ಅನ್ ಲಾಕ್ 3.0 ಪ್ರಕ್ರಿಯೆಯಲ್ಲಿ ಈ ವಿಭಾಗಗಳ ಪುನರಾರಂಭಕ್ಕೆ ಇಲ್ಲ ಸರ್ಕಾರದಿಂದ ಅನುಮತಿ..!!

Soma shekhar

ಭಾರತದ ಲಾಕ್ ಡೌನ್ ನಿಂದಾಗಿ ದಿನದಿಂಧ ದಿನಕ್ಕೆ ಅನ್ ಪ್ರಕ್ರಿಯೆಗೆ ಬದಲಾಗುತ್ತಿದೆ  ಈಗಾಗಲೇ 2.0 ಅನ್ ಲಾಕ್  ಮುಗಿಯಲು ಕೆಲವೇ ದಿನಗಳು ಉಳಿದಿರುವುದರಿಂದ 3.0 ಅನ್ ಲಾಕ್ ಪ್ರಕ್ರಿಯೆ ಆರಂಭಗೊಳಳಲಾಗುತ್ತದೆ  ಈ ಅನ್ ಲಾಕ್  ಪ್ರಕ್ರಿಯೆಯಲ್ಲಿ ಕೆಲವು ಸಂಸ್ಥೆಗಳು ಕೆಲಸ ನಿರ್ವಹಿಸಲು ಅವಕಾಶವನ್ನು ಮಾಡಲಾಗಿದೆ  ಆದರೆ ಮೆಟ್ರೋ ರೈಲು ಹಾಗೂ ಶಾಲಾ ಕಾಲೇಜುಗಳ  ಪುನರಾರಂಭ ಅನುಮಾನವಾಗಿದೆ.

 

ಹೌದು ಕೊನೇ ಕ್ಷಣದಲ್ಲಿ ಸರ್ಕಾರದ ಮನಸ್ಸು ಬದಲಾಗದ ಹೊರತು ಅನ್​ಲಾಕ್​ 3.0ಯಲ್ಲೂ ಶಾಲೆ-ಕಾಲೇಜು, ಮೆಟ್ರೋ ರೈಲು ಸಂಚಾರ ಪುನರಾರಂಭಗೊಳ್ಳುವುದು ಅನುಮಾನ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಈ ವಿಷಯವಾಗಿ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಯ ಭಾಗವಾಗಿರುವ ಸರ್ಕಾರಿ ಅಧಿಕಾರಿಗಳು ಈ ವಿಷಯವನ್ನು ತಿಳಿಸಿದ್ದಾರೆ.

 

ಅನ್​ಲಾಕ್​ 2.0 ಮುಗಿಯಲು ಇನ್ನೂ ಐದು ದಿನಗಳು ಬಾಕಿ ಇವೆ. ಆದರೂ ಈಗಾಗಲೆ ಅನ್​ಲಾಕ್​ 3.0 ಕುರಿತು ಚರ್ಚೆಗಳು ಆರಂಭವಾಗಿವೆ. ಈ ಹಂತದಲ್ಲಿ ಶಾಲೆ-ಕಾಲೇಜು ತೆರೆಯಲು ಅನುಮತಿ ನೀಡಲಾಗುತ್ತದಾ… ಮೆಟ್ರೋ ರೈಲು ಸಂಚಾರ ಪುನರಾರಂಭಕ್ಕೆ ಹಸಿರುನಿಶಾನೆ ದೊರೆಯುತ್ತಾ… ಜಿಮ್​ ಮತ್ತು ಈಜುಕೊಳಗಳು ಬಾಗಿಲು ತೆರೆಯುತ್ತವಾ ಎಂಬುದು ಚರ್ಚೆಯ ಪ್ರಮುಖ ಅಂಶಗಳಾಗಿವೆ.

 

ರಾಷ್ಟ್ರದಲ್ಲಿ ಕೋವಿಡ್​-19 ಪಿಡುಗು ಜೋರಾಗುತ್ತಿರುವಂತೆ ಕೇಂದ್ರ ಸರ್ಕಾರ ಮಾರ್ಚ್​ 25ರಿಂದ ಆರಂಭವಾಗಿ ಮೇ 31ರವರೆಗೆ 68 ದಿನ ಕಟ್ಟುನಿಟ್ಟಾದ ಲಾಕ್​ಡೌನ್​ ಜಾರಿಗೊಳಿಸಿತ್ತು. ಇದಾದ ನಂತರ ಜೂನ್​ ಮತ್ತು ಜುಲೈನಲ್ಲಿ ಕ್ರಮವಾಗಿ ಅನ್​ಲಾಕ್​ 1.0 ಮತ್ತು ಅನ್​ಲಾಕ್​ 2.0 ಎಂಬ ಹೆಸರಿನಲ್ಲಿ ಸರ್ಕಾರ ಲಾಕ್​ಡೌನ್​ ಅನ್ನು ಸಡಿಲಿಸಿತ್ತು. ಈ ಅವಧಿಯಲ್ಲಿ ಸಾಕಷ್ಟು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆರ್ಥಿಕತೆ ಪುನರಾರಂಭಕ್ಕೆ ಒತ್ತುನೀಡುವ ಜತೆಗೆ ದೇಶಾದ್ಯಂತ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.

 

ಅನ್​ಲಾಕ್​ 3.0 ಅವಧಿಯಲ್ಲಿ ಶಾಲೆ-ಕಾಲೇಜು ಪುನರಾರಂಭಿಸುವ ಕುರಿತು ರಾಜ್ಯ ಸರ್ಕಾರಗಳು ಮತ್ತು ಇದಕ್ಕೆ ಸಂಬಂಧಪಟ್ಟವರ ಜತೆಗೆ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ನಿಶಾಂಕ್​ ಮಾತುಕತೆ ನಡೆಸಿದರು. ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್​ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳು, ಆನ್​ಲೈನ್​ ಅಥವಾ ಡಿಜಿಟಲ್​ ಶಿಕ್ಷಣ ಒದಗಿಸುವ ಕುರಿತು ಚರ್ಚಿಸಲಾಯಿತು. ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಪಾಲಕರ ಜತೆ ಮಾತುಕತೆ ನಡೆಸಿದಾಗ ಬಹುತೇಕ ಪಾಲಕರು ಕೋವಿಡ್​-19 ಲಸಿಕೆ ಸಿದ್ಧವಾಗದ ಹೊರತು ಶಾಲೆ-ಕಾಲೇಜು ತೆರೆಯುವುದು ಬೇಡ ಎಂದು ಹೇಳಿದ್ದಾಗಿ ಸಚಿವರು ಸಭೆಗೆ ತಿಳಿಸಿದರು ಎನ್ನಲಾಗಿದೆ.

 

ಆದಷ್ಟು ಬೇಗ ಸಹಜಸ್ಥಿತಿಗೆ ಮರಳುವಂತೆ ಮಾಡಲು ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಸಲಹೆ ಕೂಡ ಸರ್ಕಾರದ ಮಟ್ಟದ ಸಭೆಯಲ್ಲಿ ಕೇಳಿಬಂದಿತು. ಆದರೆ, ಈ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಂಚರಿಸುವುದರಿಂದ ಸೋಂಕು ತುಂಬಾ ವೇಗವಾಗಿ ಹರಡುವ ಅಪಾಯ ಇರುತ್ತದೆ ಎಂಬ ಕಾರಣಕ್ಕೆ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡದಿರಲು ನಿರ್ಧರಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

 

Find Out More:

Related Articles: