ಯಾವ ನಿರ್ಧಾರದಿಂದ ಭಾರತವನ್ನು ಸ್ವಾವಲಂಭಿ ದೇಶವನ್ನಾಗಿ ಮಾಡಲು ಸಾಧ್ಯ ಗೊತ್ತಾ..?

Soma shekhar

ಕೊರೋನಾ ವೈರಸ್ ಇಂದಾಗಿ ಇಡೀ ದೇಶದ ಆರ್ಥಿಕ ವ್ಯವಸ್ಥೆಯೇ ಬುಡ ಮೇಲಾಗಿರುವಾಗ ಇದನ್ನು ಸರಿದೂಗಿಸುವ ಸಲುವಾಗಿ ಸಾಕಷ್ಟು ಆರ್ಥಿಕ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಈ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಸರ್ಕಾರ ಪ್ರಯತ್ನಸುತ್ತಿದೆ. ಇದರಲ್ಲಿ ಮುಖ್ಯವಾದದ್ದು ವಿದೇಶಿ ವಸ್ತುಗಳನ್ನು ನಿಷೇಧಿಸಿ  ಸ್ವಾವಲಂಭಿಯಾಗಬೇಕು ಎನ್ನುವುದು.

 

ಹೌದು ವಿದೇಶಿ ವಸ್ತುಗಳ ಆಮದು ನಿಲ್ಲಿಸಿ ಸ್ವಾವಲಂಬಿ ಆಗುವ ಮೂಲಕ ಕೋವಿಡ್​-19 ವೈರಸ್ ಬಿಕ್ಕಟನ್ನು ಭಾರತ ಅವಕಾಶವನ್ನಾಗಿ ಪರಿವರ್ತಿಸಲಿದೆ. ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಬಿಕ್ಕಟ್ಟನ್ನೇ ಭಾರತ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲಿದೆ. ಕೊರೊನಾ ಬಿಕ್ಕಟ್ಟು ಸ್ವಾವಲಂಬಿಯಾಗಿರಬೇಕು ಎಂಬ ಪಾಠವನ್ನು ಕಲಿಸಿದೆ. ಆಮದು ವಸ್ತುಗಳ ಮೇಲೆ ಅವಲಂಬಿತವಾಗಿರುವುದನ್ನು ಭಾರತ ಕಡಿಮೆ ಮಾಡಲಿದೆ ಎಂದು ಭಾರತದ 41 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ ತಿಳಿಸಿದರು

 

ವಿವಿಧ ಮೂಲ ಕೈಗಾರಿಗಳ ಒಳಹರಿವಿಗೆ ಪ್ರಮುಖ ಮೂಲವಾಗಿರುವ ಗಣಿಗಾರಿಕೆ ಕ್ಷೇತ್ರದಲ್ಲಿ ದೇಶ 'ಆತ್ಮನಿರ್ಭರ್' (ಸ್ವಾವಲಂಬನೆ) ಸಾಧಿಸುವ ದೃಷ್ಟಿಕೋನವನ್ನು ವಿವರಿಸಿದ ಪ್ರಧಾನಿ ಮೋದಿ ಅವರು, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ಹರಾಜು ಪ್ರತಿಕ್ರಿಯೆ ಪ್ರತಿ ಪಾಲುದಾರರಿಗೆ ಗೆಲುವಿನ ಸನ್ನಿವೇಶವಾಗಿದೆ. ನಾವು ಕೇವಲ ಕಲ್ಲಿದ್ದಲು ಗಣಿಗಾರಿಕೆಯ ಹರಾಜು ಪ್ರಕ್ರಿಯೆ ಮಾತ್ರವಲ್ಲ, ನಾವು ಕಲ್ಲಿದ್ದಲು ಕ್ಷೇತ್ರವನ್ನು ದಶಕಗಳ ಲಾಕ್​ಡೌನ್​ನಿಂದ ಹೊರಗೆಳೆಯುತ್ತಿದ್ದೇವೆ ಎಂದರು.

 

ಇನ್ನು ಈ ಸುಧಾರಣೆಯಿಂದಾಗಿ ಕಲ್ಲಿದ್ದಲು ಉತ್ಪಾದನೆ ಮತ್ತು ವಲಯ ಸ್ವಾವಲಂಬಿ ಆಗಲಿದೆ. ಸದೃಢ ಗಣಿಗಾರಿಕೆ ಮತ್ತು ಖನಿಜ ವಲಯಗಳಿಲ್ಲದೇ ಸ್ವಾವಲಂಬನೆ ಸಾಧ್ಯ ಇಲ್ಲ. ಏಕೆಂದರೆ, ಗಣಿಗಾರಿಕೆ ಮತ್ತು ಆರ್ಥಿಕತೆಯ ಪ್ರಮುಖ ಆಧಾರವಾಗಿದೆ.

ಸದ್ಯದಲ್ಲೇ ಭಾರತೀಯ ಆರ್ಥಿಕತೆ ಚೇತರಿಸಿಕೊಂಡು ತ್ವರಿತಗತಿಯಲ್ಲಿ ಪುಟಿದೇಳಲಿದೆ ಹಾಗೂ ಮುಂದುವರಿಯಲಿದೆ ಎಂಬುದನ್ನು ಸೂಚಿಸುತ್ತಿವೆ. ಬಳಕೆ (Usage) ಮತ್ತು ಬೇಡಿಕೆಗಳು (Demand) ತ್ವರಿತವಾಗಿ ಪೂರ್ವ ಕೋವಿಡ್ ಪರಿಸ್ಥಿತಿಗೆ ತಲುಪುತ್ತಿವೆ. ಇಂತಹ ಸನ್ನಿವೇಶದಲ್ಲಿ, ಹೊಸ ಆರಂಭಕ್ಕೆ ಇದಕ್ಕಿಂತ ಉತ್ತಮ ಸಮಯವಿರಲಾರದು ಎಂದು ಅವರು ಹೇಳಿದ್ದಾರೆ.

ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ಮುಂದಿನ 5 ರಿಂದ 7 ವರ್ಷಗಳಲ್ಲಿ ದೇಶದಲ್ಲಿ ಸುಮಾರು 33 ಸಾವಿರ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸುತ್ತಿದೆ. ಈ ಗಣಿಗಳು ದೇಶದ ಆರ್ಥಿಕತೆಗೆ ಒಟ್ಟು 20 ಸಾವಿರ ಕೋಟಿ ರೂ.ಆದಾಯ ನೀಡುತ್ತಿವೆ

 

Find Out More:

Related Articles: