ಚಾಲ್ತಿಗೆ ಬರಲಿದೆ 20ರೂ ಮುಖಬೆಲೆಯ ನಾಣ್ಯಗಳು..! 20 ರೂ ನಾಣ್ಯಗಳ ವಿಶಿಷ್ಟತೆಗಳು ಏನು ಗೊತ್ತಾ.?

Soma shekhar

ನವದೆಹಲಿ:  ಭಾರತದದಲ್ಲಿ ಇದುವರೆಗೂ ಕೂಡ 1 2  5  10  ರ ನಾಣ್ಯಗಳು ಚಾಲ್ತಿಯಲ್ಲಿದ್ದವು ಆದರೆ ಈಗ ಈ ನಾಣ್ಯಗಳ ಪಟ್ಟಿಗೆ 2೦ರೂ ಮುಖಬೆಲೆಯ ನಾಣ್ಯವೂ ಸಹ  ಸೇರಿಕೊಳ್ಳಲು   ಸಿದ್ದವಾಗುತ್ತಿದೆ ಅಷ್ಟಕ್ಕೂ 20 ರೂ ಮುಖ ಬೆಲೆ ನಾಣ್ಯದ ವಿಶಿಷ್ಟತೆ ಏನು ಗೊತ್ತಾ..?

 

ಭಾರತೀಯ ಕರೆನ್ಸಿಯಲ್ಲಿ ನಾಣ್ಯಗಳು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿವೆ. ಈಗ ಮತ್ತೊಂದು ನಾಣ್ಯವನ್ನು ಈ ಪಟ್ಟಿಯಲ್ಲಿ ಸೇರ್ಪದೆಯಾಗುತ್ತಿದೆ. ಹೌದು ಶೀಘ್ರದಲ್ಲೇ ನೀವು 20 ರೂಪಾಯಿ ನಾಣ್ಯವನ್ನು ನೋಡಲಿರುವಿರಿ. ಇದೇ ಮೊದಲ ಬಾರಿಗೆ, 20 ರೂಪಾಯಿಗಳ ನಾಣ್ಯವು ಭಾರತೀಯ ಮಾರುಕಟ್ಟೆಯಲ್ಲಿ ಬಳಕೆಗ ಬರಲಿದೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಮುಂಬೈ ಮಿಂಟ್ (ಮಿಂಟ್) ನಲ್ಲಿ ತಯಾರಾದ ಈ ನಾಣ್ಯವನ್ನು ಆರ್‌ಬಿಐಗೆ ಹಸ್ತಾಂತರಿಸಲಾಗಿದೆ. ಒಟ್ಟು 10 ಲಕ್ಷ ನಾಣ್ಯಗಳನ್ನು ಆರ್‌ಬಿಐಗೆ ಹಸ್ತಾಂತರಿಸಲಾಗಿದೆ. ಶೀಘ್ರದಲ್ಲೇ ಆರ್‌ಬಿಐ ಈ ನಾಣ್ಯಗಳನ್ನು ಬ್ಯಾಂಕ್‌ಗಳಿಗೆ ನೀಡಲಿದೆ. ಮುಂಬೈ ಮಾತ್ರವಲ್ಲದೆ ಕೋಲ್ಕತಾ, ನೋಯ್ಡಾ ಮತ್ತು ಹೈದರಾಬಾದ್ ಮಿಂಟ್ ಗಳಲ್ಲಿ 20 ರೂಪಾಯಿ ನಾಣ್ಯಗಳನ್ನು ತಯಾರಿಸಲಾಗುತ್ತಿದೆ.

 

ಹೊಸ ನಾಣ್ಯಗಳ ಸೀರಿಸ್ ನಲ್ಲಿ ಈಗಾಗಲೇ ಈ 20 ರೂ. ಮುಖಬೆಲೆಯ ನಾಯವನ್ನು ಸೇರಿಸಲಾಗಿದ್ದು, ಶೀಘ್ರವೇ ನೀವು ಈ ನಾಣ್ಯಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತಿರುವುದನ್ನು ನೋಡಬಹುದಾಗಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ಮಾರ್ಚ್ 8, 2019 ರಂದು ಹೊಸ ಸರಣಿಯನ್ನು ನಾಣ್ಯಗಳನ್ನು ಬಿಡುಗಡೆ ಮಾಡಿತ್ತು. ಈ ಸರಣಿಯಲ್ಲಿ 20 ರೂಪಾಯಿಗಳ ನಾಣ್ಯವೂ ಸಹ ಶಾಮೀಲಾಗಿದೆ. ಈ ನಾಣ್ಯಗಳನ್ನು ಅಂಧರಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಈಗ ನಾಣ್ಯಗಳನ್ನು ಅವರು ಸುಲಭವಾಗಿ ಗುರುತಿಸಬಹುದಾಗಿದೆ. ಇದುವರೆಗೆ ಬಿಡುಗಡೆಯಾದ ಎಲ್ಲ ನಾಣ್ಯಗಳಿಗಿಂತ ಈ ನಾಣ್ಯ ವಿಭಿನ್ನವಾಗಿದೆ.

 

11 ವರ್ಷಗಳ ಸುದೀರ್ಘ ಅವಧಿಯ ಬಳಿಕ ಬರುತ್ತಿದೆ ಹೊಸ ನಾಣ್ಯ
ಕೇಂದ್ರ ವಿತ್ತ ಸಚಿವಾಲಯ ಜಾರಿಗೊಳಿಸಿರುವ ಅಧಿಸೂಚನೆಯ ಪ್ರಕಾರ ಈ ನಾಣ್ಯದಲ್ಲಿ ಒಟ್ಟು 12 ಕೊನಗಳಿವೆ. 11 ವರ್ಷಗಳ ಬಳಿಕ ಹೊಸ ನಾಣ್ಯವೊಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮೊದಲು 2009ರಲ್ಲಿ 10 ರೂ. ಮುಖಬೆಲೆಯ ಹೊಸ ನಾಣ್ಯ ಬಿಡುಗಡೆಯಾಗಿದ್ದವು. ಶೀಘ್ರವೇ ಭಾರತೀಯ ರಿಸರ್ವ್ ಬ್ಯಾಂಕ್ ಜನಸಾಮಾನ್ಯರ ಚಲಾವಣೆಗಾಗಿ ಈ ನಾಣ್ಯಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.4

ಹೊಸ ನಾಣ್ಯದ ವಿಶೇಷತೆ ಇಲ್ಲಿದೆ

  • ಈ ನಾಣ್ಯವು 20 ಎಂಎಂ ವ್ಯಾಸವನ್ನು ಹೊಂದಿರುತ್ತದೆ.
  • ನಾಣ್ಯವು 12 ಮೂಲೆಗಳನ್ನು ಹೊಂದಿರುತ್ತದೆ.
  • ರೂ.10ರ ನಾಣ್ಯದಂತೆ ರೂ.20ರ ನಾಣ್ಯದಲ್ಲಿ ವೃತ್ತದ ಸುತ್ತ ಗುರುತಿಗಳು ಇರುವುದಿಲ್ಲ.
  • ಆದರೆ, ರೂ. 10ರ ನಾಣ್ಯದಂತೆ ಇದರಲ್ಲಿಯೂ ಕೂಡ ಎರಡು ರಿಂಗ್ ಗಳು ಇರಲಿವೆ.
  • ಮೇಲಿನ ವೃತ್ತ ಶೇ.65ರಷ್ಟು ತಾಮ್ರ, ಶೇ.15ರಷ್ಟು ಸತು ಹಾಗೂ ಶೇ.20 ರಷ್ಟು ನಿಕ್ಕೆಲ್ ಹೊಂದಿರಲಿದೆ.
  • ಆಂತರಿಕ ವೃತ್ತ ಶೇ.75ರಷ್ಟು ತಾಮ್ರ, ಶೇ.20 ರಷ್ಟು ಸತು ಹಾಗೋ ಶೇ.5ರಷ್ಟು ನಿಕ್ಕೆಲ್ ಒಳಗೊಂಡಿದೆ.
  • ಈ ನಾಣ್ಯದ ತೂಕ54 ಗ್ರಾಂ ಇರಲಿದೆ. ನಾಣ್ಯದ ಮುಂಭಾಗದಲ್ಲಿ ಅಶೋಕ ಸ್ಥಂಬದ ಚಿತ್ರ ಇದೆ. ಕೆಳಭಾಗದಲ್ಲಿ ಸದ್ಯಮೆವ ಜಯತೆ ಬರೆಯಲಾಗಿದೆ. ಬಲ ಮತ್ತು ಎಡ ಭಾಗದಲ್ಲಿ ಭಾರತ ಎಂದು ಮುದ್ರಿಸಲಾಗಿದೆ. ಕೆಳಭಾಗದಲ್ಲಿ ರೂಪಾಯಿ ಚಿನ್ಹೆಯ ಜೊತೆಗೆ 20 ಬರೆಯಲಾಗಿದೆ. ಇವುಗಳ ಜೊತೆಗೆ ಆಹಾರ ಧಾನ್ಯಗಳ ಸಂಕೇತವೂ ಸಹ ಇದು ಒಳಗೊಂಡಿರಲಿದೆ.

 

Find Out More:

Related Articles: