ಕೊರೋನಾ ಕುರಿತಾದ ಈ ಕಾರಣಕ್ಕೆ ಬ್ರಿಟನ್ ಜೊತೆ ಕೈಜೋಡಿಸಿರುವ ಭಾರತ..!! ಅಷ್ಟಕ್ಕೂ ಆ ಕಾರಣ ಯಾವುದು ಗೊತ್ತಾ..?
ಕೊರೋನಾ ವೈರಸ್ ಜಗತ್ತಿನಲ್ಲಿ ಹುಟ್ಟಿಸಿರುವಂತಹ ಭಯಾನಕತೆಯಿಂದ ವಿಶ್ವದ ಲಕ್ಷಾಂತರ ಮಂದಿ ಆತಂಕದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಈಗಾಗಲೇ ಈ ಕೊರೋನಾ ಸೋಂಕಿನಿಂದ ಲಕ್ಷಾಂತರ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಮುಂದೆ ಕೊರೋನಾ ವೈರಸ್ ಇಂದಾಗಿ ನಡೆಯ ಭಾರೀ ಪ್ರಮಾಣದ ಮಾರಣಹೋಮವನ್ನು ತಡೆಯುವ ನಿಟ್ಟಿನಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಕೊರೋನಾ ಸೋಂಖಿಗೆ ಔಷಧಿಯನ್ನು ಸಂಶೋಧಿಸಲಾಗುತ್ತಿದೆ, ಇದರ ಹಿನ್ನಲೆ ಬ್ರಿಟನ್ನಿನಲ್ಲಿ ಪ್ರಾಯೋಗಿಕವಾಗಿ ಕೊರೋನಾ ವೈರಸ್ ಗೆ ಪ್ರಾಯೋಗಿಕ ಚ್ಚಚ್ಚು ಮದ್ದನ್ನು ನೀಡುತ್ತಿದೆ ಇದಕ್ಕೆ ಭಾರತ ಕೈಜೋಡಿಸಿದೆ.
ಹೌದು, ಬ್ರಿಟನ್ನ ಪ್ರತಿಷ್ಠಿತ ಔಷಧ ಉತ್ಪಾದನಾ ಸಂಸ್ಥೆ ಅಸ್ಟ್ರಾಜೆನೆಕಾ AZD1222 ಎಂಬ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದಿನ ಪ್ರಾಯೋಗಿಕ ಉತ್ಪಾದನೆ ಆರಂಭಿಸಿದೆ. ಆಕ್ಸಫರ್ಡ್ ವಿಶ್ವವಿದ್ಯಾಲಯದ ಸಹಕಾರದಲ್ಲಿ ತಯಾರಾಗುತ್ತಿರುವ ಈ ಚುಚ್ಚುಮದ್ದನ್ನು ಹೆಚ್ಚಿನ ಪ್ರಮಾಣದ ಉತ್ಪಾದನೆಗಾಗಿ ಭಾರತದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಅಸ್ಟ್ರಾಜೆನೆಕಾ ಜತೆ ಕೈಜೋಡಿಸಿದೆ.
ಇದುವರೆಗಿನ ಚುಚ್ಚುಮದ್ದಿನ ಪ್ರಾಯೋಗಿಕ ಪರೀಕ್ಷೆ ಎಲ್ಲವೂ ಅಂದುಕೊಂಡಂತೆ ಸಾಗುತ್ತಿದೆ. ಇದರ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗುವ ವೇಳೆಗೆ ನಾವು ಸಂಪೂರ್ಣವಾಗಿ ಸಿದ್ಧವಾಗಿರುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಇದರ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಸ್ಟ್ರಾಜೆನೆಕಾದ ಮುಖ್ಯ ಕಾರ್ಯಕಾರಿ ಅಧಿಕಾರಿ ಪ್ಯಾಸ್ಕಲ್ ಸೋರಿಯಾಟ್ ಹೇಳಿದ್ದಾರೆ.
ಪ್ರಸ್ತುತ ಈ ಚುಚ್ಚುಮದ್ದಿನ ಪ್ರಾಯೋಗಿಕ ಪರೀಕ್ಷೆಗಳು ಮುಗಿದು ಬೇಸಿಗೆಯ ಅಂತ್ಯಕ್ಕೆ ಇಲ್ಲವೇ ಆಗಸ್ಟ್ ವೇಳೆಗೆ ಫಲಿತಾಂಶಗಳು ಹೊರಬೀಳಲಿವೆ. ಸೆಪ್ಟೆಂಬರ್ ವೇಳೆಗೆ ಕೋವಿಡ್-19 ಪಿಡುಗಿನ ಪರಿಣಾಮಕಾರಿ ತಡೆಗೆ ಯೋಗ್ಯವಾದ ಚುಚ್ಚುಮದ್ದು ಸಿದ್ಧಪಡಿಸಿದ್ದೇವೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಲಿದೆ ಎಂದು ವಿವರಿಸಿದ್ದಾರೆ.
ನಿಖರವಾದ ಫಲಿತಾಂಶ ಬರುತ್ತಲೇ ಈ ಚುಚ್ಚುಮದ್ದನ್ನು ಜಾಗತಿಕವಾಗಿ ತಯಾರಿಸಲು ಅನುವಾಗುವಂತೆ ಅಸ್ಟ್ರಾಜೆನೆಕಾ ಈಗಾಗಲೆ ವಿವಿಧ ರಾಷ್ಟ್ರಗಳ ಹಲವು ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಸಾಂಕ್ರಾಮಿಕ ರೋಗ ತಡೆಗೆ ಸನ್ನದ್ಧವಾದ ಒಕ್ಕೂಟ (Coalition for Epidemic Preparedness Innovations-CEPI), ಘವಿ ಮತ್ತು ಭಾರತದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜತೆಗೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ ಭಾರತದ ಸಂಸ್ಥೆಯಿಂದಾಗಿ ಚುಚ್ಚುಮದ್ದನ್ನು ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಿಗೆ ತ್ವರಿತವಾಗಿ ಚುಚ್ಚುಮದ್ದನ್ನು ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಕೇಂಬ್ರಿಡ್ಜ್ ಮೂಲದ ಈ ಸಂಸ್ಥೆ ಪರೀಕ್ಷೆಗಳು ಯಶಸ್ವಿಯಾದ ಬಳಿಕ ಅಮೆರಿಕಕ್ಕಾಗಿ 400 ದಶಲಕ್ಷ ಚುಚ್ಚುಮದ್ದು ಹಾಗೂ ಬ್ರಿಟನ್ಗಾಗಿ 100 ದಶಲಕ್ಷ ಚುಚ್ಚುಮದ್ದು ಉತ್ಪಾದಿಸಲೂ ಒಪ್ಪಂದ ಮಾಡಿಕೊಂಡಿದೆ.
ಕೆಲವು ನೂರು ಸ್ವಯಂಸೇವಕರೊಂದಿಗೆ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದು ಪರೀಕ್ಷೆಯನ್ನು ಏಪ್ರಿಲ್ನಲ್ಲಿ ಆರಂಭಿಸಿದ್ದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಇದೀಗ ಪರೀಕ್ಷೆಗಳನ್ನು 10 ಸಾವಿರ ಸ್ವಯಂಸೇವಕರಿಗೆ ವಿಸ್ತರಿಸಿದೆ. ಜೂನ್ ಮಧ್ಯಭಾಗದಲ್ಲಿ ಬ್ರೆಜಿಲ್ನಲ್ಲಿ ಕೂಡ ಸ್ವಯಂಸೇವಕರ ಮೇಲೆ ಈ ಚುಚ್ಚುಮದ್ದಿನ ಪ್ರಯೋಗ ಆರಂಭವಾಗಲಿದೆ.