ಚೀನಾವನ್ನು ಕಟ್ಟಿಹಾಕಲು ಅಮೇರಿಕಾ ರೂಪಿಸಿರುವ ಆ 18 ಅಂಶಗಳು ಏನು ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ

Soma shekhar

ಕೊರೋನಾ ವೈರಸ್ ಅಮೇರಿಕಾ ಸೇರಿದಂತೆ ಸಾಕಷ್ಟು ರಾಷ್ಟ್ರಗಳನ್ನು  ಬಾಧಿಸುತ್ತಾ ಲಕ್ಷಾಂತರ ಪ್ರಾಣವ್ನು ಕಸಿದಿದೆ. ಈ ಎಲ್ಲಾ ಸಾವು ನೋವುಗಳಿಗೆ ಚೀನಾವನ್ನೇ ಹೊಣೆಯನ್ನಾಗಿ ಅಮೇರಿಕಾ ಮಾಡಿದೆ. ಈ ಕುರಿತು ಚೀನಾದ ಮೇಲೆ ಪ್ರತಿತಂತ್ರವನ್ನು ಮಾಡುವ ಉದ್ದೇಶದಿಂದ 18 ಅಂಶಗಳ ಯೋಜನೆಗಳನ್ನು ರೂಪಿಸಿದೆ.  ಅಷ್ಟಕ್ಕೂ ಅಮೇರಿಕಾ ರೂಪಿಸಿರುವ ಆ 18 ಅಂಶಗಳು ಏನು ಗೊತ್ತಾ..?

 

 

ಹೌದು.. ಈ ಹಿಂದೆ ತೆರಿಗೆ ಅಂತರ್ ಯುದ್ಧದ ಮೂಲಕ ಪರಸ್ಪರ ಮುಖಾಮುಖಿಯಾಗಿದ್ದ ಅಮೆರಿಕ ಮತ್ತು ಚೀನಾ ಇದೀಗ ಮತ್ತೆ ಕೊರೋನಾ ವೈರಸ್ ನಿಂದಾಗಿ ಪರಸ್ಪರ ನೇರಾ ನೇರ ಸಮರ ಆರಂಭಿಸಿವೆ. ಕೊರೋನಾ ವೈರಸ್ ಆರಂಭದಿಂದಲೂ ಅದನ್ನು ಚೀನಾ ವೈರಸ್ ಎನ್ನುತ್ತಿದ್ದ ಅಮೆರಿಕ ಇದೀಗ ಚೀನಾದ ವಿರುದ್ಧ 18 ಅಂಶಗಳ ಯೋಜನೆ ರೂಪಿಸಿದೆ. ಪ್ರಮುಖವಾಗಿ ಕೊರೋನಾವೈರಸ್ ಗೆ ಸಂಬಂಧಿಸಿದಂತೆ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಚೀನಾವನ್ನು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಬಹಿಷ್ಕರಿಸಲು ಪ್ರಾರಂಭಿಸಿವೆ.

 

ಈ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ಮಾರಕ ವೈರಸ್ ಕೊವಿಡ್-19 ಕುರಿತಂತೆ ಚೀನಾ ಸರ್ಕಾರ ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸುತ್ತಿದೆ ಅಲ್ಲದೆ ಚೀನಾದಿಂದ ಸರಿಯಾದ ಉತ್ತರವನ್ನು ಪಡೆಯಬೇಕು ಮತ್ತು ಅದರ ತಪ್ಪನ್ನು ಸರಿಪಡಿಸಬೇಕು ಎಂದು ಹಠ ಹಿಡಿದು ನಿಂತಿದೆ. ಈ ಹಿನ್ನೆಲೆಯಲ್ಲಿ ಚೀನಾವನ್ನು ಕಟ್ಟಿಹಾಕಲು ಅಮೆರಿಕ 18 ಅಂಶಗಳ ಯೋಜನೆಗಳನ್ನು ರೂಪಿಸಿದೆ ಎಂದು ಅಮೆರಿಕದ ಜನಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

 

ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಸಂಸದ ಥಾಮ್ ಟಿಲ್ಲಿಸ್ ಚೀನಾ ವಿರುದ್ಧ 18 ಅಂಶಗಳ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು ಈ ಯೋಜನೆಯ ಮೂಲಕ ಚೀನಾದ ಸುಳ್ಳುಗಳು ಇಡೀ ಜಗತ್ತಿಗೆ ತೆರೆದುಕೊಳ್ಳುತ್ತವೆ. ಅಮೆರಿಕದಲ್ಲೂ ಚೀನಾ ವಿರುದ್ಧದ ಮಸೂದೆಯನ್ನು ಮಂಡಿಸಲಾಗಿದೆ ಎಂದು ಹೇಳಿದ್ದಾರೆ. ಚೀನಾ ವಿರುದ್ಧ ಮಂಡಿಸಲಾದ ಈ ಯೋಜನೆಯಲ್ಲಿ ಮಿಲಿಟರಿ, ಆರ್ಥಿಕ, ರಾಜತಾಂತ್ರಿಕ ಕ್ಷೇತ್ರ ಹೀಗೆ ಪ್ರತಿಯೊಂದು ರಂಗದಲ್ಲೂ ಚೀನಾವನ್ನು ಮಣಿಸುವ ಪ್ರಯತ್ನವಡಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಯೋಜನೆಯ ಒಂದು ಭಾಗದಲ್ಲಿ ಭಾರತವನ್ನು ಸಹ ಪಾಲುದಾರರನ್ನಾಗಿ ಮಾಡಲಾಗಿದೆ ಎಂದು ಯೋಜನೆ ಹೇಳುತ್ತದೆ.

 

ಚೀನಾ ವಿರುದ್ಧ ಅಮೆರಿಕದ ಯೋಜನೆಯ ಪ್ರಮುಖಾಂಶಗಳು


1.ಅಮೆರಿಕ ತನ್ನ ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಮಿಲಿಟರಿ ಸಂಬಂಧವನ್ನು ಗಾಢವಾಗಿಸಬೇಕು.
2.ಚೀನಾವನ್ನು ಸೋಲಿಸಲು ಭಾರತ, ತೈವಾನ್ ಮತ್ತು ವಿಯೆಟ್ನಾಂ ಜೊತೆ ಮಿಲಿಟರಿ ಒಪ್ಪಂದಗಳಿಗೆ ಉತ್ತೇಜನ ನೀಡಬೇಕು.
3.ಚೀನಾದಲ್ಲಿರುವ ಅಮೆರಿಕದ ಉತ್ಪಾದನಾ ಕಂಪನಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಮತ್ತು ಕ್ರಮೇಣ ಪೂರೈಕೆಗಾಗಿ ಚೀನಾವನ್ನು ಅವಲಂಬಿಸುವುದನ್ನು ಸಂಪೂರ್ಣ ನಿಲ್ಲಿಸಬೇಕು.
4.ಮಿಲಿಟರಿ ಬಲವನ್ನು ಹೆಚ್ಚಿಸಲು, 20 ಬಿಲಿಯನ್ ಅಮೆರಿಕ ಡಾಲರ್ಗಳ ತಕ್ಷಣದ ಸಹಾಯವನ್ನು ನೀಡಬೇಕು.
5.ಅಮೆರಿಕ ತಂತ್ರಜ್ಞಾನವನ್ನು ಚೀನಾ ಕದಿಯದಂತೆ ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು.
6.ವೈರಸ್ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ಚೀನಾವನ್ನು ನಿಷೇಧಿಸಬೇಕು. ಅಂತಾರಾಷ್ಟ್ರೀಯವಾಗಿ ಬಹಿಷ್ಕರಿಸಬೇಕು.
7. ಚೀನಾ ದಬ್ಬಾಳಿಕೆಯ ಮಾನವ ಹಕ್ಕುಗಳ ದಾಖಲೆಗೆ ಆ ದೇಶವನ್ನು ಹೊಣೆಗಾರರನ್ನಾಗಿ ಮಾಡಬೇಕು.
8.ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ವಿಶ್ವದ ರಾಷ್ಟ್ರಗಳ ಮೇಲೆ ಕಣ್ಣಿಡುವಂತಹ ಸಂಘಟನೆಯನ್ನು ರಚಿಸಬೇಕು.

 

 

Find Out More:

Related Articles: