ಮಂಗಳವಾರ ರಾಜ್ಯದಲ್ಲಿ ದಾಖಲಾದ ಕೊರೋನಾ ಸೋಂಕು ಎಷ್ಟು ಗೊತ್ತಾ..?

Soma shekhar
ರಾಜ್ಯದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು  ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇದುವರೆಗೂ ಏಳು ಸಾವಿರದ ಗಡಿಯಲ್ಲಿದ್ದ ಕೊರೋನಾ ಪ್ರಕರಣ ಎಂಟು ಸಾವಿರದ ಗಡಿಯನ್ನು ದಾಟಿ ಮುನ್ನುಗ್ಗುತ್ತಿದೆ.  ರಾಜ್ಯದಲ್ಲಿ ಎರಡು ದಿನಗಳಿಂದ ಇಳಿದಿದ್ದ ಕೊರೊನಾ ಗ್ರಾಫ್‌ ಮಂಗಳವಾರ ಮತ್ತೆ ಏರಿಕೆಯಾಗಿದೆ. ಒಂದೇ ದಿನ 8,161 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ಸಮೀಪಕ್ಕೆ ಬಂದು ನಿಂತಿದೆ. 6,814 ಮಂದಿ ಚೇತರಿಕೆ ಕಂಡಿದ್ದು, ಗುಣಮುಖರಾದವರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. 148 ಜನ ಸೋಂಕಿಗೆ ಬಲಿಯಾಗಿರುವುದು ಆತಂಕ ಮೂಡಿಸಿದೆ.



 

ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 2,91,826ಕ್ಕೆ ಏರಿದೆ. ಇದರಲ್ಲಿ 2,04,439 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 4,958 ಜನ ಸೋಂಕಿನ ಸಂಬಂಧ ಸಾವನ್ನಪ್ಪಿದ್ದಾರೆ. ಇನ್ನೂ 82,410 ಪ್ರಕರಣಗಳು ಸಕ್ರಿಯವಾಗಿವೆ. 751 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 
ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಮಂಗಳವಾರ 2,294 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 1,12,087ಕ್ಕೆ ಏರಿದೆ. ಇದರಲ್ಲಿ 74,901 ಜನ ಗುಣಮುಖರಾಗಿದ್ದು, 1755 ಜನ ವೈರಸ್‌ ಸಂಬಂಧಿತ ಸಾವನ್ನಪ್ಪಿದ್ದಾರೆ. ಇನ್ನೂ 35,430 ಪ್ರಕರಣಗಳು ಸಕ್ರಿಯವಾಗಿವೆ.

 

ಮೈಸೂರಿನಲ್ಲಿ 4 ದಿವಸಗಳ ಕೊರೊನಾ ಪರೀಕ್ಷಾ ವರದಿ ಮಂಗಳವಾರ ಬಂದಿದ್ದು, 1331 ಪಾಸಿಟಿವ್‌ ಪ್ರಕರಣಗಳು ಸಾಂಸ್ಕೃತಿಕ ನಗರಿಯಲ್ಲಿ ವರದಿಯಾಗಿವೆ. ಇನ್ನು, ಗಣಿ ಜಿಲ್ಲೆ ಬಳ್ಳಾರಿಯಲ್ಲೂ ಸೋಂಕಿನ ವೇಗ ಮತ್ತಷ್ಟು ಹೆಚ್ಚಿದೆ. 551 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ದಾವಣಗೆರೆ 318, ಬೆಳಗಾವಿ 298, ಶಿವಮೊಗ್ಗ 273, ದಕ್ಷಿಣ ಕನ್ನಡ 247, ಕೊಪ್ಪಳ 238, ಕಲಬುರಗಿ 227, ತುಮಕೂರು 223, ಉಡುಪಿ 217, ಹಾಸನ 205 ಹಾಗೂ ಧಾರವಾಡದಲ್ಲಿ 204 ಪ್ರಕರಣಗಳು ವರದಿಯಾಗಿವೆ.

 ಬಾಗಲಕೋಟೆಯಲ್ಲಿ 83, ಬೆಂಗಳೂರು ಗ್ರಾಮಾಂತರ 63, ಬೀದರ್‌ 61, ಚಾಮರಾಜನಗರ 17, ಚಿಕ್ಕಬಳ್ಳಾಪುರ 93, ಚಿಕ್ಕಮಗಳೂರು 88, ಚಿತ್ರದುರ್ಗ 114, ಗದಗ 175, ಹಾವೇರಿ 78, ಕೊಡಗು 08, ಕೋಲಾರ 47, ಮಂಡ್ಯ 153, ರಾಯಚೂರು 88, ರಾಮನಗರ 56, ಉತ್ತರ ಕನ್ನಡ 141, ವಿಜಯಪುರ 135 ಹಾಗೂ ಯಾದಗಿರಿಯಲ್ಲಿ 132 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

Find Out More:

Related Articles: