ಅಮೇರಿಕಾದ ವೈಟ್ ಹೌಸ್ನಲ್ಲಿ ಕಾಣಿಸಿಕೊಂಡ ಕೊರೋನಾ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹೆಚ್ಚಿದ ಆತಂಕ
ವಾಷಿಂಗ್ಟನ್: ಕೊರೋನಾ ವೈರಸ್ ಇಡೀ ಜಗತ್ತನ್ನು ವ್ಯಾಪಿಸಿ ಜನರನ್ನು ಸಾಕಷ್ಟು ನಲುಗಿಸುತ್ತಿರುವ ಕರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ಎಲ್ಲೆಯ್ನು ಹೆಚ್ಚಿಸುತ್ತಲೇ ಇದೆ. ಇದರಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು, ಇನ್ನೂ ಅಧಿಕ ಮಂದಿ ಕೊರೋನಾ ವೈರಸ್ ಸೋಂಕಿಗೆ ನರಳುತ್ತಿದ್ದಾರೆ. ಕೊರೋನಾ ವೈರಸ್ ಸೋಂಕು ಇಡೀ ಪ್ರಪಂಚದ ಜನರು ಆತಂಕವನ್ನು ಹೆಚ್ಚಿಸಿದೆ. ಇದರಂತೆ ಅಮೇರಿಕಾದಲ್ಲೂ ಕೂಡ ಸಾಕಷ್ಟು ಜನರು ಸಾವನ್ನಪ್ಪಿದ್ದು ಅನೇಕ ಮಂದಿ ಸೋಂಕಿನಲ್ಲಿ ನರಳುತ್ತಿದ್ದಾರೆ. ಇದಕ್ಕೆಲ್ಲಾ ಸೂಕ್ತ ಕ್ರಮ ಕೈಗೊಂಡಿರುವ ಅಮೇರಿಕಾ ಸರ್ಕಾರಕ್ಕೆ ಈಗ ಮತ್ತೊಂದು ಆತಂಕ ಎದುರಾಗಿದೆ ಅಷ್ಟಕ್ಕೂ ಆತಂಕ ಏನು ಗೊತ್ತಾ..?
ಈ ಗಾಗಲೇ ಅಮೇರಿಕಾದಲ್ಲಿ ಕೊರೊನಾ ವೈರಸ್ ಇಂದಾಗಿ ಸಾವಿರಾರು ಜನರ ಮಾರಣಹೋಮವಾಗಿರುವುದು ಪ್ರಪಂಚದ ಜನತೆಯ ಎದೆಯಲ್ಲಿ ಆತಂಕ ಉಂಟುಮಾಡಿದೆ. ವಿಶ್ವದ ದೊಡ್ಡಣ್ಣನ ದೇಶದಲ್ಲಿಯೇ ಇಷ್ಟು ಸಾವು ನೋವುಗಳಾಗಿರುವಾಗ ಬೇರೆ ದೇಶಗಳ ಗತಿ ಹೇಗೆ ಎಂದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಆದರೆ ಈಗ ಅಮೇರಿಕಾದ ವೈಟ್ ಹೌಸ್ ನಲ್ಲಿಯೂ ಕೂಡ ಕೊರೋನಾ ವೈರಸ್ ಕಾಣಿಸಿ ಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಹೌದು..ಅಮೆರಿಕ ವೈಟ್ಹೌಸ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢವಾಗಿದೆ. ಶುಕ್ರವಾರ ಈ ಕುರಿತು ವೈಟ್ಹೌಸ್ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ. ಇದೀಗ, ವೈಟ್ಹೌಸ್ನ ಉಳಿದ ಸಿಬ್ಬಂದಿಗೆ ಕೊರೊನಾ ಆತಂಕ ಹೆಚ್ಚಾಗಿದೆ.
ಇನ್ನು ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೂ ಸೋಂಕು ತಗಲಿರಬಹುದು ಎಂಬ ಅನುಮಾನ ಕಾಡಿದೆ ಹಿನ್ನೆಲೆ, ಆ ಸಿಬ್ಬಂದಿ ಜೊತೆ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ ಎಂದು ಖಚಿತಪಡಿಸಿದ್ದಾರೆ.
ಮೈಕ್ ಪೆನ್ಸ್ ವಕ್ತರಾ ಕೇಟಿ ಮಿಲ್ಲರ್ ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಶುಕ್ರವಾರ ಸಂಜೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ, ಟ್ರಂಪ್ ಮತ್ತು ಮೈಕ್ ಪೆನ್ಸ್ ಇವರ ಜೊತೆ ಸಂಪರ್ಕ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಯುಎಸ್ನಲ್ಲಿ ಸೋಂಕು ಹೆಚ್ಚಾಗುವ ಭೀತಿಯಿಂದ ಈಗಾಗಲೇ ಜನರನ್ನು ಮನೆಯಲ್ಲೇ ಉಳಿದುಕೊಳ್ಳಿ ಎಂದು ಸೂಚಿಸಲಾಗಿದೆ. ಕಂಪನಿಗಳಿಗೆ ಮನೆಯಿಂದ ಕೆಲಸ ಮಾಡಲು ಆದೇಶಿಸಿದೆ.
ಇನ್ನು ಕಳೆದ ವಾರ ಬ್ರೆಜಿಲ್ನ ಸದಸ್ಯರೊಬ್ಬರು ಡೊನಾಲ್ಡ್ ಟ್ರಂಪ್ ಜೊತೆ ಡಿನ್ನರ್ ಪಾರ್ಟಿ ಮಾಡಿದ್ದರು. ಈ ಅನುಮಾನದಿಂದ ಟ್ರಂಪ್ ಈಗಾಗಲೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ನೆಗಿಟಿವ್ ಫಲಿತಾಂಶ ಬಂದಿದೆ. ಆದರೆ, ಮೈಕ್ ಪೆನ್ಸ್ ಟೆಸ್ಟ್ ಮಾಡಿಕೊಂಡಿಲ್ಲ.
ಯುಎಸ್‌ಎನಲ್ಲಿ ಇದುವರೆಗೂ 20,193 ಕೊರೊನಾ ಕೇಸ್ಗಳು ದೃಢಪಟ್ಟಿದೆ. ಅದರಲ್ಲಿ 279 ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಕೊರೊನಾ ಹರಡುವಿಕೆಯನ್ನು ತಡೆಯಲು ಎಲ್ಲ ರೀತಿಯ ಮುಂಜಾಗೃತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.