ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾನ: ಅಷ್ಟಕ್ಕೂ ಪ್ರಧಾನಿ ಮೋದಿ ಮಾಡಿದ ಆ ವಾಗ್ದಾನ ಯಾವುದು.?
ಕೊರೋನಾ ಸೋಂಕಿನಿಂದಾಗಿ ಪ್ರಂಪಚದಲ್ಲಿ ಲಕ್ಷಾಂತರ ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಅನೇಕ ಸೋಂಕಿತರು ಕೊರೋನಾ ಸೋಂಕಿನಲ್ಲಿ ಬಿದ್ದು ನರಳುತ್ತಿದ್ದಾರೆ. ಈ ಕುರಿತು ವರ್ಚುವಲ್ ಸೃಂಗ ಸಭೆಯನ್ನು ಆಯೋಜನೆಯನ್ನು ಮಾಡಲಾಗಿತ್ತು, ಈ ಒಂದು ಶೃಂಗ ಸಭೆಯಲ್ಲಿ ಪ್ರಪಂಚದ ಕೆಲವು ರಾಷ್ಟ್ರಗಳೂ ಭಾಗವಹಿಸಿ ಕೊರೋನಾ ಸೋಂಕಿನ ಕುರಿತು ಸಾಕಷ್ಟು ಚರ್ಚೆಗಳನ್ನು ನಡೆಸಲಾಗಿದೆ. ಈ ಒಂದು ಚರ್ಚೆಯಲ್ಲಿ ಪ್ರಧಾನಿ ಮೋದಿ ವಾಗ್ದಾನವೊಂದನ್ನು ಮಾಡಿದ್ದಾರೆ. ಅಷ್ಟಕ್ಕೂ ಪ್ರಧಾನಿ ನೀಡಿದ ವಾಗ್ದಾನವೇನು..?
ಬ್ರಿಟನ್ ಆತಿಥ್ಯದಲ್ಲಿ ನಡೆದ ಗ್ಲೋಬಲ್ ವ್ಯಾಕ್ಸಿನ್ ಸಮಿಟ್ನಲ್ಲಿ ವ್ಯಾಕ್ಸಿನ್ಸ್ ಅಲಯನ್ಸ್ 'ಗವಿ'ಯ ಖಾತೆಗೆ 15 ದಶಲಕ್ಷ ಡಾಲರ್ ಅನ್ನು ಭಾರತದ ಕೊಡುಗೆಯಾಗಿ ನೀಡುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಗ್ದಾನ ಮಾಡಿದ್ದಾರೆ.
ಕೋವಿಡ್ 19 ಸೋಂಕಿನ ಕಾರಣಕ್ಕೆ ವರ್ಚುವಲ್ ಶೃಂಗವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ದಿಕ್ಸೂಚಿ ಭಾಷಣ ಮಾಡಿದ್ದು, ಲಸಿಕೆ ಅಭಿವೃದ್ಧಿಗೆ ಕೈ ಜೋಡಿಸಿ ಹಣಕಾಸಿನ ನೆರವು ಒದಗಿಸಬೇಕಾದ ಅಗತ್ಯವನ್ನು ಮನವರಿಕೆಮಾಡಿಕೊಟ್ಟರು. ಈ ಕಾರ್ಯದಲ್ಲಿ ಎಲ್ಲ ದೇಶಗಳೂ ಕೈ ಜೋಡಿಸಿದರೆ ಜಗತ್ತನ್ನು ರಕ್ಷಿಸುವ ಮತ್ತು ಲಕ್ಷಾಂತರ ಜನರ ಪ್ರಾಣ ಉಳಿಸುವ ಮಹತ್ಕಾರ್ಯದಲ್ಲಿ ಭಾಗಿಯಾದಂತೆ ಆಗುತ್ತದೆ ಎಂದು ವಿವರಿಸಿದರು.
'ಗವಿ'ಗೆ ನಮ್ಮ ಬೆಂಬಲ ಕೇವಲ ಹಣಕಾಸಿನ ವಿಚಾರದಲ್ಲಷ್ಟೆ ಅಲ್ಲ. ಭಾರತದಿಂದಲೇ ಭಾರಿ ಬೇಡಿಕೆ ಇರುವ ಕಾರಣ ಲಸಿಕೆಗಳ ಜಾಗತಿಕ ದರವೂ ಇಳಿಯಲಿದೆ. ಇಂದಿನ ಸವಾಲಿನ ಸನ್ನಿವೇಶದಲ್ಲಿ ಭಾರತವು ಜಗತ್ತಿನೊಂದಿಗೆ ಐಕ್ಯಮತ ಪ್ರದರ್ಶಿಸಿದ್ದು, ಒಟ್ಟಾಗಿ ಕೆಲಸ ಮಾಡುತ್ತಿದೆ. ನಮ್ಮ ದೇಶದಲ್ಲಿ ಉತ್ತಮ ಗುಣಮಟ್ಟದ ಔಷಧ ಮತ್ತು ಲಸಿಕೆಗಳನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವ ಸಾಮರ್ಥ್ಯ ಈಗಾಗಲೇ ಸಾಬೀತಾಗಿರುವಂಥದ್ದು. ನಮ್ಮಲ್ಲಿರುವ ಸಂಶೋಧನಾ ಪ್ರತಿಭಾ ಕೌಶಲವನ್ನು ಜಾಗತಿಕ ಒಳಿತಿಗಾಗಿ ಬಳಸುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಈ ಶೃಂಗದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ 35 ದೇಶಗಳ ಪ್ರಮುಖರು ಪಾಲ್ಗೊಂಡಿದ್ದರು. 2025ರ ವೇಳೆಗೆ ಜಗತ್ತಿನ ಬಡರಾಷ್ಟ್ರಗಳಲ್ಲಿನ 300 ದಶಲಕ್ಷ ಮಕ್ಕಳ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಸಲುವಾಗಿ 7.4 ದಶಲಕ್ಷ ಡಾಲರ್ ಫಂಡ್ ಒಟ್ಟುಗೂಡಿಸುವ ಪ್ರಯತ್ನ ಈ ಶೃಂಗದ ಮೂಲಕ ನಡೆದಿದೆ. (ಏಜೆನ್ಸೀಸ್)