ಚೀನಾಕ್ಕೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆ ಏನು ಗೊತ್ತಾ..?
ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ಸಾವಿನ ಸುಳಿಯಲ್ಲಿ ನರಳಾಡುತ್ತಿದೆ. ಈ ಮಹಾ ಮಾರಿಯು ಚೀನಾದಲ್ಲಿ ಜನಿಸಿ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಇದಕ್ಕೆಲ್ಲಾ ಕಾರಣ ಚೀನಾ ದೇಶವೇ ಎಂದು ಗೊತ್ತಾದ ಕೂಡಲೆ ಇಡೀ ವಿಶ್ವವೇ ಚೀನಾವನ್ನು ದೂಷಿಸಲು ಆರಂಭಿಸಿದೆ. ಚೀನಾದ ಅರಿವಿಗೆ ಬಂದು ವೈರಸ್ ಹರಡಿದೆಯೋ ಅಥವಾ ಗೊತ್ತಿಲ್ಲದೆ ಕೊರೋನಾ ವೈರಸ್ ಹರಡಿದೆಯೊ ಎಂಬುದು ಇದುವರೆಗೂ ಬಿಡಿಸಲಾಗದ ಕಗ್ಗಂಟಾಗಿದೆ. ಈ ಕುರಿತು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅಷ್ಟಕ್ಕೂ ಆ ಎಚ್ಚರಿಕೆ ಏನು ಗೊತ್ತಾ..?
ಕೊರೊನಾ ವಿಶ್ವದಾದ್ಯಂತ ಹರಡಲು ಒಂದು ವೇಳೆ ಚೀನಾ ದೇಶವು ’ಗೊತ್ತಿದ್ದೂ ಜವಾಬ್ದಾರಿ’ ಆಗಿದ್ದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಕಾಯಿಲೆ ಸನ್ನಿವೇಶವನ್ನು ಚೀನಾ ನಿರ್ವಹಿಸಿದ ಬಗ್ಗೆ ಟ್ರಂಪ್ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.
ಪಾರದರ್ಶಕತೆ ಇಲ್ಲ, ಆರಂಭದಲ್ಲಿ ಚೀನಾವು ಅಮೆರಿಕಗೆ ಸಹಕಾರ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. "ಗೊತ್ತಿದ್ದೂ ಅವರು ಜವಾಬ್ದಾರರಾಗಿದ್ದರೆ ಅದರ ಪರಿಣಾಮಗಳು ಇರುತ್ತವೆ" ಎಂದು ಟ್ರಂಪ್ ಮಾಧ್ಯಮ ವರದಿಗಾರರಿಗೆ ತಿಳಿಸಿದ್ದಾರೆ. "ನೀವು ಮಾತನಾಡುತ್ತಿರುವಾ ವಿಚಾರದ ಬಗ್ಗೆ ಹೇಳುವುದಾದರೆ, 1917 ರಿಂದ ಈಚೆಗೆ ಇಂಥ ಬದುಕನ್ನು ಯಾರೂ ಕಂಡಿಲ್ಲ" ಎಂದಿದ್ದಾರೆ.
ಇಡೀ ಜಗತ್ತನ್ನು ಕೊವಿಡ್-19 ಗುಡಿಸಿ ಹಾಕುವ ತನಕ ಚೀನಾದ ಜತೆಗೆ ಸಂಬಂಧ ಚೆನ್ನಾಗಿತ್ತು. ದಿಢೀರನೇ ಈ ಬಗ್ಗೆ ಕೇಳಿಬಂತು. ಎಲ್ಲವೂ ಬದಲಾಯಿತು. ನಾವು ಕೇಳುವ ಪ್ರಶ್ನೆಗೆ ಚೀನಾ ಕೋಪ ಮಾಡಿಕೊಳ್ಳಬಹುದು. ಆದರೆ ಉತ್ತರ ಹೇಗೆ ಬರುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
ನಮ್ಮ ಕೈ ಮೀರಿ ಆಗುವ ತಪ್ಪುಗಳು ಬೇರೆ, ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದು ಬೇರೆ. ಎರಡಕ್ಕೂ ವ್ಯತ್ಯಾಸ ಇದೆ. ಈ ಎರಡೂ ಸನ್ನಿವೇಶದಲ್ಲಿ ಯಾವುದೇ ಆದರೂ ನಮಗೆ ಸಮಸ್ಯೆ ಅರಿಯಲು ಅವಕಾಶ ಮಾಡಿಕೊಡಬೇಕಾಗಿತ್ತು. ಆರಂಭದ ಹಂತದಲ್ಲೇ ಕೇಳಿದ್ದೆವು. ಆದರೆ ನಾವು ಅದರಲ್ಲಿ ಒಳಗೊಳ್ಳುವುದು ಅವರಿಗೆ ಬೇಕಿರಲಿಲ್ಲ. ಅದೆಂಥದ್ದೋ ಕೆಟ್ಟದ್ದು ಎಂಬುದು ಅವರಿಗೆ ಗೊತ್ತಿತ್ತು. ಆದ್ದರಿಂದ ಮುಜುಗರಕ್ಕೆ ಒಳಗಾದರು ಎಂದಿದ್ದಾರೆ.
ಇನ್ನು ಚೀನಾವು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಪರವಾಗಿ ಕೆಲಸ ಮಾಡುತ್ತಿದೆ. ಅವರು ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಚುನಾವಣೆಗೆ ಸದ್ಯಕ್ಕೆ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಎಚ್ಚರಿಕೆಯಿರದ ಜೊ ಬಿಡೆನ್ ಅಧ್ಯಕ್ಷರಾಗಿ ಗೆದ್ದರೆ ಯುನೈಟೆಡ್ ಸ್ಟೇಟ್ಸ್ ಅನ್ನು ಚೀನಾ ತನ್ನದಾಗಿಸಿಕೊಳ್ಳುತ್ತದೆ. ನಾನು ತೆಗೆದುಕೊಂಡ ಕೆಲವು ತೀರ್ಮಾನದ ಕಾರಣಕ್ಕೆ ಬಿಲಿಯನ್ ಗಟ್ಟಲೆ ಡಾಲರ್ ಚೀನಾದ ಬದಲಿಗೆ ಯು.ಎಸ್.ಗೆ ಲಾಭವಾಗಿದೆ ಎಂದಿದ್ದಾರೆ ಟ್ರಂಪ್.
ಇಡೀ ಜಗತ್ತಿನಲ್ಲೇ ಅತ್ಯದ್ಭುತವಾದ ಆರ್ಥಿಕತೆ ನಮ್ಮದಾಗಿತ್ತು. ಆ ವಿಚಾರಕ್ಕೆ ಬಂದರೆ ಚೀನಾ ನಮ್ಮ ಹತ್ತಿರದ ಸ್ಥಾನದಲ್ಲಿ ಕೂಡ ಇರಲಿಲ್ಲ. ಎರಡು ತಿಂಗಳ ಹಿಂದಕ್ಕೆ ಹೋಗಿ. ನಾವು ಆ ಹಾದಿಯಲ್ಲೇ ಸಾಗಲಿದ್ದೇವೆ. ಅಂದಹಾಗೆ ಈ ಹಿಂದೆ ಇದ್ದ ಇರಾನ್ ಗೂ ಈಗಿನ ಸನ್ನಿವೇಶಕ್ಕೂ ಬಹಳ ಬದಲಾಗಿದೆ. ನಾನು ಬಂದಾಗ, ಇಡೀ ಮಧ್ಯಪ್ರಾಚ್ಯವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಇರಾನ್ ಹವಣಿಸುತ್ತಿತ್ತು. ಈಗ ತಾನು ಉಳಿದುಕೊಳ್ಳುವುದನ್ನು ಬಯಸುತ್ತಿದೆ ಎಂದು ಹೇಳಿದ್ದಾರೆ ಡೊನಾಲ್ಡ್ ಟ್ರಂಪ್.