ಪತಂಜಲಿ ಸಂಸ್ಥೆಯ ಕೊವಿಡ್ ಔಷಧಿಗೂ ಎದುರಾಯ್ತು ಸಂಕಷ್ಟ..!! ಈ ಸಂಕಷ್ಟಕ್ಕೆ ಕಾರಣ ಏನು..?
ಕೊರೋನಾ ವೈರಸ್ ಸೋಂಕು ಇಡೀ ವಿಶ್ವವನ್ನೇ ವ್ಯಾಪಿಸಿ ಲಕ್ಷಾಂತರ ಜನರ ಪ್ರಾಣವನ್ನು ಬಲಿ ತೆಗೆದುಕೊಂಡು ಅಟ್ಟಹಾಸವನ್ನು ಮೆರೆಯುತ್ತಿದೆ. ಈ ವೈರಸ್ ಅನ್ನು ಆದಷ್ಟು ಬೇಕ ನಾಶಪಡಿಸುವ ಉದ್ದೇಶದಿಂದ ಜಗತ್ತಿನಾದ್ಯಂತ ಸಂಶೋಧನೆಗಳು ನಡೆಯುತ್ತಲೇ ಇದೆ. ಜಗತ್ತಿನ ಉತ್ತಮ ಸಂಶೋಧನಾ ಸಂಸ್ಥೆಗಳು ಈ ಕುರಿತು ಸಂಶೋಧನೆಯನ್ನು ಮಾಡುತ್ತಿವೆ, ಈ ಮಧ್ಯದಲ್ಲಿ ದೇಶೀ ಕಂಪನಿಯಾದ ಪಂತಂಜಲಿ ಸಂಸ್ಥೆ ಕೊರೋನಾ ವೈರಸ್ ಗಾಗಿ ಕೆಲವು ಔಷಧಿಗಳನ್ನು ಬಿಡುಗಡೆಯನ್ನು ಮಾಡಲಾಗಿದೆ ಹಾಗೂ ಇದರಿಂದ ಕೊರೋನಾ ರೋಗಿಯು ಏಳನೇ ದಿನದಲ್ಲಿ ಚೇತರಿಸಿಕೊಳ್ಳುತ್ತಾನೆ ಎಂದು ಜಾಹಿರಾತುಗಳನ್ನು ನೀಡಲಾಗುತ್ತಿದೆ ಆದರೆ ಈಗ ಸಂಕಷ್ಟ ಒಂದು ಎದುರಾಗಿದೆ. ಅಷ್ಟಕ್ಕೂ ಆ ಸಂಕಷ್ಟ ಏನು ಗೊತ್ತಾ..?
ಮಹಾಮಾರಿ ಕೊರೋನಾ ವೈರಸ್ ಗೆ ತಾವು ಔಷಧಿ ಕಂಡು ಹಿಡಿದಿದ್ದು, ಇದಕ್ಕೆ ಏಳೇ ದಿನಗಳಲ್ಲಿ ಸೋಂಕಿತ ರೋಗಿಯನ್ನು ಗುಣಪಡಿಸುವ ಸಾಮರ್ಥ್ಯವಿದೆಯೆಂದು ಹೇಳಿಕೊಂಡಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರಿಗೆ ಈಗ ತೀವ್ರ ಹಿನ್ನಡೆಯಾಗಿದ್ದು, ಅವರ ಐಷಧಿಗೆ ಆಯುಷ್ ಸಚಿವಾಲಯ ತಡೆ ನೀಡಿದೆ. ಅಲ್ಲದೆ ಔಷಧಿಗೆ ಸಂಬಂಧಿಸಿದಂತೆ ವಿವರ ನೀಡುವಂತೆ ಪತಂಜಲಿ ಸಂಸ್ಥೆಗೆ ಸೂಚಿಸಿದೆ. ಪತಂಜಲಿ ಕಂಪನಿಯೂ ಕೊವಿಡ್-19 ಔಷಧಿ ಪರಿಶೀಲಿಸುವವರೆಗೆ, ಆ ಕುರಿತು ಜಾಹೀರಾತು ಮಾಡುವುದನ್ನು ನಿಲ್ಲಿಸಬೇಕು ಎಂದು ಆಯುಷ್ ಸಚಿವಾಲಯ ಆದೇಶಿಸಿದೆ.
ಈ ತಕ್ಷಣವೇ ಕೊರೊನಿಲ್' ಮತ್ತು 'ಸ್ವಸಾರಿ' ಸಂಬಂಧ ಜಾಹೀರಾತು ನಿಲ್ಲಿಸಿ. ಈ ಬಗ್ಗೆ ಕೂಲಂಕಷ ಪರಿಶೀಲಿಸುವವರೆಗೆ ಪ್ರಚಾರ ಮಾಡಕೂಡದು. ಔಷಧಿಗಳ ಸಂಯೋಜನೆ, ಅದರ ಸಂಶೋಧನೆಯ ಫಲಿತಾಂಶಗಳು, ಸಂಶೋಧನೆ ನಡೆಸಿದ ಆಸ್ಪತ್ರೆಗಳು, ಕಂಪನಿಯು ಸಾಂಸ್ಥಿಕ ನೈತಿಕ ಸಮಿತಿಯಿಂದ ಕ್ಲಿಯರೆನ್ಸ್ ಹೊಂದಿದೆಯೇ ಮತ್ತು ನೋಂದಣಿ ಮಾಡಿಕೊಂಡಿದೆಯೇ ಎಂಬಂತಹ ವಿವರಗಳನ್ನು ಒದಗಿಸುವಂತೆ ಆಯುಷ್ ಸಚಿವಾಲಯ ಪತಂಜಲಿಗೆ ಕೇಳಿದೆ.
ಕೋವಿಡ್-19 ಚಿಕಿತ್ಸೆಗಾಗಿ ಹಕ್ಕುಸ್ವಾಮ್ಯ ಪಡೆಯುತ್ತಿರುವ ಆಯುರ್ವೇದ ಔಷಧಿಗಳ ಪರವಾನಗಿ ಮತ್ತು ಉತ್ಪನ್ನ ಅನುಮೋದನೆ ವಿವರಗಳನ್ನು ಒದಗಿಸುವಂತೆ ಉತ್ತರಾಖಂಡ್ ಸರ್ಕಾರದ ರಾಜ್ಯ ಪರವಾನಗಿ ಪ್ರಾಧಿಕಾರವನ್ನು ಸಚಿವಾಲಯ ಕೇಳಿದೆ.
ಕೋವಿಡ್-19 ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿದ
ಆಯುರ್ವೇದ ಔಷಧಿಗಳ ಬಗ್ಗೆ ಪತಂಜಲಿ ಆಯುರ್ವೇದದ ಪ್ರಕಟಣೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವಾಲಯವು 'ಹೇಳಿಕೆಯು ವೈಜ್ಞಾನಿಕ ಅಧ್ಯಯನದ ಹಕ್ಕು ಮತ್ತು ವಿವರಗಳು ಸಚಿವಾಲಯಕ್ಕೆ ತಿಳಿದಿಲ್ಲ' ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವವೇ ಕೋವಿಡ್ ಲಸಿಕೆಗೆ ಎದುರು ನೋಡುತ್ತಿದೆ.
ಇದೇ ವೇಳೆಯಲ್ಲಿ ಪತಂಜಲಿ ಸಂಶೋಧನಾ ಸಂಸ್ಥೆ ಹಾಗೂ ಎನ್ಐಎಂಎಸ್ ಸಂಸ್ಥೆಗಳು ಜಂಟಿಯಾಗಿ ಪ್ರಥಮ ಆಯುರ್ವೇದಿಕ್ ಔಷಧ ಸಿದ್ಧಪಡಿಸಿವೆ. ಈ ಔಷಧಿಗಳು ದೀರ್ಘ ಸಂಶೋಧನೆಯಿಂದ ಪ್ರಾಯೋಗಿಕವಾಗಿ ತಯಾರಾಗಿವೆ 3-7 ದಿನಗಳಲ್ಲಿ ಸೋಂಕಿತರು ಗುಣಮುಖರಾಗುತ್ತಾರೆ ಎಂದು ರಾಮ್ದೇವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.