Fact check: ಮುಂಬೈ ರೈಲ್ವೇ ನಿಲ್ದಾಣದಲ್ಲಿ ವಲಸಿಗರು ಸೇರಲು ಕಾರಣರಾದವರು ಯಾರು..?

frame Fact check: ಮುಂಬೈ ರೈಲ್ವೇ ನಿಲ್ದಾಣದಲ್ಲಿ ವಲಸಿಗರು ಸೇರಲು ಕಾರಣರಾದವರು ಯಾರು..?

Soma shekhar

ಕೊರೋನಾ ಲಾಕ್ ಡೌನ್ ಆಗಿರುವಂತಹ ಸಂಧರ್ಭದಲ್ಲಿ ಇಡೀ ದೇಶವೇ ಲಾಕ್ ಡೌನ್‌ಗೆ ಒಳಗಾಗಿರುವಂತಹ ಸಂದರ್ಭದಲ್ಲಿ.  ಲಾಕ್ ಡೌನ್ ಗೆ ಸಂಬಂದ ಪಟ್ಟ ಎಲ್ಲಾ ಮಾಹಿತಿಗಳು ಮಾಧ್ಯಮಗಳ ಮಾಧ್ಯಮಗಳ ಮೂಲಕ ಪಡೆಯಬಹುದಾಗೊದೆ ಇದರ ಜೊತೆಗೆ ಕೊರೋನಾ ಸೋಂಕಿನ ಬಗ್ಗೆ ಮಾಹಿತಿಯನ್ನು ಹಾಗೂ ಜಾಗೃತಿಯನ್ನು ಮೂಡಿಸಬೇಕಾಗಿದ್ದು ಮಾಧ್ಯಮಗಳ ಕರ್ತವ್ಯವಾಗಿದೆಲ. ಆದರೆ ಇಂದಿನ ಮಾಧ್ಯಮಗಳು ಜನರನ್ನು ತಪ್ಪು ದಾರಿಗೆ ಸೆಳೆಯುವಂತಹ ಕೆಸವನ್ನು ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಹಿಂದಿ ಸುದ್ದಿವಾಹಿನಿಯೊಂದು ಖಚಿತವಿಲ್ಲದ ಸುದ್ದಿಯೊಂದನ್ನು ಪ್ರಸಾರ ಮಾಡಿ ವಸಿಗರ ಮೇಲೆ ಲಾಠಿ ಚಾರ್ಜ್ ಮಾಡುವಂತೆ ಮಾಡಿದೆ ಅಷ್ಟಕ್ಕೂ ಆ ಸುದ್ದಿವಾಹಿನಿ ಯಾವುದು ಗೊತ್ತಾ..?  

 

ಏಪ್ರಿಲ್ 14  ರಂದು, ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಭಾರಿ ಸಂಖ್ಯೆಯಲ್ಲಿ ವಲಸಿಗರು ಜಮಾಯಿಸಿದ್ದರು. ತಮ್ಮ ಊರಿಗೆ ತೆರಳಲು ಸೇರಿದ್ದ ಆ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದ ಸುದ್ದಿ ಮಾಧ್ಯಮಗಳಲ್ಲಿ ದಿನವಿಡೀ ಪ್ರಸಾರವಾಯಿತು.

 

ಈ ಕುರಿತು ವದಂತಿ ಹಬ್ಬಿಸಿ ಜನರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮರಾಠಿ ಸುದ್ದಿ ಚಾನೆಲ್ ಎಬಿಪಿ ಮಜಾ ವರದಿಗಾರ ರಾಹುಲ್ ಕುಲಕರ್ಣಿ ಸೇರಿದಂತೆ ಇತರ 11  ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ವಲಸಿಗರನ್ನು ಮನೆಗೆ ಹಿಂದಿರುಗಿಸಲು ವಿಶೇಷ ರೈಲುಗಳು ಇದೆ ಎಂದು ಈ ವರದಿಗಾರರು ಸುದ್ದಿ ಪ್ರಸಾರ ಮಾಡಿದ್ದರು. ಆದರೆ ಎಬಿಪಿ ಚಾನೆಲ್ ತಮ್ಮ ವರದಿಗಾರನನ್ನು ಸಮರ್ಥಿಸಿಕೊಂಡಿದೆ. ಪತ್ರಕರ್ತನನ್ನು ಬಂಧಿಸುವ ಮೊದಲು ಸತ್ಯ ಮತ್ತು ಸನ್ನಿವೇಶಗಳ ಸರಿಯಾದ ಪರಿಶೀಲನೆ ಇರಬೇಕು ಎಂದು ಹೇಳಿಕೊಂಡಿದೆ. ನಂತರ ಮುಂಬೈನ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು.

 

ಎಬಿಪಿ ಗ್ರೂಪ್ನ ಹಿಂದಿ ಚಾನೆಲ್ ಆದ ಎಬಿಪಿ ನ್ಯೂಸ್ ಸಹ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನಿಲ್ದಾಣದ ಹೊರಗೆ ಹೇಗೆ ಸೇರಿದರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿ, ಇದನ್ನ “ಪಿತೂರಿ” ಎಂದು ಕರೆದು ಘಟನೆಗೆ ಧಾರ್ಮಿಕ ಕಾರಣವಿದೆಯೆಂದು ಸೂಚಿಸಿತು.

 

ನಿರೂಪಕಿ ಶೋಭನಾ ಯಾದವ್, “ಎಬಿಪಿ ನ್ಯೂಸ್ ಇದರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಜನರನ್ನು ಒಟ್ಟುಗೂಡಿಸಲು ಮಸೀದಿಯಿಂದ ಪ್ರಚೋದಿಸಲಾಗಿದೆಯೇ? ಎಂಬುವುದು ದೊಡ್ಡ ಪ್ರಶ್ನೆ. ಮುಸ್ಲಿಂ ನಾಯಕರು ಭಾಷಣ ಮಾಡುವ ಮೂಲಕ ಜನರನ್ನು ಕೆರಳಿಸಿ ಜನಸಮೂಹವನ್ನು ಒಟ್ಟುಗೂಡಿಸಿದ್ದಾರೆಯೇ? ಈ ಜನಸಮೂಹ ನೆರೆಯಲು ಜಮಾ ಮಸೀದಿ ಕಾರಣವೇ? ಮಸೀದಿಯಿಂದ ಸಾವಿರಾರು ಜನರನ್ನು ಒಟ್ಟುಗೂಡಿಸಲಾಗಿದೆ. ಈ ಜನಸಮೂಹವನ್ನು ವಾಟ್ಸಾಪ್ ಸಂದೇಶ ಅಥವಾ ಫೋನ್ ಕರೆಯೊಂದಿಗೆ ಒಟ್ಟುಗೂಡಿಸಲಾಗಿದೆಯೇ? ಮುಂಬೈ ಪೊಲೀಸರು ಏಕೆ ನಿದ್ದೆ ಮಾಡುತ್ತಿದ್ದರು? ಅವರ ಬುದ್ಧಿಮತ್ತೆ ಏನು ಮಾಡಿದೆ? ” ಎಂದು ಹೇಳುತ್ತಿದ್ದಾರೆ.

 

 

ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದ “ಭೂಮ್ ಲೈವ್” ಪೊಲೀಸರನ್ನು ಸಂಪರ್ಕಿಸಿದೆ. ವಲಸಿಗ ಕಾರ್ಮಿಕರು ಈ ರೀತಿಯಾಗಿ ಸೇರಿರುವುದಕ್ಕೆ ಯಾವುದೇ ಕೋಮು ದೃಷ್ಟಿಕೋನ ಇಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ ಎಂದು ವರದಿ ಮಾಡಿದೆ.

 

ಅಲ್ಲಿಗೆ ವಲಸೆ ಕಾರ್ಮಿಕರು ಬಾಂದ್ರಾ ನಿಲ್ದಾಣದಲ್ಲಿ ಸೇರುವುದಕ್ಕೆ ಯಾವುದೇ ಮುಸ್ಲಿಮರು ಅಥವಾ ಮಸೀದಿ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಿಗೆ ಎಬಿಪಿ ನ್ಯೂಸ್ ಸೇರಿದಂತೆ ಹಲವು ಟಿವಿ ಚಾನೆಲ್ಗಳು ವಲಸೆ ಕಾರ್ಮಿಕರಿಗೆ ವಿಶೇಷ ರೈಲುವ್ಯವಸ್ಥೆ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದರಿಂದ ಜನರು ಒಟ್ಟುಗೂಡಿದ್ದಾರೆ ಎಂಬು ತಿಳಿದುಬಂದಿದೆ.

 

ಇಡೀ  ಘಟನೆಯನ್ನು ಕೋಮು ದೃಷ್ಟಿಕೋನ ನೀಡುವುದರೊಂದಿಗೆ, ಮಸೀದಿಯ ವಿರುದ್ಧ “ದೊಡ್ಡ ಪ್ರಶ್ನೆಗಳನ್ನು” ಹುಟ್ಟುಹಾಕಿ ಕಡೆಗೆ ಅದನ್ನು ವದಂತಿಗಳೆಂದು ಸಂಪೂರ್ಣವಾಗಿ ತಳ್ಳಿಹಾಕುವವರೆಗೆ ಎಲ್ಲಾ ಪಾತ್ರವನ್ನು ತಾನೇ ನಿರ್ವಹಿಸುತ್ತದೆ. ಎಬಿಪಿ ಮಜಾ ವಿರುದ್ಧ ವದಂತಿಗಳ ಆರೋಪಗಳು ತನಿಖೆಯ ವಿಷಯವಾಗಿದ್ದರೂ, ಎಬಿಪಿ ಗ್ರೂಪ್ನ ಹಿಂದಿ ಚಾನೆಲ್ ಎಬಿಪಿ ನ್ಯೂಸ್ ಕೋಮು ಆಧಾರಿತ ನಿರೂಪಣೆಯನ್ನು ನೀಡಿದ್ದಕ್ಕಾಗಿ ಹಾಗೂ ಘಟನೆಗೆ ಅಲ್ಪಸಂಖ್ಯಾತ ಸಮುದಾಯ ಕಾರಣವೆಂದು ದೂಷಿಸಿದ್ದಕ್ಕಾಗಿ ಖಂಡಿತವಾಗಿಯೂ ಶಿಕ್ಷಿಸಬೇಕಾಗಿದೆ.

 

ಮಾರ್ಚ್ ನಲ್ಲಿ ದೆಹಲಿಯ ಧಾರ್ಮಿಕ ಸಭೆಯೊಂದರಲ್ಲಿ ಭಾಗವಹಿಸಿದ ಹೆಚ್ಚಿನ ಸಂಖ್ಯೆಯ ಜನರಿಗೆ  ಕೊರೋನಾ ಇರುವುದು ಪತ್ತೆಯಾದ ನಂತರ ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು, ಕೊರೊನಾ ವೈರಸ್ ಹರಡುವಿಕೆಯನ್ನು ಕೋಮುವಾದೀಕರಣಗೊಳಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿವೆ. ಸಭೆಯನ್ನು ಹಾಟ್ಸ್ಪಾಟ್ ಎಂದು ಗುರುತಿಸಲಾಗಿರುವುದರಿಂದ, ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕಾಗಿ ಚಾನೆಲ್ಗಳು ಮುಸ್ಲಿಂ ಸಮುದಾಯವನ್ನು ಸಂಪೂರ್ಣವಾಗಿ ಗುರಿಯಾಗಿರಿಸಿಕೊಂಡಿರುವುದು ಮಾತ್ರವಲ್ಲದೆ ಹಲವಾರು ಸುಳ್ಳು ಸುದ್ದಿಯನ್ನು ಹರಡಿದೆ.

 

ಕೊರೋನಾ ವೈರಸ್ ಅನ್ನು ಇಡೀ ಪ್ರಪಂಚಕ್ಕೆ ಮೆಟ್ಟಿಕೊಂಡಿರುವ ಮಹಾ ಮಾರಿಯಾಗಿರುವುದರಿಂದ ಎಲ್ಲರೂ ಒಗ್ಗಟ್ಟಾಗಿಯೇ ಈ ವೈರಸ್ ವಿರುದ್ಧ ಹೋರಾಡಬೇಕಾಗಿದೆ. ಆದರೆ ನಮ್ಮ ಮಾಧ್ಯಮಗಳು ಯಾವುದೋ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕೊರೋನಾ ವೈರಸ್ ಹೆಚ್ಚಾಗಿದೆ ಎಂದು ಸುದ್ದಿ ಹರಡದೆ. ಕೊರೋನಾ ವೈರಸ್ ಬಗ್ಗೆ ಜಾಗೃತಿಯನ್ನು ಮೂಡಿಸುವಂತಹ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ. ಮಾಧ್ಯಮಗಳು  ಯಾವುದೇ ಜಾತಿ ಧರ್ಮಕ್ಕೂ ಜೋತಾಕಿಕೊಳ್ಳದೆ ಸಮಾಜದ ಶಾಂತಿಗಾಗಿ, ಅಭಿವೃದ್ಧಿಗಾಗಿ  ಶ್ರಮಿಸಬೇಕಾಗಿರುವುದು ಮಾಧ್ಯಮಗಳ ಕರ್ತವ್ಯವಾಗಿದೆ.

 

 

Find Out More:

Related Articles: