ವಿಶ್ವ ಸಂಸ್ಥೆಯ 75 ವಾರ್ಷಿಕೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣದ ಅಂಶಗಳೇನು..?
ವಿಶ್ವಸಂಸ್ಥೆಯ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನ ನರೇಂದ್ರ ಮೋದಿಯವರು ಐತಿಹಾಸಿಕ ಭಾಷಣ ಮಾಡಿದ್ದು, ವಿಶ್ವಸಂಸ್ಥೆಯ ರಚನೆ, ನಂತರದ ದಿನಗಳು ಮತ್ತು ಸದ್ಯದ ಸವಾಲನ್ನು ಎದುರಿಸಲು ವಿಶ್ವಸಂಸ್ಥೆಯಲ್ಲಾಗಬೇಕಾದ ಪರಿಷ್ಕರಣೆಗಳ ಕುರಿತು ಸೂಚ್ಯವಾಗಿ ಹೇಳಿದರು
75 ವರ್ಷಗಳ ಹಿಂದೆ ಸತತ ಯುದ್ಧಗಳಿಂದ ತಲ್ಲಣಗೊಂಡ ನಂತರದಲ್ಲಿ ಜಗತ್ತಿನಲ್ಲಿ ಒಂದು ಹೊಸ ಆಶಾಕಿರಣ ಉದಯಿಸಿತು. ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕ್ಕೆ ಅನ್ವಯವಾಗುವಂತಹ ಒಂದು ಸಂಸ್ಥೆಯ ರಚನೆಯಾಯಿತು. ಯುಎನ್ ಚಾರ್ಟರ್ನ ಫೌಂಡೇಷನ್ ಸಿಗ್ನೇಟರಿಯಾಗಿ ಭಾರತವು ಕೂಡ ಒಂದು ನೋಬಲ್ ವಿಷನ್ನ ಭಾಗವಾಗಿತ್ತು. ಭಾರತದ್ದೇ ಆದ ತತ್ತ್ವಶಾಸ್ತ್ರದ ವಸುದೈವ ಕುಟುಂಬಕಂ ಪರಿಕಲ್ಪನೆಯನ್ನೇ ಇದು ಪ್ರತಿಬಿಂಬಿಸಿತ್ತು. ಸೃಷ್ಟಿಯ ಎಲ್ಲವನ್ನೂ ನಾವು ಒಂದು ಕುಟುಂಬದಂತೆ ಕಾಣುತ್ತೇವೆ.
ವಿಶ್ವಸಂಸ್ಥೆಯ ಕಾರಣದಿಂದ ಇಂದು ನಮ್ಮ ಜಗತ್ತು ಅತ್ಯುತ್ತಮವಾಗಿ ಉಳಿದಿದೆ. ವಿಶ್ವಸಂಸ್ಥೆಯ ಮಾರ್ಗದರ್ಶನದಲ್ಲಿ ಜಗತ್ತಿನ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಶ್ರಮಿಸಿದ ಎಲ್ಲರನ್ನೂ ನಾವು ಗೌರವಿಸುತ್ತೇವೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಭಾರತ ಮುಂಚೂಣಿಯ ಪಾಲುದಾರ ರಾಷ್ಟ್ರವಾಗಿದೆ. ಆದಾಗ್ಯೂ, ವಿಶ್ವಸಂಸ್ಥೆಯ ಮೂಲ ಉದ್ದೇಶಗಳಲ್ಲಿ ಇನ್ನೂ ಅನೇಕ ಅಂಶಗಳು ಪೂರ್ಣವಾಗಿಲ್ಲ. ನಾವು ಅದನ್ನೆಲ್ಲ ಅಂಗೀಕರಿಸಿಕೊಂಡು ಅವುಗಳ ಅನುಷ್ಠಾನಕ್ಕೆ ಪ್ರಯತ್ನಿಸುತ್ತ ಮುಂದಡಿ ಇರಿಸಿದ್ದೇವೆ. ಬಿಕ್ಕಟ್ಟುಗಳನ್ನು ತಡೆಯುವುದು, ಅಭಿವೃದ್ಧಿಯನ್ನು ಖಾತರಿಪಡಿಸುವುದು, ಅಸಮಾನತೆಯನ್ನು ಹೋಗಲಾಡಿಸುವುದು ಮತ್ತು ಡಿಜಿಟಲ್ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳುವುದು ಇತ್ಯಾದಿಗಳನ್ನು ಮಾಡುತ್ತಿದ್ದೇವೆ.
ಡಿಕ್ಲರೇಷನ್ ಹೇಳುವಂತೆ ವಿಶ್ವಸಂಸ್ಥೆಯಲ್ಲೂ ಸಾಕಷ್ಟು ಸುಧಾರಣೆಗಳು ಆಗಬೇಕಾಗಿವೆ. ಔಟ್ಡೇಟೆಡ್ ರಚನೆಯೊಂದಿಗೆ ಇಂದಿನ ಸವಾಲುಗಳನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ. ಸಮಗ್ರ ಸುಧಾರಣೆಯ ಹೊರತಾಗಿ ವಿಶ್ವಸಂಸ್ಥೆಯು ವಿಶ್ವಾಸ ಕೊರತೆಯ ಬಿಕ್ಕಟ್ಟನ್ನು ಎದುರಿಸಲಿದೆ. ಪರಸ್ಪರ ಜೋಡಿಕೊಂಡಿರುವ ಇಂದಿನ ಸನ್ನಿವೇಶದಲ್ಲಿ ಬಹುಪರ್ಯಾಯ ವ್ಯವಸ್ಥೆಯ ಅಗತ್ಯವಿದೆ. ಅದು ಇಂದಿನ ವಾಸ್ತವವನ್ನು ಪ್ರತಿಬಿಂಬಿಸುತ್ತದೆ.
ಎಲ್ಲ ಪಾಲುದಾರ ರಾಷ್ಟ್ರಗಳೂ ಸಮಕಾಲೀನ ಸವಾಲುಗಳ ಬಗ್ಗೆ ಚಿಂತನೆ ನಡೆಸಿ, ಜಾಗತಿಕ ಕಲ್ಯಾಣದ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಈ ವಿಷಯವಾಗಿ ಭಾರತವು ಜಗತ್ತಿನ ಇತರೆ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಉತ್ಸುಕವಾಗಿದೆ. ಪೂರ್ಣ ಭಾಷಣ ವೀಕ್ಷಿಸಲು ಮೇಲಿನ ವಿಡಿಯೋ ಕ್ಲಿಕ್ ಮಾಡಬಹುದು.