ಕೊರೋನಾ ಸೋಂಕಿನ ಪಟ್ಟಿಯಲ್ಲಿ ಭಾರತದ್ದು ಎಷ್ಟನೇ ಸ್ಥಾನ ಗೊತ್ತಾ..?

Soma shekhar

ಕೊರೋನಾ  ವೈರಸ್ ಇಂದಾಗಿ  ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿರುವಂತಹ ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 2,33,68,645 ಆಗಿದ್ದು ಸಾವಿನ ಸಂಖ್ಯೆ 8,08,379 ಆಗಿದೆ. ವರ್ಲ್ಡೊಮೀಟರ್ ಅಂಕಿಅಂಶಗಳ ಪ್ರಕಾರ 1,59,06,479 ಮಂದಿ ಚೇತರಿಸಿಕೊಂಡಿದ್ದಾರೆ.

ಅಮೆರಿಕದಲ್ಲಿ ಪ್ರಕರಣಗಳ ಸಂಖ್ಯೆ 58,41,428 ಆಗಿದ್ದು 18,01,74 ಮಂದಿ ಸಾವಿಗೀಡಾಗಿದ್ದಾರೆ. ಅದೇ ವೇಳೆ ಬ್ರೆಜಿಲ್‌ನಲ್ಲಿ 35,82,698 ಮಂದಿಗೆ ಸೋಂಕು ತಗುಲಿದ್ದು 1,14,277 ಮಂದಿ ಮೃತಪಟ್ಟಿದ್ದಾರೆ. ಅತೀ ಹೆಚ್ಚು ಸೋಂಕಿತರಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಸೋಂಕಿತರ ಸಂಖ್ಯೆ 30,43,436 ಆಗಿದ್ದು ಸಾವಿಗೀಡಾದವರ ಸಂಖ್ಯೆ 56,846 ಆಗಿದೆ. ರಷ್ಯಾದಲ್ಲಿ 95,1897, ದಕ್ಷಿಣ ಆಫ್ರಿಕಾ- 60,7045, ಪೆರು- 58,5236 ಮಂದಿ ಸೋಂಕಿತರಿದ್ದಾರೆ.


ಹದಿಹರೆಯದವರಿಗೆ ಮಾಸ್ಕ್ ಕಡ್ಡಾಯವಿಶ್ವ ಆರೋಗ್ಯ ಸಂಸ್ಥೆ


12ಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ಮಾಸ್ಕ್ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಹೊರಡಿಸಿದೆ. ಮಕ್ಕಳು ಹೇಗೆ ಕೊರೊನಾವೈರಸ್ ವಾಹಕರಾಗುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ ಹಿರಿಯರು ಹೇಗೆ ರೋಗವಾಹಕರಾಗುತ್ತಾರೋ ಅದೇ ರೀತಿ ಹದಿಹರೆಯದವರು ಕೂಡಾ ರೋಗವಾಹಕರಾಗುತ್ತಾರೆ ಎಂಬುದಕ್ಕೆ ಸಾಕ್ಷ್ಯಗಳಿವೆ ಎಂದು ಡಬ್ಲ್ಯುಎಚ್‍ಒ ಹೇಳಿದೆ. ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ನೇಪಾಳದ ಪ್ರಜೆಗಳನ್ನು ಕರೆತರಲು ಸೆಪ್ಟೆಂಬರ್ 1ರಂದು ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಪುನರಾರಂಭಿಸಲು ನೇಪಾಳ ಸರ್ಕಾರ ತೀರ್ಮಾನಿಸಿದೆ.



ಆರ್‌ಟಿ- ಪಿಸಿಆರ್ ಪರೀಕ್ಷೆಗಳನ್ನು ನಡೆಸುತ್ತಿರುವ ರಾಷ್ಟ್ರಗಳಲ್ಲಿರುವ ನೇಪಾಳದ ಪ್ರಜೆಗಳನ್ನು ಕರೆತರಲು ತೀರ್ಮಾನಿ ಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ, ಗುರುವಾರ ನಡೆದ ಸಚಿವ ಸಂಪುಟ ಸಭಯಲ್ಲಿ ಈ ತೀರ್ಮಾನ ಕೈಗೊಂಡಿದ್ದು ಪ್ರತಿದಿನ 500 ಪ್ರಜೆಗಳನ್ನು ವಾಪಸ್ ಕರೆತರಲಾಗುವುದು. 6 ತಿಂಗಳ ನಂತರ ನೇಪಾಳದಲ್ಲಿ ಅಂತರರಾಷ್ಟ್ರೀಯ ವಿಮಾನ ಸೇವೆ ಪುನರಾರಂಭಗೊಂಡಿದೆ.


ಟುನೀಶಿಯದಲ್ಲಿ 2021 ಹೊತ್ತಿಗೆ ಕೊರೊನಾವೈರಸ್ ಲಸಿಕೆ


2021ರ ಆರಂಭದಲ್ಲಿ ಕೊರೊನಾವೈರಸ್ ಲಸಿಕೆ ಸಿದ್ಧವಾಗಲಿದೆ ಎಂದು ಟುನೀಶಿಯಾ ಹೇಳಿದೆ. ದೇಶದಲ್ಲಿ ಅಭಿವೃದ್ಧಿಪಡಿಸಿರುವ ಡಿಎನ್‌ಎ ಆಧಾರಿತ ಈ ಲಸಿಕೆ ರೋಗ ಪ್ರತಿರೋಧ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಪಾಸ್ಟೆರ್ ಇನ್ಸಿಟ್ಯೂಟ್ ಆಫ್ ಟುನಿಸ್ (ಐಪಿಟಿ) ಮಹಾ ನಿರ್ದೇಶಕ ಹೆಚ್ಮಿ ಲೌಜಿರ್ ಹೇಳಿದ್ದಾರೆ.

Find Out More:

Related Articles: