ಏ.30 ರವರೆಗೂ ಲಾಕ್ಡೌನ್ ವಿಸ್ತರಣೆ : ಈ ಭಾರಿಯ ಲಾಕ್ ಡೌನ್ ಹಿಂದಿನ ಲಾಕ್ ಡೌನ್ಗಿಂತ ಭಿನ್ನವಾಗಿರಲಿದೆಯಂತೆ..!!
ಕೊರೋನಾ ಹಾವಳಿ ಭಾರತದಲ್ಲಿ ಜಾಸ್ತಿಯಾಗುತ್ತಿದ್ದು ಇದನ್ನು ಮಣಿಸುವ ಉದ್ದೇಶದಿಂದ ಭಾರತವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಿದರೂ ಕೂಡ ಯಾವುದೇ ಪ್ರಯೋಜನ ವಾಗದ ಹಿನ್ನಲೆಯಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಲು ಪ್ರಧಾನಿ ಮೋದಿಯವರು ರಾಷ್ಟ್ರದ ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳ ಒಪ್ಪಿಗೆಯನ್ನು ಪಡೆಯುವ ಉದ್ದೇಶದಿಂದ ಇಂದು ವಿಡಿಯೋ ಕಾನ್ಪರೆನ್ಸ್ ಮಾಡುವ ಮೂಲಕ ದೀರ್ಘಕಾಲದ ಚರ್ಚೆಯನ್ನು ನಡೆಸಲಾಯಿತು. ಈ ಚರ್ಚೆಯ ನಂತರ ರಾಜ್ಯದ ಮುಖ್ಯ ಮಂತ್ರಿಯವರು ರಾಜ್ಯದ ಜನತೆಗೆ ಕೆಲವು ವಿಚಾರವನ್ನು ತಿಳಿಸಿದ್ದಾರೆ ಅಷ್ಟಕ್ಕೂ ಯಡಿಯೂರಪ್ಪನವರು ತಿಳಿಸಿದ ವಿಚಾರ ಏನು ಗೊತ್ತಾ..?
ಕೊರೊನಾ ವೈರಸ್ ನಿಯಂತ್ರಿಸುವ ಕ್ರಮವಾಗಿ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಕರ್ನಾಟಕದಲ್ಲಿ ಏಪ್ರಿಲ್ 30 ರವರೆಗೆ ವಿಸ್ತರಿಸಲಾಗಿದೆ ರಾಜ್ಯದಲ್ಲಿ ಏ.30 ರವರೆಗೂ ಲಾಕ್ಡೌನ್ ಅನಿವಾರ್ಯವಾಗಿರಲಿದೆ. ಆದರೆ ಮುಂದಿನ ಎರಡು ವಾರಗಳ ಲಾಕ್ಡೌನ್ ಹಿಂದಿನ ಲಾಕ್ಡೌನ್ ಗಿಂತಲೂ ವಿಭಿನ್ನವಾಗಿರುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಜೊತೆಗಿನ ಸಭೆಯ ಮಾಹಿತಿಗಳನ್ನು ನೀಡಿದರು. "ಎ.30 ರವರೆಗೂ ಲಾಕ್ಡೌನ್ ಅನಿವಾರ್ಯ. ಆದರೆ ಈ ಲಾಕ್ಡೌನ್ ಅವಧಿಯು ಮತ್ತಷ್ಟು ಕಠಿಣವಾಗಿರಲಿದೆ. ಲಾಕ್ಡೌನ್ ವೇಳೆ ಸರಕಾರಿ ಕಚೇರಿಗಳು ಭಾಗಶಃ ತೆರೆಯಲು ಅನುಮತಿ ನೀಡಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಮುಂದಿನ 15 ದಿನಗಳ ಲಾಕ್ ಡೌನ್ ಬಗ್ಗೆ ಮಾರ್ಗಸೂಚಿ ಹೊರಡಿಸುತ್ತೇವೆ. ಈ ವೇಳೆ ಲಾಕ್ಡೌನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ ಎಂದು ಹೇಳಿದರು.
ದೇಶದಾದ್ಯಂತ ಹೇರಲಾಗಿರುವ 21 ದಿನಗಳ ಲಾಕ್ಡೌನ್ ಏಪ್ರಿಲ್ 14 ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ಸಂದರ್ಭದಲ್ಲಿ ಲಾಕ್ಡೌನ್ ವಿಧಿಸಿದ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಏಪ್ರಿಲ್ 30 ರವರೆಗೆ ಲಾಕ್ಡೌನ್ ವಿಸ್ತರಿಸಬೇಕೆಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು.
ರಾಜ್ಯದಲ್ಲಿನ ಸದ್ಯದ ಸ್ಥಿತಿ, ಸೋಂಕು ನಿವಾರಣೆ ನಿಟ್ಟಿನಲ್ಲಿ ಸಿದ್ಧತೆ ಮತ್ತು ಮುಂದಿನ ನಡೆಯ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು. ಮುಂದಿನ ಎರಡು ವಾರಗಳ ಲಾಕ್ಡೌನ್ ಕಳೆದ ಮೂರು ವಾರಗಳಿಗಿಂತ ಭಿನ್ನವಾಗಿರುತ್ತದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.
ಲಾಕ್ ಡೌನನ್ನು ಮೂರು ರೀತಿ ವಿಂಗಡನೆ ಮಾಡಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಅನವಶ್ಯಕವಾಗಿ ರಸ್ತೆಗಿಳಿಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇನ್ನು ಮದ್ಯಮಾರಾಟದ ಬಗ್ಗೆ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಮದ್ಯ ಮಾರಾಟ ಮಾಡಿದ್ರೆ ಏನೆಲ್ಲ ಸಮಸ್ಯೆಯಾಗಲಿದೆ ಎಂಬುದನ್ನು ಪರಿಶೀಲಿಸಿದ ನಂತ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ.
ಸರ್ಕಾರಿ ಕಚೇರಿಗಳನ್ನು ಭಾಗಶಃ ತೆರೆಯಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿ ನಂತ್ರ ಯಾವ ಕಾರ್ಖಾನೆಗಳು ತೆಗೆಯಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಲಿದೆ. ರೈತರಿಗೆ ಸಹಾಯ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.