ಲಡಾಕ್ ಗಡಿ ತಂಟೆಯ ವಿಚಾರದಲ್ಲಿ ಅಮೇರಿಕಾ ಭಾರತಕ್ಕೆ ನೀಡಿದ ಸಲಹೆ ಏನು..?

frame ಲಡಾಕ್ ಗಡಿ ತಂಟೆಯ ವಿಚಾರದಲ್ಲಿ ಅಮೇರಿಕಾ ಭಾರತಕ್ಕೆ ನೀಡಿದ ಸಲಹೆ ಏನು..?

Soma shekhar

ಕೊರೋನಾ ವೈರಸ್ ಇಂದ ಸುಧಾರಿಸಿಕೊಳ್ಳಲು ತವಕಿಸುತ್ತಿರುವ ಭಾರತಕ್ಕೆ ಈಗ ಮತ್ತೊಂದು ಗಂಡಾಂತರ  ಎದುರಾಗಿದೆ, ಭಾರತ ಮತ್ತು ಚೀನಾ ಗಡಿ ಭಾಗವಾದ ಲಡಾಕ್ ಗಾಲ್ವಾನ್ ಕಣಿವೆ ಭಾಗದಲ್ಲಿ ಚೀನಾ ಗುಂಡಿನ ಚಕಮಕಿ ನಡೆದಿದೆ ಈ ಚಕಮಕಿಯಲ್ಲಿ 20 ಜನ ಯೋಧರು ಹುತಾತ್ಮರಾಗಿದ್ದಾರೆ, ಈ ಕುರಿತು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಚರ್ಚೆಯನ್ನು ನಡೆಸಿದ್ದಾರೆ.  ಈ ಚರ್ಚೆಯಲ್ಲಿ ಅಮೇರಿಕಾ ಭಾರತಕ್ಕೆ ನೀಡಿದ ಸಲಹೆಗಳೇನು ಗೊತ್ತಾ..?

 

ಭಾರತ ಮತ್ತು ಚೀನಾ ನಡುವೆ ಘರ್ಷಣೆ ಏರ್ಪಟ್ಟಿದ್ದು, ಲಡಾಕ್​ನ ಗಾಲ್ವನ್ ​ಕಣಿವೆ ಭಾಗದಲ್ಲಿ ಎರಡು ದೇಶಗಳ ಸೇನೆಯ ನಡುವೆ ಗುಂಡಿನ ಕಾಳಕ ನಡೆದಿದೆ. ಗುಂಡಿನ ಚಕಮಕಿ ವೇಳೆ ಭಾರತದ ಸುಮಾರು 20 ಸೈನಿಕರು ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಪರಿಸ್ಥಿತಿ ಉಲ್ಬಣಗೊಂಡಿರುವ ಬಗ್ಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್​ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ತಿಳಿಸಿದೆ.

ಭಾರತ-ಚೀನಾ ಗಡಿ ಭಾಗದ ಪರಿಸ್ಥಿತಿಯನ್ನು ನಾವು ಅವಲೋಕಿಸುತ್ತಿದ್ದೇವೆ. ನಮ್ಮ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತ ಘೋಷಿಸಿರುವುದನ್ನು ಗಮನಿಸಿದ್ದೇವೆ. ಮೃತರ ಕುಟುಂಬಕ್ಕೆ ನಾವು ಸಂತಾಪ ಸೂಚಿಸುತ್ತಿದ್ದೇವೆ ಎಂದು ಅಮೆರಿಕ ರಕ್ಷಣಾ ಸಚಿವಾಲಯದ ವಕ್ತಾರರು ಎಎನ್​ಐಗೆ ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಶಮನ ಮಾಡಲು ಚೀನಾ ಹಾಗೂ ಭಾರತ ಇಬ್ಬರೂ ಉತ್ಸುಕತೆ ತೋರಿವೆ. ಶಾಂತಿಯುತ ಮಾತುಕತೆಗೆ ನಮ್ಮ ಬೆಂಬಲ ಇದೆ. ಜೂನ್​ 2ರಂದು ನಡೆದ ಟ್ರಂಪ್​-ಮೋದಿ ಮಾತುಕತೆಯಲ್ಲಿ ಇಬ್ಬರೂ ಚೀನಾ ಗಡಿ ವಿವಾದದ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ಹೇಳಿದೆ.

ಲಡಾಖ್​ನ ಪ್ಯಾಂಗೋಂಗ್ ಟ್ಸೋ ಸರೋವರದ ಬಳಿ ಇರುವ ಎಲ್​ಎಸಿ ಗಡಿಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಚೀನಾ ಸೈನಿಕರು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರೂ ಕೂಡ ಪ್ರತಿರೋಧ ತೋರುತ್ತಿದ್ದಾರೆ. ಸರೋವರದ ಬಳಿಯ ಗಡಿಭಾಗದ ಒಂದು ಆಯಕಟ್ಟಿನ ಜಾಗದಲ್ಲಿ ಭಾರತ ರಸ್ತೆ ನಿರ್ಮಿಸುತ್ತಿದೆ. ಹಾಗೆಯೇ, ಗಾಲ್ವನ್ ಕಣಿವೆಯಲ್ಲಿ ಡರ್ಬುಕ್-ಶಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯನ್ನು ಸಂಪರ್ಕಿಸುವ ಮತ್ತೊಂದು ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಇದು ಚೀನೀಯರ ಕೆಂಗಣ್ಣಿಗೆ ಕಾರಣವಾಗಿದೆ. ಈ ರಸ್ತೆ ನಿರ್ಮಾಣ ಕಾರ್ಯಕ್ಕೆ ಚೀನೀಯರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.

Find Out More:

Related Articles:

Unable to Load More