ಕೊರೋನಾ ವಿರುದ್ಧ ಸಮರ ಸಾರಲು ಈ ಒಂದು ಕಾನ್ಫರೆನ್ಸ್ ವೇದಿಕೆಯಾಗಲಿದೆಯಾ?
ವಿಶ್ವಕ್ಕೇ ಮಹಾ ಮಾರಿಯಂತೆ ಹರಡಿ ಮರಣ ಮೃದಂಗವನ್ನು ಭಾರಿಸುತ್ತಿರು ಕೊರೋನಾ ವೈರಸ್ ಅನ್ನು ನಿಯಂತ್ರಿಸಲು ಪ್ರಪಂಚದ ವಿವಿಧ ದೇಶದ ನಾಯಕರು ಅಧ್ಯಕ್ಷರು ಪ್ರಯತ್ನಿಸುತ್ತಿದ್ದರೂ ಕೂಡ ಹಿಡಿತಕ್ಕೆ ಸಿಲುಕದೆ ಕೈಮೀರಿ ಬೆಳೆಯುತ್ತಿರುವ ಈ ವೈರಸ್ನನ್ನು ಮಟ್ಟ ಹಾಕಲು ವಿಶ್ವದ ಕೆಲವು ನಾಯಕರು ಈ ಬಗ್ಗೆ ಕಾನ್ಫರೆನ್ಸ್ ನಡೆಸಲು ತೀರ್ಮಾನಿಸಿದ್ದಾರೆ ಅಷ್ಟಕ್ಕೂ ಆ ಕಾನ್ಫರೆನ್ಸ್ ಎಲ್ಲಿ ನಡೆಯಲಿದೆ ಮತ್ತು ಇದರಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
ಕರೊನಾ ಸೋಂಕು ಅಔಗಿIಆ೧೯ ಹರಡದಂತೆ ಜಗತ್ತಿನ ಎಲ್ಲ ರಾಷ್ಟ್ರಗಳೂ ತಮ್ಮದೇ ಆದ ವಿಧಾನದಲ್ಲಿ ಪ್ರಯತ್ನಿಸುತ್ತಿವೆ. ಈ ನಡುವೆ, ಭಾರತ ಸಾರ್ಕ್ ರಾಷ್ಟ್ರಗಳ ನಾಯಕರ ವಿಡಿಯೋ ಕಾನ್ಫರೆನ್ಸ್ ಅನ್ನು ಕೂಡ ಮಾಡಿತ್ತು. ಇದರ ಬೆನ್ನಿಗೆ ಈಗ ಸೌದಿ ಅರೇಬಿಯಾದ ರಾಜ ಸಲ್ಮಾನ್ ಅಧ್ಯಕ್ಷತೆಯನ್ನು ಎಕ್ಸ್ಟ್ರಾರ್ಡಿನರಿ #ಉ೨೦ಗಿiಡಿಣuಚಿಟSummiಣ ಗುರುವಾರ ನಡೆಯಲಿದೆ. ಇದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಶೃಂಗವಾಗಿದ್ದು, ರಷ್ಯನ್ ಪ್ರೆಸಿಡೆಂಟ್ ವ್ಲಾದಿಮಿರ್ ಪುತಿನ್ ಸೇರಿ ಕೆಲವು ಜಾಗತಿಕ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರೂ ಈ ಐತಿಹಾಸಿಕ ಶೃಂಗದಲ್ಲಿ ಭಾಗವಹಿಸುತ್ತಿದ್ದಾರೆ.
ಅಔಗಿIಆ೧೯ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಕಾರ್ಯಯೋಜನೆ ಹಮ್ಮಿಕೊಂಡು ಮುನ್ನಡೆಸುವ ಸಲುವಾಗಿ ಕಿಂಗ್ ಸಲ್ಮಾನ್ ಅಧ್ಯಕ್ಷತೆಯಲ್ಲಿ ಈ ಶೃಂಗ ನಡೆಯಲಿದೆ. ಇಲ್ಲಿ ಸೋಂಕು ಮತ್ತು ಅದರಿಂದ ಜನರು ಹಾಗೂ ಆರ್ಥಿಕತೆ ಮೇಲಾಗುವ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಸೌದಿ ಅರೇಬಿಯಾ ಸರ್ಕಾರ್ ಬುಧವಾರ ಬೆಳಗ್ಗೆ ತಿಳಿಸಿದೆ.
ಸಾಕಷ್ಟು ಟೀಕೆಗಳನ್ನು ಎದುರಿಸಿದ ಬಳಿಕ ಸೌದಿ ಅರೇಬಿಯಾ ಅಧ್ಯಕ್ಷತೆಯ ಜಿ೨೦ ಈ ಶೃಂಗ ನಡೆಸಲು ತೀರ್ಮಾನಿಸಿದ್ದು ಎಂಬ ಆರೋಪವೂ ಅಲ್ಲಿನ ಮಾಧ್ಯಮಗಳ ವರದಿಯಲ್ಲಿ ಕಂಡುಬಂದಿದೆ. ಉ೨೦ ಸದಸ್ಯರು ಈ ಶೃಂಗದಲ್ಲಿ ಭಾಗಿಯಾಗುತ್ತಿದ್ದು, ಜತೆಗೆ ಸ್ಪೇನ್, ಜೋರ್ಡಾನ್, ಸಿಂಗಾಪುರ, ಸ್ವಿಜರ್ಲೆಂಡ್ ಮುಂತಾದ ಸಂತ್ರಸ್ತ ರಾಷ್ಟ್ರಗಳ ನಾಯಕರ ಜತೆಗೆ ಮಾತುಕತೆ ನಡೆಸಲಿದ್ದಾರೆ.
ಇವರಲ್ಲದೆ, ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ವ್ಯಾಪಾರ ಸಂಘಟನೆಯ ಪ್ರತಿನಿಧಿಗಳೂ ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರಾದೇಶಿಕ ಸಂಘಟನೆಗಳ ಪ್ರತಿನಿಧಿಗಳೂ ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಚೀನಾ ಮತ್ತು ಫ್ರಾನ್ಸ್ಗಳು ಕೂಡ ವಿಡಿಯೋ ಶೃಂಗವನ್ನು ಬೆಂಬಲಿಸಿದ್ದು, ಈ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳಲಿವೆ.
ಈ ಶೃಂಗದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು, ಈ ಶೃಂಗದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಾತರದಿಂದ ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.