ಕೊರೋನಾಗೆ ಔಷಧಿ ಯಾವಾಗ ದೊರೆಯಲಿದೆ ಗೊತ್ತಾ..?
ಹೌದು ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳು ಕ್ಲಿನಿಕಲ್ ಪ್ರಯೋಗದ ಸುಧಾರಿತ ಹಂತದಲ್ಲಿವೆ,ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳು 1,2,3ನೇ ಹಂತದಲ್ಲಿ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗಿದೆ. ದೇಶದ ವಿವಿಧ ಹಂತದ ಅಭಿವೃದ್ಧಿಯಲ್ಲಿರುವ 30ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಬೆಂಬಲ ನೀಡಲಾಗಿದೆ. ಕೊವಿಡ್ 19 ರೋಗವನ್ನು ನಿಗ್ರಹಿಸಲು ಭಾರತ ಕೈಗೊಂಡ ಕ್ರಮಗಳ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡುತ್ತಿರುವಾಗ ಈ ವಿಷಯ ತಿಳಿಸಿದರು. 2021ರ ಮೊದಲ ತ್ರೈಮಾಸಿಕದ ವೇಳೆಗೆ ಕೊರೊನಾ ಲಸಿಕೆ ಸಿದ್ಧವಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಸಚಿವರ ಪ್ರಕಾರ ದೇಶದಲ್ಲಿ ನಾಲ್ಕಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸುಧಾರಿತ ಪೂರ್ವ ಕ್ಲಿನಿಕಲ್ ಅಭಿವೃದ್ಧಿ ಹಂತದಲ್ಲಿದ್ದಾರೆ. ಕೋವ್ಯಾಕ್ಸಿನ್ ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಅಭಿವೃದ್ಧಿಡಿಸುತ್ತಿದೆ. ಹಾಗೂ ಜೈಡಸ್ ಕ್ಯಾಡಿಲಾದ ಜೈಕೋವ್ ಡಿ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದೆ. ಆಕ್ಸ್ಫರ್ಡ್ ನ ಆಸ್ಟ್ರಾಜೆನೆಕಾ ಕೂಡ ಕ್ಲಿನಿಕಲ್ ಪ್ರಯೋಗದಲ್ಲಿದೆ. ದೇಶದಲ್ಲಿ 145 ಲಸಿಕೆಗಳು ಪ್ರಿ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿದೆ. 35 ಅಭ್ಯರ್ಥಿಗಳು ಕ್ಲಿನಿಕಲ್ ಪ್ರಯೋಗದಲ್ಲಿವೆ.
'2024ರವರೆಗೂ ಕೊರೊನಾ ಲಸಿಕೆಯ ಅಭಾವವಿರಲಿದೆ' ಎಂದು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ಪೂನವಾಲಾ ಹೇಳಿದ್ದಾರೆ. ಕೊವಿಡ್ 19ನಿಂದ ಜಗತ್ತನ್ನು ನಿಯಂತ್ರಿಸಲು ಕನಿಷ್ಠ ನಾಲ್ಕೈದು ವರ್ಷಗಳು ಬೇಕು. 2024ರವರೆಗೂ ಕೊರೊನಾ ಲಸಿಕೆಯ ಕೊರತೆ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಔಷಧೀಯ ಸಂಸ್ಥೆಗಳು ಇಡೀ ವಿಶ್ವದ ಜನಸಂಖ್ಯೆಗೆ ಲಸಿಕೆ ನೀಡುವಷ್ಟು ವೇಗವಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿಲ್ಲ. ಪ್ರತಿಯೊಬ್ಬರೂ ಈ ವಿಶ್ವದಲ್ಲಿ ಲಸಿಕೆಯನ್ನು ಹೊಂದಬೇಕಿದ್ದರೆ ನಾಲ್ಕರಿಂದ ಐದು ವರ್ಷಗಳು ಬೇಕಾಗಬಹುದು.ಲಸಿಕೆಯನ್ನು ದೇಶದ 1.4 ಶತಕೋಟಿ ಜನರಿಗೆ ತುಪುವಂತೆ ಮಾಡಲು ಬೇಕಾದ ಅತ್ಯಾಧುನಿಕ ಕೋಲ್ಡ್ ಚೈನ್ ಮೂಲಸೌಕರ್ಯವಿಲ್ಲ ಎಂದು ಭಾರತದಲ್ಲಿ ಲಸಿಕೆ ವಿತರಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಪೂಣೆ ಮೂಲದ ಔಷಧ ಕಂಪನಿಯೊಂದು 1.5 ಬಿಲಿಯನ್ ಪೋಲಿಯೋ ಲಸಿಕೆ ತಯಾರಿಗೆ ಮುಂದಾಗಿದೆ. 170 ದೇಶಗಳಿಗೆ ನೀಡಲಿದೆ. ಆ ಕಂಪನಿಯು ವಿವಿಧ ಐದು ಫಾರ್ಮಾ ಕಂಪನಿ ಜೊತೆ ಕೈಜೋಡಿಸಿದೆ.