ತಿಹಾರ್ ಜೈಲಿಗೆ ಡಿ ಕೆ ಶಿವಕುಮಾರ್ ಶಿಫ್ಟ್

somashekhar
ನವದೆಹಲಿ: ದಿಲ್ಲಿಯ ಆರ್‌ಎಂಎಲ್ ಆಸ್ಪತ್ಪೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನಕಪುರ ಬಂಡೆ, ಕಾಂಗ್ರೆಸ್ ಹಿರಿಯ ನಾಯಕ ಡಿ. ಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅದ್ದರಿಂದ ಇಂದು ತಿಹಾರ್ ಜೈಲಿಗೆ ಡಿ.ಕೆ.ಶಿಯನ್ನು ಸ್ಥಳಾಂತರಿಸಲಾಗಿದೆ. ಅಧಿಕ ರಕ್ತದೊತ್ತಡ ಮತ್ತು ಅತಿಸಾರದಿಂದ ಹೊಸದಿಲ್ಲಿಯ ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದ ಕನಕಪುರ ಶಾಸಕ ಡಿ.ಕೆ ಶಿವಕುಮಾರ್ ಅವರ ಆರೋಗ್ಯ ಚೇತರಿಸಿದೆ. ಗುರುವಾರ ತಿಹಾರ್ ಜೈಲಿಗೆ ಅವರನ್ನು ಶಿಫ್ಟ್ ಮಾಡಲಾಗಿದೆ.

ಅಕ್ರಮ ಹಣ ಗಳಿಕೆ ಆರೋಪದಲ್ಲಿ ಇಡಿ ವಶದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಮತ್ತೆ 14 ದಿನಗಳ ಕಾಲ  ವಶಕ್ಕೆ ಪಡೆಯುವಂತೆ ಇ. ಡಿ ವಿಶೇಷ ನ್ಯಾಯಾಲಯ ನೀಡಲಾಗಿತ್ತು. ಆದರೆ, ಇದಕ್ಕೂ ಮುನ್ನ ಅವರು ಅನಾರೋಗ್ಯದ ಕಾರಣದಿಂದ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ಅವರ ಆರೋಗ್ಯ ಚೇತರಿಸಿದ್ದು, ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ.

ಕಳೆದ ವಾರ ಇಡಿ ಅಧಿಕಾರಿಗಳ ಸತತ ವಿಚಾರಣೆಯಿಂದ ಬಳಲಿ ಬೆಂಡಾಗಿದ್ದ ಡಿ ಕೆ ಶಿವಕುಮಾರ್ ಅವರು ಸಂಜೆ ಹೊತ್ತಿಗೆ ಸುಸ್ತಾಗಿದ್ದರು. ಇದ್ದಕ್ಕಿಂದಂತೆ ರಕ್ತದೊತ್ತಡ ಹೆಚ್ಚಾಗಿತ್ತು. ಹೀಗಾಗಿ ತೀವ್ರ ಅಸ್ಪಸ್ತಗೊಂಡ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದರು.

ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರನ್ನು ಇರಿಸಲಾಗಿರುವ ಬ್ಯಾರಕ್ ಸಂಖ್ಯೆ 7ರಲ್ಲೇ ಶಿವಕುಮಾರ್ ಅವರನ್ನು ಇರಿಸಲಾಗಿದೆ.
ಡಿಕೆ ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ, ಅಕ್ರಮ ಅಸ್ತಿ ಪತ್ತೆ ಪ್ರಕರಣ ಸಂಬಂಧ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರ ವಿಶೇಷ ನ್ಯಾಯಾಲಯ ನಡೆಸಲಿದೆ.

ಮೊನ್ನೆ ನಡೆದ ವಿಚಾರಣೆಯಲ್ಲಿ ಜಾರಿ ನಿರ್ದೇಶನಾಲಯದ ವಕೀಲರು ಆಗಮಿಸದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ಹೊಸದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಆದೇಶ ಹೊರಡಿಸಿದ್ದರು. ಪ್ರಸ್ತುತ ಡಿ. ಕೆ. ಶಿವಕುಮಾರ್ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸಬೇಕಾಗಿದೆ. 


Find Out More:

Related Articles: