ಕೋವಿಡ್ ಔಷಧಿ ತಯಾರಿಕೆಯ ಕುರಿತು ಭಾರತದ ಬಗ್ಗೆ ಬಿಲ್ ಗೆಟ್ಸ್ ಹೇಳಿದ್ದೇನು..?

Soma shekhar

ಕೊರೋನಾ ವೈರಸ್ ಇಡೀ ವಿಶ್ವದಾಧ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದನ್ನು ತಡೆಯುವ ಉದ್ದೇಶದಿಂದ ಕೊರೋನಾ ವೈರಸ್ ಗೆ ಔಷಧಿಯನ್ನು ವಿಶ್ವದ ಹಲವು ರಾಷ್ಟ್ರಗಳು ಸಂಶೋಧನೆಯನ್ನು ನಡೆಸುತ್ತಿದೆ. ಹೀಗೆ ಸಂಶೋಧನೆಯನ್ನು ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು, ಹೀಗೆ ಅಲವು ಖಾಯಿಲೆಗಳಿಗೆ ಔಷಧಿಯನ್ನು ಸಂಶೋಧಿಸಿರುವಂತಹ ಭಾರತದ ಕುರಿತಾಗಿ ಬಿಲ್ ಗೆಟ್ಸ್ ಮಮೆಚ್ಚುಗೆಯ ,ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಬಿಲ್ ಗೆಟ್ಸ್ ಹೇಳಿದ ಮೆಚ್ಚುಗೆಯ ಮಾತು ಏನು..?

 

ಇಡೀ ವಿಶ್ವಕ್ಕೆ ಅಗತ್ಯವಾಗುವಷ್ಟು ಕೋವಿಡ್​-19 ಲಸಿಕೆಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವ ಸಾಮರ್ಥ್ಯ ಭಾರತೀಯ ಔಷಧೀಯ ಕಂಪನಿಗಳಿಗೆ ಇದೆ ಎಂದು ಮೈಕ್ರೋಸಾಫ್ಟ್​ನ ಸಹ ಸಂಸ್ಥಾಪಕ ಬಿಲ್​ ಗೇಟ್ಸ್​ ಹೇಳಿದ್ದಾರೆ.

 

ಕೋವಿಡ್‌-19: ವೈರಸ್‌ ವಿರುದ್ಧ ಭಾರತದ ಸಮರ ಕುರಿತು 'ಡಿಸ್ಕವರಿ ಪ್ಲಸ್‌'ನ ಸಾಕ್ಷ್ಯಚಿತ್ರಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ಸಾಧನೆ, ಆರೋಗ್ಯ ಬಿಕ್ಕಟ್ಟು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಶ್ಲೇಷಿಸಿದ್ದಾರೆ.

 

'ಭಾರತದಲ್ಲಿ ಹಲವು ಅತ್ಯುತ್ತಮ ಕಾರ್ಯಗಳು ನಡೆದಿವೆ. ಫಾರ್ಮಾ ಕಂಪನಿಗಳು ಸಹ ಉತ್ತಮ ಸಾಧನೆಗೈದಿದ್ದು, ಇಡೀ ಜಗತ್ತಿಗೆ ಔಷಧ ಮತ್ತು ಲಸಿಕೆ ಪೂರೈಸುತ್ತಿವೆ. ಭಾರತದಲ್ಲೇ ಅತಿ ಹೆಚ್ಚು ವಿವಿಧ ಲಸಿಕೆಗಳನ್ನು ತಯಾರಿಸುತ್ತಿರುವುದು ವಿಶೇಷವಾಗಿದೆ. ಬಯೊ ಇ, ಭಾರತ್‌ (ಬಯೊಟೆಕ್‌) ಸೇರಿದಂತೆ ಹಲವು ಕಂಪನಿಗಳು ಕೋವಿಡ್‌-19ಗೆ ಲಸಿಕೆ ಕಂಡು ಹಿಡಿಯುವಲ್ಲಿ ನಿರತವಾಗಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಭಾರತದ ಫಾರ್ಮಾ ಉದ್ಯಮ ಜಗತ್ತಿಗೆ ಲಸಿಕೆ ಪೂರೈಸಲಿವೆ ಎನ್ನುವ ಆಶಾಭಾವ ಹೊಂದಿದ್ದೇನೆ' ಎಂದು ವಿವರಿಸಿದ್ದಾರೆ.

 

ಭಾರತದಲ್ಲಿ ಹಲವು ಮುಖ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರೊನಾ ವೈರಾಣುಗೆ ಲಸಿಕೆ ಕಂಡುಹಿಡಿಯುವುದು ಸೇರಿ ಇತರೆ ಕಾಯಿಲೆಗಳಿಗೆ ಪರಿಣಾಮಕಾರಿ ಔಷಧವನ್ನು ಉತ್ಪಾದಿಸಿ, ಪೂರೈಕೆ ಮಾಡಲು ಭಾರತದ ಔಷಧೀಯ ಕೈಗಾರಿಕೆಗಳು ಸದಾ ಶ್ರಮಿಸಿ, ಸಹಕರಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಕೋವಿಡ್​-19 ಇಂಡಿಯಾಸ್​ ವಾರ್​ ಅಗೇನ್​ಸ್ಟ್​ ದ ವೈರಸ್​ ಎಂಬ ಡಿಸ್ಕವರಿ ಪ್ಲಸ್​ ಚಾನೆಲ್​ನ ಕಾರ್ಯಕ್ರಮಕ್ಕಾಗಿ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಭಾರತದ ಗಾತ್ರ ಮತ್ತು ನಗರ ಪ್ರದೇಶಗಳಲ್ಲಿನ ಜನ ಸಾಂದ್ರತೆಯಿಂದಾಗಿ ಕರೊನಾ ಸೋಂಕು ನಿಯಂತ್ರಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.

 

ಬೇರಾವುದೇ ರಾಷ್ಟ್ರಕ್ಕಿಂತಲೂ ಹೆಚ್ಚಿನ ಪ್ರಮಾಣದ ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಅವುಗಳಲ್ಲಿ ಸೆರಂ ಇನ್​ಸ್ಟಿಟ್ಯೂಟ್​ ಬಹುದೊಡ್ಡ ಸಂಸ್ಥೆಯಾಗಿದೆ. ಬಯೋ ಇ, ಭಾರತ್​ ಬಯೋಟೆಕ್​ ಸೇರಿ ಇನ್ನೂ ಹಲವು ಕಂಪನಿಗಳಿವೆ. ಕೋವಿಡ್​-19 ಲಸಿಕೆ ಸಂಶೋಧನೆಯಲ್ಲಿ ಭಾರತೀಯ ಔಷಧೀಯ ಕಂಪನಿಗಳು ಸಾಕಷ್ಟು ಶ್ರಮಿಸುತ್ತಿವೆ. ಇದಕ್ಕಾಗಿ ಅವು ಇತರೆ ಕಾಯಿಲೆಗಳಿಗೆ ರೂಪಿಸಿರುವ ಔಷಧಗಳ ಜ್ಞಾನ ಮತ್ತು ಅನುಭವವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ತಿಳಿಸಿದರು.

 

 

 

 

 

Find Out More:

Related Articles: