವಂತೆ ಆಗಿದೆ.
ಹೌದು ಸೋಮವಾರವಷ್ಟೇ ಬೆಂಗಳೂರು ಮೂಲದ ಒಒಬ್ಬ ಟೆಕ್ಕಿಗೆ (ವಯಸ್ಸು 32) ಕರೋನಾ ಸೋಂಕು ತಗುಲಿದೆ. ಇದಾದ ನಂತರ ಮತ್ತಿಬಬ್ಬರಿಗೆ ಸೋಂಕು ತಗಲಿರುವ ವರದಿ ಹೊರಬಿದ್ದಿದೆ ಎಂದು ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ. ಹೊಸಾದಗಿ ಸೋಂಕು ದೃಢಪಟ್ಟ ಮೂವರ ಪೈಕಿ ಒಬ್ಬ ಬೆಂಗಳೂರು ಟೆಕ್ಕಿ ಈಗಾಗಲೇ ಸೋಂಕಿತ. ಇನ್ನು ಮತ್ತೊಬ್ಬರು 50 ವರ್ಷದವರು. ಇವರಿಬ್ಬರು ಸಹೋದ್ಯೋಗಿ ಆಗಿದ್ದವವರು. ಇಬ್ಬರೂ ಮಾರ್ಚ್ 8 ರಂದು ಲಂಡನ್ ನಿಂದ ಭಾರತಕ್ಕೆ ಆಗಮಿಸಿದ್ದರು.
ಇವರು ನಗರಕ್ಕೆ ಬಂಧ ತಕ್ಷಣ ಸೋಂಕು ಕಾಣಿಸಿಕೊಂಡಿದ್ದರಿಂದ ಅವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಗಾಂದಿ ಆಸ್ಪತ್ರೆಗೆ ದಾಖಲು ಮಾಡಿ, ಪರೀಕ್ಷೆ ನಡೆಸಲಾಗಿತ್ತು. ಇನ್ನು ಮಾರ್ಚ್ 9 ರಂದು ರೋಗದ ಲಕ್ಷಣ ಕಾಣಿಸಿಕೊಂಡಿದ್ದರಿಂದ ರಾಜೀವ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿಗೆ ಎರಡನೇ ಬಾರಿ ಸೋಂಕು ತಗುಲಿತ್ತು. ಪರೀಕ್ಷೆ ನಡೆದು ಇದು ಹೊರಬರುವುದಕ್ಕೆ ಸ್ವಲ್ಪ ತಡವಾಗಿದೆ.
ಇಬ್ಬರಿಗೆ ಸೋಂಕು ದೃಡವಾದ ನಂತರ ಅವರನ್ನು ಮನೆಯಿಂದ ಹೊರಗಿಡುವಂತೆ ಸೂಚಿಸಲಾಗಿತ್ತು. ಈ ವ್ಯಕ್ತಿಗೆ ರೋಗ ಲಕ್ಷಣ ಕಂಡು ಬಂದ ನಂತರ ಎರಡನೇ ಹಂತದ ಪರೀಕ್ಷೆ ಮಾಡಲಾಗಿತ್ತು. ಈ ವೇಳೆಯೂ ಸೋಂಕು ದೃಢಪಟ್ಟಿದೆ. ಇದರ ಬಗ್ಗೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಒಟ್ಟಿನಲ್ಲಿ ಕರೋನಾ ಭೀತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದಿನಕ್ಕೆ ಒಂದು ಹೊಸ ಸೋಂಕಿತರು ದೃಢಪಡುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಸಾರ್ವಜನಿಕರು ಜಾಗೃತೆಯಿಂದ ಇದ್ದು ಮುನ್ನೆಚೆರಿಕೆ ಕ್ರಮಗಳನ್ನು ಪಾಲಿಸುವುದು ಒಳಿತು.