ಇಂದು ಮುಸ್ಲಿಂ ಸಮುದಾಯದ ನಾಯಕರ ಜೊತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆ

Soma shekhar

ದೆಹಲಿಯಲ್ಲಿ ನಡೆದ ನಿಮಾಮುದ್ದೀನ್‌ನಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಸಾಕಷ್ಟು ಜನರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವರನ್ನು ಕರೆತಂದು ಚಿಕಿತ್ಸೆಯನ್ನು ಕೊಡಿಸಲಾಗುತ್ತಿದ್ದರೂ ಕೂಡ ಇನ್ನು ಕೆಲವರು ಪತ್ತೆಯಾಗಿಲ್ಲ. ಈ ಬಗ್ಗೆ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದು ಇಲ್ಲಿದೆ  ನೋಡಿ. 

 

ಇತ್ತೀಚಿನ ಕೆಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿರುವ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಸಭೆ. ಈ ಒಂದು ಸಭೆಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು ಕೆಲವರು ಸಾವನ್ನಪ್ಪಿದ್ದಾರೆ ಇದಕ್ಕೆ ಮುಂಜಾಗ್ರತವಾಗಿ ನಿಜಾಮುದ್ದೀನಲ್ಲಿ ಪಾಲ್ಗೊಂಡಿದ್ದ ಕೆಲವರನ್ನು ಗುರುತಿಸಿ ಕರೆತಂದು ಚಿಕಿತ್ಸೆ ನೀಡಲಾಗುತ್ತಿದ್ದರೂ ಕೂಡ ಇನ್ನೂ ಕೆಲವರು ಪತ್ತೆಯಾಗದ ಕಾರಣ ಅವರೆಲ್ಲರೂ ಸ್ವಯಂಪ್ರೇರಿತವಾಗಿ ಬಂದು ಚಿಕಿತ್ಸೆ ಪಡೆಯುವಂತೆ ಮನವಿಯನ್ನು ಮಾಡಲಾಗಿತ್ತು.

 

 ಈ ಸಂದರ್ಭದಲ್ಲಿ ಕಳೆದ ರಾಜ್ಯದಲ್ಲಿ ನಿನ್ನೆ 14 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ದೆಹಲಿ ನಿಜಾಮುದ್ದೀನ್ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದವರಲ್ಲೇ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಸಭೆಗೆ ಹೋಗಿ ಬಂದವರು ಯಾರು ಇದ್ದೀರೋ ಎಲ್ಲರೂ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಸರ್ಕಾರ ಕೂಡ ಸೂಚನೆ ಕೊಟ್ಟಿದೆ.

 

ಈ ನಿಟ್ಟಿನಲ್ಲಿ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮುಸ್ಲಿಂ ಸಮುದಾಯದ ನಾಯಕರ ಜೊತೆ ಸಭೆ ಕೂಡ ನಡೆಸಲಿದ್ದಾರೆ. ಬೆಳಗ್ಗೆ 10;30 ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಸ್ಲಿಂ ಮುಖಂಡರ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಮುಸ್ಲಿಂ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಮತ್ತು ಸರ್ಕಾರಕ್ಕೆ ಸಹಕಾರ ನೀಡುವ ಕುರಿತಂತೆ ಚರ್ಚಿಸಲಾಗುತ್ತದೆ. ಇದರಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

 

ಸಭೆ ನಡೆಸುವ ಬಗ್ಗೆ ನಿನ್ನೆ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಎಲ್ಲ ಸಿಎಂಗಳಿಗೆ ಸಲಹೆ ನೀಡಿದ್ದರು. ಮುಸ್ಲಿಂ ಧರ್ಮಗುರುಗಳ ಸಹಕಾರ ಪಡೆಯಿರಿ ಅಂತ ಮೋದಿ ಸಲಹೆ ನೀಡಿದ ಬೆನ್ನಲ್ಲೇ ಇಂದು ಬಿಎಸ್ವೈ ಮುಸ್ಲಿಂ ನಾಯಕರ ಸಭೆಯನ್ನ ಕರೆದಿದ್ದಾರೆ.

 

ಈ ಸಭೆಯಲ್ಲಿ ಸರ್ಕಾರ ಸಮುದಾಯದ ಕೆಲವು ಮುಖಂಡರನ್ನು ಕಡೆದು ಯಾರು ದೆಹಲಿಯ ನಿಜಾಮುದ್ದೀನ್ನಲ್ಲಿ ಪಾಲ್ಗೊಮಡಿದ್ದರೋ ಅವರನ್ನು ಸ್ವಯಂಪ್ರೇರಿತವಾಗಿ ಚಿಕಿತ್ಸೆ ಪಡೆಯಲು ಬರುವಂತೆ ಮಾಡಬೇಕು ಎಂಬುದನ್ನು ಮನವಿಯನ್ನು ಮಾಡಲಿದ್ದಾರೆ.

 

Find Out More:

Related Articles: