ಕೊರೋನಾ ಮಹಾಮಾರಿಗೆ ಇಡೀ ವಿಶ್ವದಲ್ಲಿ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತಾ..?

Soma shekhar

ಕೋವಿಡ್-19 ವೈರಾಣು ದಾಳಿಯಿಂದ ವಿಶ್ವ ಕಂಗಾಲಾಗಿದ್ದು, ಹೆಮ್ಮಾರಿ ರೌದ್ರಾವತಾರದ ರಣಕೇಕೆ ಮುಂದುವರಿದಿದೆ. ಈ ಪಿಡುಗಿಗೆ ಸಾವಿನ ಸಂಖ್ಯೆ 4.24 ಲಕ್ಷಕ್ಕೇರಿದೆ ಹಾಗೂ ಸೋಂಕಿತರ ಸಂಖ್ಯೆ 76 ಲಕ್ಷ ಸನಿಹದಲ್ಲಿದೆ. ದರ ನಡುವೆಯೂ ವಿಶ್ವದಲ್ಲಿ 38.43 ಲಕ್ಷಕ್ಕೂ ಅಧಿಕ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಡೆಡ್ಲಿ ಕೊರೊನಾ ಹಾವಳಿಯಿಂದ ಜಗತ್ತಿನ ನಾನಾ ದೇಶಗಳಲ್ಲಿ ಸೋಂಕು ಮತ್ತು ಸಾವು ಸಂಖ್ಯೆಯಲ್ಲಿ ಮತ್ತೆ ಭಾರೀ ಏರಿಕೆ ಕಂಡುಬಂದಿದೆ. ಇನ್ನು ಕೆಲವು ರಾಷ್ಟ್ರಗಳಲ್ಲಿ ಹಾವಳಿ ಕಡಿಮೆಯಾಗಿದೆ.

 

ಹೌದು 10ಕ್ಕೂ ಹೆಚ್ಚು ದೇಶಗಳು ಪೀಡೆಯಿಂದ ಮುಕ್ತವಾಗಿದೆ. ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ಈವರೆಗೆ 4,23,887 ಮಂದಿ ಸಾವಿಗೀಡಾಗಿದ್ದು, 75,99,648 ಸೋಂಕು ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 33.32 ಲಕ್ಷ ದಾಟಿದೆ. ಅಲ್ಲದೇ ಇನ್ನೂ 53,913 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ. ನಾಳೆ ವೇಳೆಗೆ ಸಾವಿನ ಸಂಖ್ಯೆ 4.26 ಲಕ್ಷ ಮತ್ತು ಸಾಂಕ್ರಾಮಿಕ ರೋಗಿಗಳ ಪ್ರಮಾಣ 78 ಲಕ್ಷ ದಾಟುವ ಆತಂಕವಿದೆ. ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ..

 

ವಿಶ್ವದಲ್ಲಿ ಈವರೆಗೆ 38,43,795 ಮಂದಿ ರೋಗಿಗಳು ಗುಣಮುಖರಾಗಿದ್ದಾರೆ.. ಅಮೆರಿಕ, ಬ್ರೆಜಿಲ್, ರಷ್ಯಾ, ಭಾರತ ಮತ್ತು ಇಂಗ್ಲೆಂಡ್ ಕೊರೊನಾ ಕೇಸ್‍ಗಳಲ್ಲಿ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ, ಮತ್ತು ಟರ್ಕಿ ದೇಶಗಳಿವೆ. ಸೋಂಕು ಪ್ರಕರಣದಲ್ಲಿ ಭಾರತ ಈಗ ಇಂಗ್ಲೆಂಡ್‍ನನ್ನು ಹಿಂದಿಕ್ಕೆ ಐದನೇ ಸ್ಥಾನದಲ್ಲಿದೆ.

 

ಏಷ್ಯಾ ಖಂಡದಲ್ಲಿ ಚೀನಾ, ದಕ್ಷಿಣ ಕೊರಿಯಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್ ಕೇಂದ್ರ ಬಿಂದು ಚೀನಾದ ವುಹಾನ್ ನಗರದಲ್ಲಿಯೂ ಹೊಸ ಪಾಸಿಟಿವ್ ಕೇಸ್‍ಗಳು ಕಂಡುಬರುತ್ತಿವೆ. ಅಮೆರಿಕ, ಯುರೋಫ್, ಆಫ್ರಿಕಾ ಖಂಡಗಳ ಅನೇಕ ರಾಷ್ಟ್ರಗಳೂ ಕೂಡ ವೈರಸ್ ಹಾವಳಿಯಿಂದ ಕಂಗೆಟ್ಟಿವೆ.

 

ಕೆಲವು ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾಗಿದೆ. ನ್ಯೂಜಿಲೆಂಡ್ ಸೇರಿದಂತೆ ಕಿಲ್ಲರ್ ಕೊರೊನಾ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿವೆ. ಇಡೀ ವಿಶ್ವವೇ ಕಿಲ್ಲರ್ ಕೋವಿಡ್-19 ವೈರಸ್ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿದ್ದರೂ, ಹೆಮ್ಮಾರಿ ನಿಯಂತ್ರಣ ಅಸಾಧ್ಯವಾಗಿದೆ.

 

Find Out More:

Related Articles: