ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಯುವಕರೇ ಹೆಚ್ಚು : ಆರೋಗ್ಯ ಸಚಿವಾಲಯದಿಂದ ಹೊರಬಿತ್ತು ಮಹತ್ವದ ಮಾಹಿತಿ

Soma shekhar

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಈಗಾಗಲೇ ಸುಮಾರು 2 ಸಾವಿಕ್ಕೂ ಅಧಿಕವಾಗಿದೆ ಈ ಸೋಂಕಿತರಲ್ಲೇ ಅಧಿಕವಾಗಿ ಯುವಕರೇ ಕೊರೋನಾ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂಬ ಮಹತ್ತರದ ವಿಷಯವನ್ನು ಆರೋಗ್ಯ ಸಚಿವಾಲಯ ಹೊರಹಾಕಿದೆ.  ಈ ಒಂದು ವಿಷಯದಿಂದ ಮತ್ತಷ್ಟು ಆತಂಕದಲ್ಲಿ ಬೀಳಲಿದ್ದಾರೆ. ಯುವಕರು ಕೊರೊನಾ ಭೀತಿಯನ್ನು ಮತ್ತಷ್ಟು ಪ್ರಮಾಣದಲ್ಲಿ ಎದುರಿಸವಂತಾಗಿದೆ ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

 

ಭಾರತದಲ್ಲಿ ಅತಿ ಹೆಚ್ಚು ಕರೊನಾ ಸೋಂಕಿತ ಪ್ರಕರಣಗಳು ೨೧ ರಿಂದ ೪೦ರ ವಯೋಮಿತಿ ಒಳಗೆ ಪತ್ತೆಯಾಗಿರುವುದಾಗಿ ಕೇಂದ್ರ ಸರ್ಕಾರ ಶನಿವಾರ ಖಚಿತಪಡಿಸಿದ್ದು, ಯುವ ಸಮೂಹ ಕರೊನಾ ಬಗ್ಗೆ ತುಂಬಾ ಎಚ್ಚರವಹಿಸಲು ಸಲಹೆ ನೀಡಿದೆ.

 

ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಆರೋಗ್ಯ ಸಚಿವಾಲಯ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿತು. ಭಾರತದ 42 ರಷ್ಟು ರೋಗಿಗಳು 21 ರಿಂದ 40 ರ ವಯೋಗುಂಪಿಗೆ ಸೇರಿರುವುದಾಗಿ ವಯಸ್ಸಿನ ಆಧಾರದ ಮೇಲೆ ನಡೆದ ಕರೊನಾ ಪ್ರಕರಣಗಳ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ.

 

41 ರಿಂದ 50 ರೊಳಗಿನ ವಯೋಗುಂಪು ಎರಡನೇ ಹೆಚ್ಚು ಕರೊನಾ ಬಾಧಿತ ರೋಗಿಗಳಾಗಿದ್ದು, ಶೇ. 33 ರಷ್ಟು ಪ್ರಕರಣಗಳು ಈ ವಯೋಮಿತಿಯಲ್ಲಿ ಕಂಡುಬಂದಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಕರೊನಾ ಸೋಂಕಿನ ಹೆಚ್ಚಿನ ಅಪಾಯದ ಗುಂಪೆಂದು ಪರಿಗಣಿಸಲಾಗಿದೆ. 17 ರಷ್ಟು ಪ್ರಕರಣಗಳು ಕಂಡುಬಂದಿದ್ದರೂ, ಇವರಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಹೀಗಾಗಿ ಈ ವಯೋಮಿತಿಯವರನ್ನು ಅಪಾಯಕಾರಿ ಎಂದು ಗುರುತಿಸಲಾಗಿದೆ.

 

ಕೇವಲ 9 ರಷ್ಟು ಕರೊನಾ ಸೋಂಕಿತ ಪ್ರಕರಣಗಳು 20 ರ ವಯೋಮಿತಿಯೊಳಗೆ ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

 

ಆರೋಗ್ಯ ಸಚಿವಾಲಯದ ವಿಶ್ಲೇಷಣೆಯ ಪ್ರಕಾರ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ ಹೆಚ್ಚಿನ ಕರೊನಾ ಸೋಂಕಿತ ಪ್ರಕರಣಗಳು ಈವರೆಗೆ ಕಂಡುಬಂದಿದೆ. ಸೋಂಕಿಗೆ ಒಳಗಾಗುವವರಲ್ಲಿ ಯುವ ಜನಾಂಗವೇ ಹೆಚ್ಚಿದ್ದು, 83  ರಷ್ಟು ರೋಗಿಗಳು 50 ರ ವಯೋಮಿತಿಯೊಳಗೆ ಕಂಡುಬಂದಿದ್ದಾರೆ.

 

ಪರಿಣಿತರು ಹೇಳುವ ಪ್ರಕಾರ ಯುವ ಸಮೂಹವೂ ಕೂಡ ಸೋಂಕಿಗೆ ಗುರಿಯಾಗಿ ಗಂಭೀರತೆ ಎದುರಿಸಲಿದ್ದಾರೆ. ಸಾಯುವ ಸಾಧ್ಯತೆಯು ಇದೆ ಎಂದಿದ್ದಾರೆ. ಆರಂಭದಲ್ಲಿ ವಯಸ್ಸಾದವರಲ್ಲಿ ಮರಣ ಪ್ರಮಾಣ ಅಧಿಕವಾಗಿರುತ್ತದೆ. ಆದರೆ, ಯುವ ಸಮೂಹ ಸೋಂಕಿನಿಂದ ಸಾಯುವುದೇ ಇಲ್ಲವೆಂದು ಹೇಳಲಾಗದು ಎಂದು ಎಚ್ಚರಿಸಿದ್ದಾರೆ.

 

 

 

Find Out More:

Related Articles: