ಇಂದು ಕೊರೋನಾದ ಆತಂಕದ ಸುದ್ದಿಯ ಜೊತೆ ನಿರಾತಂಕದ ಸುದ್ದಿಯೂ ಬಂದಿದೆ..!! ಅಷ್ಟಕ್ಕೂ ಆ ಸುದ್ದಿಗಳೇನು..?
ಕೊರೋನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರಿಂದಾಗಿ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿಸಿದರೆ ಕೊರೋನಾ ಸೋಂಕಿತರು ಗುಣ ಮುಖರಾಗಗುತ್ತಿರುವವರ ಸಂಖ್ಯೆಯೂ ಕೂಡ ಹೆಚ್ಚಾಗಿರುವುದು ಈ ಆತಂಕವನ್ನು ಸ್ವಲ್ಪಕಡಿಮೆಯನ್ನು ಮಾಡಿದೆ. ಅಷ್ಟಕ್ಕೂ ಇಂದು ಕರ್ನಾಟಕದಲ್ಲಿ ದಾಖಲಾದ ಕೊರೋನಾ ಸೋಂಕು ಹಾಗೂ ಗುಣಮುಖರಾಗಿ ಬಿಡುಗಡೆಯಾದ ಮಂದಿ ಎಷ್ಟು ಗೊತ್ತಾ..?
ಆಶಾದಾಯಕ ಬೆಳವಣಿಗೆಯಲ್ಲಿ ಇಂದು ಕೊರೋನಾ ಸೋಂಕಿತರಿಗಿಂತ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆಯೇ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇಂದು 442 ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಕರೋನಾದಿಂದ ಗುಣಮುಖರಾಗಿ 559 ಮಂದಿ ಬಿಡುಗಡೆಯಾಗಿರುವುದು ವಿಶೇಷ. ಇಂದು 442 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಸಂಖ್ಯೆ 10059 ಕ್ಕೆ ಏರಿಕೆಯಾಗಿದೆ. ಇನ್ನೊಂದು ಬೆಳವಣಿಗೆಯಲ್ಲಿ ಕೊರೋನಾದಿಂದು ಇಂದು ಕೂಡಾ ರಾಜ್ಯದ ವಿವಿಧೆಡೆ 6 ಮಂದಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಕೊರೋನಾ ಕಾರಣಕ್ಕಾಗಿ ಮೃತಪಟ್ಟವರ ಸಂಖ್ಯೆ 170 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಎಂದಿನಂತೆ ಇಂದು ಕೂಡ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಮಹಾಮಾರಿ ಮತ್ತೆ ಅಬ್ಬರಿಸಿರುವುದು ಜನತೆಯಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ.
ಬೆಂಗಳೂರು ನಗರ 113, ಕಲಬುರಗಿ 35, ರಾಮನಗರ 33, ದಕ್ಷಿಣ ಕನ್ನಡ 29, ಬಳ್ಳಾರಿ 26, ಧಾರವಾಡ 26, ಮೈಸೂರು 22, ಬಾಗಲಕೋಟೆ 18, ಕೊಡಗು 18, ಉಡುಪಿ 14, ಹಾಸನ 12, ಬೆಂಗಳೂರು ಗ್ರಾಮಾಂತರ 12, ಉತ್ತರ ಕನ್ನಡ 11, ವಿಜಯಪುರ 10, ಗದಗ 10, ಹಾವೇರಿ 10, ಮಂಡ್ಯ 9, ಬೀದರ್ 8, ದಾವಣಗೆರೆ 7, ಬೆಳಗಾವಿ, ಶಿವಮೊಗ್ಗ, ಕೋಲಾರ ಜಿಲ್ಲೆಯಲ್ಲಿ ತಲಾ 4, ಯಾದಗಿರಿ 2, ಚಿಕ್ಕಬಳ್ಳಾಪುರ 2, ತುಮಕೂರು 1, ಚಿಕ್ಕಮಗಳೂರು, ಚಾಮರಾಜನಗರದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ 3, ಮೈಸೂರು, ದಕ್ಷಿಣ ಕನ್ನಡ, ಕಲಬುರಗಿಯಲ್ಲಿ ತಲಾ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಇನ್ನು ಅನ್ಯಕಾರಣಗಳಿಂದ ನಾಲ್ವರು ಮೃತಪಟ್ಟಿದ್ದಾರೆ. ಉಳಿದಂತೆ ರಾಜ್ಯದಲ್ಲಿ 160 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 112 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಾಧಾನದ ಸಂಗತಿ ಎಂದರೆ ಹೊಸ ಸೋಂಕು ಪತ್ತೆಯಾದವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆ ಅವಧಿಯಲ್ಲಿ 519 ಮಂದಿ ಗುಣಮುಖಗೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.
ಯಾದಗಿರಿಯಲ್ಲಿ 118 ಮಂದಿ ಡಿಸ್ಚಾರ್ಜ್ ಆಗಿದ್ಧಾರೆ. ಮಂಗಳೂರಿನಲ್ಲೂ ಬಿಡುಗಡೆಯಾದವರ ಸಂಖ್ಯೆ ಶತಕದ ಸಮೀಪ ಇದೆ. ಆದರೆ, ಕೊರೋನಾ ಪ್ರಕರಣ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಕೇವಲ 30 ಮಂದಿ ಮಾತ್ರ ಡಿಸ್ಚಾರ್ಜ್ ಆಗಿದ್ಧಾರೆ. ಮತ್ತೊಂದು ಆತಂಕದ ಸಂಗತಿ ಎಂದರೆ, ಐಸಿಯುನಲ್ಲಿರುವವರ ಸಂಖ್ಯೆಯೂ ಹೆಚ್ಚಾಗತ್ತಿದೆ. 160 ಜನರು ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ.