ಇವರೊಂದಿಗಿನ ಮಾತುಕತೆಯ ನಂತರ ಗಲ್ವಾನ್ ಕಣಿವೆಯಿಂದ ಹಿಂದಕ್ಕೆ ಸರಿದ ಚೀನಾ ಸೈನ್ಯ!!

Soma shekhar

ಭಾರತದದ ಗಡಿಯಾದ ಲಡಾಕ್ ಗಲ್ವಾನ್ ಕಣಿವೆಯಲ್ಲಿ ಚೀನಾದವರು ನಡೆಸಿದ್ದ ದಾಳಿಯಿಂದ ಅನೇಕ ಭಾರತೀಯ ಸೈನಿಕರು ಮೃತಪಟ್ಟಿದ್ದರು. ಇದರಿಂದಾಗಿ ಎರಡು ರಾಷ್ಟ್ರಗಳ ಮಧ್ಯ ವೈಷಮ್ಯದ ಗೋಡೆ ಬೆಳೆದು ನಿಂತಿತ್ತು. ಇದಾದ ನಂತರ ಉಭಯ ರಾಷ್ಟ್ರಗಳ ಮಧ್ಯ ಮಾತುಕತೆ ನಡೆದರೂ ಕೂಡ ಗಲ್ವಾನ್ ಕಣಿವೆಯಿಂದ ಚೀನಾ ಹಿಂದೆ ಸರಿಯಲಿಲ್ಲ. ಆದರೆ ಇವರೊಬ್ಬರ ಮಾತಿನಿಂತ ಚೀನಾ ಗಲ್ವಾನ್ ಕಣಿವೆಯಿಂದ ಹಿಂದೆ ಸರಿದಿದೆ.  ಅಷ್ಟಕ್ಕೂ ಆ ವ್ಯಕ್ತಿ ಯಾರು ಗೊತ್ತಾ..?

 

ಹೌದು ಭಾರತ ಮತ್ತು ಚೀನಾ ಸೈನಿಕರ ಸಂಘರ್ಷಕ್ಕೆ ಕಾರಣವಾಗಿದ್ದ ವಿವಾದಿತ ಗಲ್ವಾನ್ ಕಣಿವೆಯಿಂದ ಚೀನಾ ಸೇನೆ ಹಿಂದಕ್ಕೆ ಸರಿಯುವ ಮುನ್ನ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಚೀನಾ ವಿದೇಶಾಂಗ ಸಚಿವರೊಂದಿಗೆ ಚರ್ಚೆ ನಡೆಸಿದ್ದರು ಎನ್ನಲಾಗುತ್ತಿದೆ.

 

ಮೂಲಗಳ ಪ್ರಕಾರ ಅಜಿತ್ ಧೋವಲ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಭಾನುವಾರವೇ ವಿಡಿಯೊ ಕಾಲಿಂಗ್ ಮೂಲಕ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ದೋವಲ್ ಮತ್ತು ವಾಂಗ್ ಯಿ ನಡುವೆ ಮಾತುಕತೆ ನಡೆದಿತ್ತು ಎಂದು ಗಲ್ವನ್‌ ಕಣಿವೆ ಪ್ರದೇಶದ ಬಿಕ್ಕಟ್ಟಿಗೆ ಸಂಬಂಧಿಸಿದ ಮಾಹಿತಿಯುಳ್ಳ ಉನ್ನತ ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

 

ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪೂರ್ಣವಾಗಿ ಶಾಂತಿ ಸ್ಥಾಪಿಸುವ ವಿಚಾರ ಮತ್ತು ಗಲ್ವಾನ್ ಕಣಿವೆ ಸಂಘರ್ಷದಂತಹ ಘಟನೆಗಳು ಮರುಕಳಿಸದಂತೆ ಭಾರತ-ಚೀನಾ ಜೊತೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂಬುದು ಉಭಯ ನಾಯಕರ ಮಾತುಕತೆ ವೇಳೆ ಪ್ರಸ್ತಾಪವಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂತೆಯೇ ಗಡಿ ಉದ್ವಿಗ್ನತೆ ಶಮನಕ್ಕೆ ಚೀನಾ ತನ್ನ ಸೈನ್ಯವನ್ನು ಹಿಂಪಡೆಯುವುದೊಂದೇ. ಗಡಿ ತಕರಾರು ಪರಸ್ಪರ ಆದ ಒಪ್ಪಂದಗಳಿಗೆ ಧಕ್ಕೆ ತರಬಾರದು ಎಂಬ ಭಾರತದ ನಿಲುವನ್ನು ಅಜಿತ್ ಧೋವಲ್ ದೂರವಾಣಿ ಸಂಭಾಷಣೆಯಲ್ಲಿ ಪುನರುಚ್ಛಿಸಿದ್ದು, ಶಾಂತಿ ಮಾತುಕತೆಗಳಿಗೂ ಮುನ್ನ ಗಡಿಯಿಂದ ಸೈನ್ಯ ಹಿಂಪಡೆಯುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಧೋವಲ್ ಹೇಳಿದ್ದಾರೆ ಎನ್ನಲಾಗಿದೆ.

 

ಧೋವಲ್ ಮಾತಿಗೆ ಧ್ವನಿಗೂಡಿಸಿದ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ, ಗಲ್ವಾನ್ ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮಾತುಕತೆ ಬೆನ್ನಲ್ಲೇ ಗಲ್ವಾನ್‌ ಕಣಿವೆಯ ಕೆಲವು ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಚೀನಾದ ಸೈನಿಕರು ಟೆಂಟ್‌ಗಳನ್ನು ತೆರವು ಮಾಡುತ್ತಿದ್ದು, ಸೇನೆ ಅಲ್ಲಿಂದ ಹಿಂದೆ ಸರಿಯುತ್ತಿರುವುದರ ಸೂಚನೆಯಾಗಿದೆ' ಎಂದು ಸರ್ಕಾರದ ಮೂಲಗಳು ತಿಳಿಸಿದ್ದವು.

 

Find Out More:

Related Articles: